ಕೋಳಿಗಳ ಬೇಟೆಯಾಡಲು ಬೆಕ್ಕಿನ ಖತರ್ನಾಕ್ ಸ್ಟಂಟ್! ಪ್ಲಾನ್ ಎಡವಟ್ಟಾದ ದೃಶ್ಯ ನೋಡಿ ಈ ವಿಡಿಯೋದಲ್ಲಿ…
ಪ್ರತಿಯೊಂದು ಮಾಂಸಾಹಾರಿ ಪ್ರಾಣಿಗಳು ತಮ್ಮ ಭಕ್ಷ್ಯವನ್ನು ಬೇಟೆಯಾಡಿ ತಿನ್ನಲು ಅನೇಕ ರೀತಿಯ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿರುತ್ತವೆ. ಒಟ್ಟಿನಲ್ಲಿ ಏನೇ ಆಗಲಿ ಬೇಟೆ ಕೈಯಿಂದ ವಿಶೇಷವಾಗಿ ಬಾಯಿಂದ ತಪ್ಪಬಾರದು ಎನ್ನುವ ಉದ್ದೇಶ ಆ ಪ್ರಾಣಿಗಳು ಹೊಂದಿರುತ್ತವೆ. ಇದೇ ರೀತಿ ಸಧ್ಯ ಬೆಕ್ಕು ತುಂಬಾ ವಿಶೇಷವಾಗಿ ಬೇಟೆಯಾಡಲು ಯತ್ನಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಈ ವಿಡಿಯೋದಲ್ಲಿ ಬೆಕ್ಕು ಬೇಟೆಯಾಡುವ ಪ್ರಯತ್ನದಲ್ಲಿ ಎಂತಹ ರಿಸ್ಕ್ ತೆಗೆದುಕೊಂಡಿದೆ ಎಂಬುದನ್ನು ನೋಡೋಣ ಬನ್ನಿ.
ಕಂಡುಬರುವ ಈ ವಿಡಿಯೋದ ದೃಶ್ಯದಲ್ಲಿ ಬೆಕ್ಕು ಒಂದು ಎತ್ತರವಾದ ಕಟ್ಟಡದ ಮೇಲಿಂದ ಕೆಳಗೆ ಜಿಗಿಯುವ ಯತ್ನದಲ್ಲಿದೆ. ಕೆಳಗೆ ಕೆಲವು ಕೋಳಿಗಳು ತಿರುಗಾಡುತ್ತಿರುವುದನ್ನು ಬೆಕ್ಕು ಮೇಲಿಂದಲೇ ನೋಡಿ ಅವುಗಳಲ್ಲಿ ಒಂದನ್ನು ಬೇಟೆಯಾಡಬೇಕೆಂಬ ಸ್ಕೆಚ್ ಹಾಕಿದೆ. ಈ ಪ್ರಯತ್ನವನ್ನು ಕಾರ್ಯರೂಪಕ್ಕೆ ತರಲು ಬೆಕ್ಕು ನೇರ ಮೇಲಿಂದಲೇ ಜಂಪ್ ಹೊಡೆದಿದೆ. ಈ ದೃಶ್ಯ ನೋಡಲು ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಬೆಕ್ಕು ಕೆಳಗೆ ಜಿಗಿಯುವಾಗ ಒಂದು ಎಡವಟ್ಟು ಸಂಭವಿಸಿದೆ. ಅದೇನೆಂದರೆ ಮಧ್ಯದಲ್ಲಿ ಎಳೆಯಲಾದ ವಿದ್ಯುತ್ ವೈರ್ ಮೇಲೆ ಬೆಕ್ಕು ನೇರವಾಗಿ ಹೋಗಿ ಬಿದ್ದಿದೆ. ವೈರ್ ಮೇಲೆ ಬಿದ್ದ ಬೆಕ್ಕು ನಂತರ ಕೆಳಗೆ ನೆಲದ ಮೇಲೆ ಮತ್ತೊಮ್ಮೆ ಬಿದ್ದಿದೆ. ಈ ಗದ್ದಲಕ್ಕೆ ಅಲ್ಲಿದ್ದ ಕೋಳಿಗಳು ಓಡಿ ಹೋಗಲು ಯಶಸ್ವಿಯಾಗಿವೆ. ಮತ್ತು ಇಷ್ಟೊಂದು ದೊಡ್ಡ ರಿಸ್ಕ್ ತೆಗೆದುಕೊಂಡು ಬಿಲ್ಡಿಂಗ್ ಮೇಲಿಂದ ಜಿಗಿದು ಬಂದ ಬೆಕ್ಕಿಗೆ ಪಾಪ ಪೆಚ್ಚುಮೋರೆ ಹಾಕುವಂತಾಗಿದೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಎವೆರಿಥಿಂಗ್ ಗೋಸ್ ವೈಲ್ಡ್ ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ 6 ಲಕ್ಷಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ.