ಕ್ಯಾಕ್ಟಸ್ ಹೆಚ್ಚೆಂದರೆ ಎಷ್ಟು ಎತ್ತರವಾಗಿರುತ್ತೆ ಉತ್ತರ ಗೊತ್ತಾ? ಒಂದು ವೇಳೆ ಗೊತ್ತಿಲ್ಲದಿದ್ದರೆ ಸ್ವಲ್ಪ ಇಲ್ಲಿ ಕ್ಲಿಕ್ ಮಾಡಿ ನಿಜಕ್ಕೂ ಶಾಕ್ ಕಾದಿದೆ.
ನಿಸರ್ಗ ನಿಜಕ್ಕೂ ಹೆಜ್ಜೆ ಹೆಜ್ಜೆಗೆ ಅದ್ಭುತ, ಆಶ್ಚರ್ಯಗಳಿಂದ ಕೂಡಿದೆ ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಬರೀ ಅದನ್ನು ಶೋಧಿಸುವ, ಸೂಕ್ಷ್ಮತೆ ನಮ್ಮಲ್ಲಿ ಇರಬೇಕು. ಆಗ ಈ ಪ್ರಪಂಚ ಒಂದೊಂದಾಗಿ ತನ್ನ ಚಮತ್ಕಾರವನ್ನು ತೋರಿಸುತ್ತದೆ. ಮನುಷ್ಯ ಸಾಕಷ್ಟು ಪ್ರಗತಿಯನ್ನು ಸಾಧಿಸಿದರೂ ನಿಸರ್ಗದ ಗೊತ್ತಿರದ ಏನಾದರೊಂದು ಹೊಸದಾದ ಆಶ್ಚರ್ಯಕರ ಸಂಗತಿಗಳು ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಣಲು ಸಿಕ್ಕೇ ಸಿಗುತ್ತವೆ.
ಐಎಫ್ಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಧಾ ರಾಮನ್ ಅವರು ಕ್ಯಾಕ್ಟಸ್ ನ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ಫೋಟೋ ಸಹಜವಾಗಿ ನೋಡಿದಾಗ ಅದರಲ್ಲಿ ಅಂಥದ್ದೇನು ವಿಶೇಷ ಅಡಗಿದೆ ಎಂಬ ಪ್ರಶ್ನೆ ಮೂಡುವುದು. ಆದರೆ ಸ್ವಲ್ಪ ಗಮನವಿಟ್ಟು ಕೆಳಗಡೆ ನೋಡಿದಾಗ ಆ ಕ್ಯಾಕ್ಟಸ್ ಮರದ ಎತ್ತರದ ಬಗ್ಗೆ ಅರಿವಾಗುತ್ತದೆ. ಏಕೆಂದರೆ ಅಲ್ಲಿ ಮನುಷ್ಯನೊಬ್ಬ ನಿಂತಿದ್ದಾನೆ ನೋಡಿ. ಆತನು ನಿಂತಿರುವುದನ್ನು ನೋಡಿದಾಗ ಈ ಮರದ ಎತ್ತರದ ಬಗ್ಗೆ ಅರಿವಾಗುತ್ತದೆ.
No creation by the nature is supreme. Our survival depends on every little thing in this world. pic.twitter.com/7BIp861Rxu
— Sudha Ramen 🇮🇳 (@SudhaRamenIFS) January 20, 2022
ಈ ರೀತಿಯ ಕ್ಯಾಕ್ಟಸ್ ಗಳು ಅಮೆರಿಕೆಯ ಏರಿಜೋನಾದಲ್ಲಿ ಕಂಡು ಬರುತ್ತವೆ. ಈ ಕ್ಯಾಕ್ಟಸ್ ಮರದ ಉದ್ದ ಸುಮಾರು 50 ಅಡಿಯಾದರೂ ಇರಬಹುದು ಎಂಬ ಅಂದಾಜು ಇದೆ. ಮಿತ್ರರೇ ನಿಮ್ಮ ಪ್ರಕಾರ ಈ ಕ್ಯಾಕ್ಟಸ್ ಮರದ ಎತ್ತರ ಎಷ್ಟಿರಬಹುದು ಅಂತೀರಾ?