ಕ್ಯಾಚ್ ಹಿಡಿಯುವಾಗ ಮುಖದ ಮೇಲೆಯೇ ಬಿತ್ತು ಬಾಲ್! ಕೈಯಲ್ಲಿ ಬಂದವು ನಾಲ್ಕು ಹಲ್ಲುಗಳು; ಕ್ಯಾಚ್ ಏನಾಯ್ತು? ನೋಡಿ ಈ ವಿಡಿಯೋ…

ಸದ್ಯ ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್ ಲೀಗ್ ಪಂದ್ಯಗಳು ಭರ್ಜರಿಯಾಗಿ ನಡೆದಿವೆ. ಇದೇ ಸಂದರ್ಭದಲ್ಲಿ ಗಾಲೆ ಲೇಡಿಯೇಟರ್ಸ್ ತಂಡದ ನುವನೀಡು ಫರ್ನಾಂಡೊ ಅವರ ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ಚಮಿಕ ಕರುಣರತ್ನೆ ಅವರು ತಮ್ಮ ನಾಲ್ಕು ಹಲ್ಲುಗಳನ್ನೇ ಬೀಳಿಸಿಕೊಂಡಿದ್ದಾರೆ.

ಇಂಥ ದೊಡ್ಡ ಪೆಟ್ಟು ಬಿದ್ದರೂ ಕರುಣರತ್ನೆ ಅವರು ಕ್ಯಾಚ್ ಮಾತ್ರ ಕೈ ಚೆಲ್ಲಿಲ್ಲ. ತಕ್ಷಣ ಅವರಿಗೆ ಸರ್ಜರಿ ಸಲುವಾಗಿ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು. ಪ್ರಸ್ತುತ ಈ ಅನಾಹುತ ಪಂದ್ಯದ ನಾಲ್ಕನೇ ಓವರ್ ನಲ್ಲಿ ಘಟಿಸಿತು. ಹೀಗಾಗಿ ಚಮಿಕ ಅವರು ಬ್ಯಾಟಿಂಗ್ ಸಲುವಾಗಿ ಮೈದಾನದಲ್ಲಿ ಇಳಿಯಲಿಲ್ಲ. ಆದರೆ ಅವರ ತಂಡ ಮಾತ್ರ ಈ ಪಂದ್ಯದಲ್ಲಿ ಐದು ವಿಕೆಟ್ ಗಳ ಭರ್ಜರಿ ಜಯಗಳಿಸಿತು. ಪ್ರಸ್ತುತ ಈ ಆಟಗಾರ ಐಪಿಎಲ್ ನಲ್ಲಿಯೂ ಆಡುತ್ತಾರೆ ಮತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲಿಯೂ ತುಂಬಾ ಒಳ್ಳೆಯ ಪ್ರದರ್ಶನವನ್ನು ನೀಡಿದ್ದಾರೆ.

ಪಂದ್ಯದ ನಾಲ್ಕನೇ ಓವರ್ ನ ಮೊದಲ ಬಾಲ್ ಗೆ ಫರ್ನಾಂಡೋ ಅವರು ಕ್ಯಾಂಡಿ ತಂಡದ ನಾಯಕರಾದ ಕಾರ್ಲೋಸ್ ಬ್ರೆಥ್ವೆಟ್ ಗೆ ಕವರ್ ಮೇಲಿಂದ ದೊಡ್ಡ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆಗ ಚಮಿಕ ಕರುಣರತ್ನೆ ಅವರು ವಿರುದ್ಧವಾಗಿ ಓಡುತ್ತಾ ಕ್ಯಾಚ್ ಹಿಡಿಯುವ ಸಫಲ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಬಾಲ್ ನೇರವಾಗಿ ಅವರ ಬಾಯಿಯ ಮೇಲೆಯೇ ಬಿದ್ದಿದೆ. ಬಾಯಿಗೆ ಜೋರಾದ ಪೆಟ್ಟು ತಗಲಿದರೂ ಕ್ಯಾಚ್ ಮಾತ್ರ ಕೈ ಚೆಲ್ಲದೆ ಹಿಡಿದಿದ್ದಾರೆ. ಚಂಡಿನ ಪೆಟ್ಟಿಗೆ ಅವರ ನಾಲ್ಕು ಹಲ್ಲುಗಳನ್ನು ಮಾತ್ರ ಕಳೆದುಕೊಂಡಿದ್ದಾರೆ. ಶ್ರೀಲಂಕಾದ ಪತ್ರಿಕೆ ಡೈಲಿ ಮಿರರ್ ಪ್ರಕಾರ, ಚಮಿಕ ಅವರಿಗೆ ತಕ್ಷಣ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸರ್ಜರಿ ಮಾಡಲಾಯಿತು ಎಂದು ಹೇಳಲಾಗಿದೆ. ಕ್ಯಾಂಡಿ ಈ ಪಂದ್ಯವನ್ನು ಐದು ವಿಕೆಟ್ಗಳಿಂದ ಗೆದ್ದಿತು. ಗಾಲೇ ತಂಡ 121 ರನ್ ಗಳನ್ನು ಕಲೆಹಾಕಿತ್ತು. ಅದಕ್ಕೆ ಉತ್ತರವಾಗಿ ಕ್ಯಾಂಡಿ ತಂಡ 5 ವಿಕೆಟ್ ಗಳು ಬಾಕಿ ಇರುವಾಗಲೇ ಈ ಗುರಿಯನ್ನು ತಲುಪಿತು.

ನೋಡಿ ಈ ವಿಡಿಯೋ…

26 ವರ್ಷದ ಚಮಿಕ ಅವರು ಸದ್ಯ ಶ್ರೀಲಂಕಾ ತಂಡದ ಸ್ಟಾರ್ ಆಲ್ ರೌಂಡರ್ ಆಗಿದ್ದಾರೆ. ಇಲ್ಲಿಯವರೆಗೆ ಇವರು 18 ಏಕದಿನ ಮತ್ತು 38 ಟಿ 20 ಇಂಟರ್ನ್ಯಾಷನಲ್ ಪಂದ್ಯಗಳನ್ನು ಆಡಿದ್ದಾರೆ.