ಕೋಪದಿಂದ ಕಾರಿನ ಮೇಲೆ ಧಾ ಳಿ ಮಾಡಿದ ಗೂಳಿಯ ಬಲಕ್ಕೆ ನಜ್ಜುಗುಜ್ಜಾಗಿ ಹೋಯ್ತು ಕಾರು: ವೀಡಿಯೋ ನೋಡಿ ರಿಯಲ್ ಬಾಹುಬಲಿ ಎಂದರು ನೆಟ್ಟಿಗರು
ಕೋಪ ಎನ್ನುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇನ್ನು ಕೋಪ ಬಾರದ ಮನುಷ್ಯರು ಇದ್ದಾರೆಯೇ? ಇಲ್ಲ ಎನ್ನಬಹುದು. ಎಲ್ಲರಿಗೂ ಒಂದಲ್ಲಾ ಒಂದು ಸಮಯದಲ್ಲಿ ಕೋಪ ಬಂದೇ ಇರುತ್ತದೆ. ಸಾಧು, ಸನ್ಯಾಸಿ ಅಥವಾ ಋಷಿಗಳಾದವರಿಗೂ ಕೋಪ ಬರುವುದನ್ನು ನಾನು ಕಥೆಗಳಲ್ಲಿ ಗಮನಿಸಿದ್ದೇವೆ. ಅಲ್ಲದೇ ಋಷಿಗಳ ಕೋಪಕ್ಕೆ ಪುರಾಣಗಳಲ್ಲಿ ಅದೆಷ್ಟೋ ದೇವ ದೇವಿಯರೇ ಶಾ ಪ ಕ್ಕೆ ಗುರಿಯಾದ ಪೌರಾಣಿಕ ಕಥೆಗಳನ್ನು ಕೂಡಾ ನಾವು ಕೇಳಿದ್ದೇವೆ. ಹೀಗೆ ಕೋಪ ಎಂಬುದು ಯಾರನ್ನೂ ಕೂಡಾ ಬಿಟ್ಟಿಲ್ಲ ಎಂದೇ ನಾವು ಹೇಳಬಹುದು. ಅಲ್ಲದೇ ಕೋಪವನ್ನು ಗೆದ್ದವನಿಗೆ ಶಾಂತಿ, ನೆಮ್ಮದಿ ದೊರೆಯುವುದು ಎಂದು ಹೇಳುವುದನ್ನು ಕೂಡಾ ನಾವು ಕೇಳಿದ್ದೇವೆ. ಅದನ್ನು ಗೆಲ್ಲಬೇಕೆಂದರೆ ಅದೇನು ಎನ್ನುವ ಅರಿವು ಇರಲೇಬೇಕಲ್ಲವೇ?
ಸರಿ ಸರಿ ಈಗ ಈ ವಿಷಯ ಯಾಕೆ ಎಂದು ನೀವು ಕೋಪಗೊಳ್ಳುವ ಮುನ್ನವೇ ವಿಷಯಕ್ಕೆ ಬರೋಣ. ಕೋಪ ಅನ್ನೋದು ಮನುಷ್ಯರಿಗೆ ಮಾತ್ರವೇ ಅಲ್ಲ ಪ್ರಾಣಿಗಳಿಗೂ ಕೂಡಾ ಬರುತ್ತದೆ. ವಿಚಿತ್ರ ಎಂದರೆ ಕೆಲವರು ಕೋಪ ಬಂದಾಗ ತಾವು ಮನುಷ್ಯರು ಎನ್ನುವುದನ್ನು ಮರೆತು ಪ್ರಾಣಿಗಳಂತೆ ವರ್ತಿಸುವುದನ್ನು ಕೂಡಾ ನೋಡಿರಬಹುದು ನೀವು. ಅವರು ಕೋಪ ಬಂದಾಗ ಕೈಗೆ ಸಿಕ್ಕ ವಸ್ತುಗಳನ್ನು ಎಸೆದೋ, ಒಡೆದೋ ತಮ್ಮ ಕೋಪ ತಣ್ಣಗಾಗುವವರೆಗೂ ಅರಚಿ, ಕೂಗಾಡಿ, ಹಾರಾಡಿ, ಎಗರಾಡಿ ತಮ್ಮ ಸಿ ಟ್ಟ ನ್ನು ಹೊರಹಾಕುವರು. ಕೋಪದಿಂದ ಮನುಷ್ಯ ಪ್ರಾಣಿಯಂತೆ ವರ್ಣಿಸಿದರೆ ಪ್ರಾಣಿಯ ಕೋಪ ಹೇಗಿರಬೇಕು ಅಲ್ಲವೇ?
ಹಾಗಾದರೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು ಅದರಲ್ಲಿ ಅಕ್ಷರಶಃ ಪ್ರಾಣಿಯೊಂದರ ಕೋಪ ವನ್ನು ತೋರಿಸುವ ವೀಡಿಯೋ ಇದಾಗಿದೆ. ಈ ವೀಡಿಯೋದಲ್ಲಿ ನಾವು ನೋಡಿದಾಗ ಒಂದು ಗೂಳಿಯು ಅದರ ಕೋಪವನ್ನು ಕಾರೊಂದರ ಮೇಲೆ ತೀರಿಸಿಕೊಂಡಿರುವುದನ್ನು ನಾವು ನೋಡಬಹುದಾಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಒಂದು ಕಾರಿನ ಮೇಲೆ ಗೂಳಿ ಮಾಡಿದ ಧಾ ಳಿ ನೋಡಿದಾಗ, ಇನ್ನೆಷ್ಟು ಕೋಪ ಅದಕ್ಕೆ ಇತ್ತು ಎನ್ನುವುದು ತಿಳಿಯುತ್ತದೆ. ಆ ಗೂಳಿಗೆ ಆ ಮಟ್ಟದ ಕೋಪ ಏಕೆ ಬಂದಿತೋ ತಿಳಿದಿಲ್ಲ. ಆದರೆ ಕೋಪದಿಂದ ಬಂದ ಗೂಳಿ ಕಾರ್ ಮೇಲೆ ಧಾ ಳಿ ಇಟ್ಟಿದೆ.
ಗೂಳಿಯ ಕೋಪ ಹಾಗೂ ಬಲದ ಮುಂದೆ ಆ ಲಕ್ಷಗಳ ಬೆಲೆ ಬಾಳುವ ಕಾರು ಒಂದು ತರಗೆಲೆಯಂತೆ ಕಾಣುವುದು ಕೂಡಾ ಸುಳ್ಳಲ್ಲ. ಗೂಳಿ ಕಾರನ್ನು ತನ್ನ ಕೊಂಬುಗಳಿಂದ ಚು ಚ್ಚಿದೆ , ತನ್ನ ತಲೆಯನ್ನು ಬಳಸಿ ಕಾರನ್ನು ನೂಕಿ ಹಾಕಿದೆ. ಕಾರನ್ನು ಮೇಲೆ ಎತ್ತಿ ಕೆಳಗೆ ಹಾಕಿದೆ. ಹಾಗೆ ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟರೆ ಆ ಗೂಳಿಯು ಕಾರನ್ನು ಸಂಪೂರ್ಣವಾಗಿ ಧ್ವಂ ಸ ಮಾಡಿ ಬಿಡುತ್ತಿತ್ತು. ಆದರೆ ಆ ವೇಳೆಗೆ ಒಬ್ಬಾತ ಧೈರ್ಯ ಮಾಡಿ ಅಲ್ಲಿಗೆ ಬಂದು ನೀರನ್ನು ಎರಚಿದ್ದಾರೆ ಆಗ ಗೂಳಿ ಅಲ್ಲಿಂದ ಸ್ವಲ್ಪ ಹಿಂದೆ ಹೆಜ್ಜೆ ಇಟ್ಟಿದೆ. ಇನ್ನಿಬ್ಬರು ಕಟ್ಟಿಗೆಗಳನ್ನು ಹಿಡಿದು ಬಂದಾಗ ಗೂಳಿ ಅಲ್ಲಿಂದ ದೂರ ಓಡಿದೆ. ಆದರೆ ಆ ವೇಳೆಗಾಗಲೇ ಕಾರು ಹಾಳಾಗಿತ್ತು.
ವಿಡಿಯೋ ನೋಡಿ
ಗೂಳಿಯ ಕೋ ಪ ದ ಈ ವೀಡಿಯೋವನ್ನು 32 ಲಕ್ಷ ಜನರು ನೋಡಿದ್ದು, 36 ಸಾವಿರಕ್ಕಿಂತ ಅಧಿಕ ಮಂದಿ ಲೈಕ್ಸ್ ನೀಡಿದ್ದಾರೆ. ಇನ್ನು ಸಾವಿರಕ್ಕಿಂತ ಅಧಿಕ ಜನರು ಕಾಮೆಂಟ್ ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು ಇದು ರಿಯಲ್ ಬಾಹುಬಲಿ ಎಂದಿದ್ದಾರೆ. ಕಾರು ಕಂಪನಿಗಳು ತಮ್ಮ ಕಾರುಗಳು ನಿರ್ಮಾಣ ಸಾಮರ್ಥ್ಯ ಮತ್ತು ರೇಟಿಂಗ್ ಗಾಗಿ ಈ ಬುಲ್ ಅನ್ನು ನೇಮಕ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ ಮತ್ತೊಬ್ಬರು. ನೀರು ಹಾಕಿ ಗೂಳಿಯನ್ನು ಓಡಿಸಿದ ವ್ಯಕ್ತಿಯ ಬಗ್ಗೆ ಕಾಮೆಂಟ್ ಮಾಡಿದವರೊಬ್ಬರು ಆತ ಗೂಳಿಗಿಂತ ಕೋಪದಲ್ಲಿದ್ದಾನೆ ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನೊಬ್ಬರು ಗೂಳಿಯು ಕುತ್ತಿಗೆಯ ವ್ಯಾಯಾಮ ಮಾಡುತ್ತಿದೆ ಎಂದು ಹಾಸ್ಯ ಮಾಡಿದ್ದಾರೆ.