ಕೋರೊನಾ ಸೋಂಕಿತರು ಮನೆಯಲ್ಲಿ ಕುಳಿತು ಉಪಚಾರ ಪಡೆಯಬಹುದು, ಹೊಸ ನಿಯಮಗಳನ್ನು ತಿಳಿದುಕೊಳ್ಳಿ…!

ಮುಂಬಯಿ:- ಕೋರೊನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿರುವದು ದೇಶಕ್ಕೆ ಒಂದು ದೊಡ್ಡ ಸಂಕಟವಾಗಿದೆ. ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರವು ಹೊಸ ಸೂಚನೆಗಳನ್ನು ಬಹಿರಂಗಪಡೆಸಿದೆ. ಈ ನಿಯಮಗಳು ಕೊರೊನಾದ ಪ್ರಾಥಮಿಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋರೊನಾ ಸೋಂಕಿನ ಲಕ್ಷಣ ಕಾಣಲು ಪ್ರಾರಂಭ ವಾದ ವ್ಯಕ್ತಿಗಳ ಸಲುವಾಗಿ ಅನ್ವಯಿಸುವದು. ಈ ಎರಡು ಪ್ರಕಾರದ ರೋಗಿಗಳು ತಮ್ಮ ಮನೆಯಲ್ಲೇ ಐಶೋಲೇಶನ್ ಅಂದರೆ ಬೇರೆಯಾಗಿ ಉಳಿದುಕೊಳ್ಳಲು ಸರಕಾರ ಮಾನ್ಯತೆ ನೀಡಿದೆ.

ಹೊಸ ನಿಯಮಗಳ ಪ್ರಕಾರ ಡಾಕ್ಟರ್ ಕಡೆಯಿಂದ ರೋಗಿಯ ತಪಾಸಣೆ ಮಾಡಿಕೊಂಡಿರಬೇಕು. ಕೊರೊನಾದ ಲಕ್ಷಣದ ಪೂರ್ವ ಸ್ಥಿತಿ , ಕೊರೊನಾದ ಕಡಿಮೆ ಲಕ್ಷಣ, ಮಧ್ಯಮ ಹಾಗೂ ತೀವ್ರ ಹೀಗೆ ಕೊರೊನಾದ ಹಂತ ಗಳಿವೆ. ಇವುಗಳಲ್ಲಿ ಕೊರೊನಾದ ಪೂರ್ವ ಸ್ಥಿತಿ ಹಾಗೂ ಕೊರೊನಾದ ಕಡಿಮೆ ಲಕ್ಷಣ ಹೊಂದಿದವರು ಮಾತ್ರ ಮನೆಯಲ್ಲಿ ಐಶೋಲೇಶನ್ ಮಾಡಿಕೊಳ್ಳಲು ಬರುವದು. ಆದರೆ ಮನೆಯಲ್ಲಿ 100 ಪ್ರತಿಶತ ಬೇರೆ ಬೇರೆ ಇರಲು ಸಾಧ್ಯ ವಿದ್ದರೆ ಮಾತ್ರ ಈ ಸೌಲಭ್ಯ ನೀಡಲಾಗುವದು.

ಹೊಸ ನಿಯಮಗಳನ್ನು ಹೇಗಿವೆ ನೋಡಿ…

1) ಮನೆಯಲ್ಲಿ ಯಾರಿಗೆ ಬೇರೆ ಇಡುವದಿದೆಯೋ ಅವರು ಮೊದಲು ‘ಸೆಲ್ಫ್ ಐಶಲೋಷನ್’ ಆವೇದನೆ ಪತ್ರ ತುಂಬಿ ಕೊಡುವದು ಬಂಧನ ಕಾರಿಯಾಗಿದೆ.
2) ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವದು ಅತ್ಯವಶ್ಯಕವಾಗಿದೆ.
3) ಮನೆಯಲ್ಲಿ ಐಶಲೋಷನ್ ಇಡುವ ವ್ಯಕ್ತಿಯ ಪಾಲನೆ ಮಾಡಲು ಮನೆಯಲ್ಲಿಯ ಒಬ್ಬ ವ್ಯಕ್ತಿ ಇರಬೇಕು.
4) ಈ ವ್ಯಕ್ತಿ ದಿನದ 24 ಗಂಟೆ ರೋಗಿಯ ಸಂಪರ್ಕದಲ್ಲಿರಬೇಕು.
5) ಅಲ್ಲದೆ ಮನೆಯಲ್ಲಿ ಐಶಲೋಷನ್ ಹೊಂದಿರುವ ವ್ಯಕ್ತಿ ಹಾಗೂ ಅವರ ಆರೈಕೆ ಮಾಡುವ ವ್ಯಕ್ತಿ ಇಬ್ಬರು ಸಹ ಸತತವಾಗಿ ಡಾಕ್ಟರ್ ಜೊತೆಗೆ ಸಂಪರ್ಕ ಹೊಂದಿರಬೇಕು.
6) ಐಶಲೋಷನ್ ಹೊಂದಿದ ವ್ಯಕ್ತಿ ಸರ್ವಿಲನ್ಸ್ ಅಧಿಕಾರಿಯ ಕಡೆಯಿಂದ ಸತತವಾಗಿ ತಪಾಸಣೆ ಮಾಡಿಕೊಳ್ಳುವದು ಬಂಧನ ಕಾರಿಯಾಗಿದೆ.
7) ಮನೆಯಲ್ಲಿ ಐಶೋಲೇಶನ್ ಹೊಂದಿದ ವ್ಯಕ್ತಿಯ ಆರೈಕೆ ಮಾಡುವ ವ್ಯಕ್ತಿಯು ಪ್ರೊಟೊಕಾಲ್ ಮತ್ತು ಡಾಕ್ಟರ್ ಸಲಹೆಯ ಮೇರೆಗೆ ಹಾಯಡ್ರೋಕ್ಷಿಕ್ಲೋರೋಕ್ವೀನ್ ತಗೆದುಕೊಳ್ಳಬೇಕು.