ಕ್ಯಾಮೆರಾದಲ್ಲಿ ಸೆರೆ ಆಗಿರದಿದ್ದರೆ ಯಾರೂ ನಂಬ್ತಿರಲಿಲ್ಲ; ಮುಳುಗುತ್ತಿರುವ ನಾಯಿಯನ್ನು ನೋಡಿ ಇನ್ನೊಂದು ನಾಯಿ ಮಾಡಿದ್ದೇನು?

ವರ್ಷಗಳು ಕಳೆದಂತೆ ನಾಗರಿಕತೆಯ ಬೆಳೆಯುತ್ತಿದೆ. ಮನುಷ್ಯ ಹಿಂದೆಂದಿಗಿಂತಲೂ ಹೆಚ್ಚು ಬದಲಾಗುತ್ತಿದ್ದಾನೆ. ಅವನು ಹೆಚ್ಚು ಹೆಚ್ಚು ಜ್ಞಾನವನ್ನು ಅರ್ಜಿಸಿಕೊಳ್ಳುತ್ತಿದ್ದಾನೆ. ಆದರೆ ಇದೇ ವೇಳೆಯಲ್ಲಿ ಆಧುನಿಕತೆಯ ಭರದಲ್ಲಿ ಸಿಲುಕಿ, ಯಶಸ್ಸನ್ನು ಪಡೆಯುವ ಧಾವಂತದಲ್ಲಿ ಮಾನವ ಜೀವನದ ಮೌಲ್ಯಗಳು ಹಾಗೂ ಬಹು ಮುಖ್ಯವಾಗಿ ಮಾನವೀಯತೆಯನ್ನೇ ಮರೆಯುತ್ತಿದ್ದಾನೆ. ತಾನಾಯಿತು, ತನ್ನ ಕುಟುಂಬವಾಯಿತು ಎನ್ನುವ ಸ್ವಾರ್ಥದಲ್ಲಿ ಬದುಕುತ್ತಿರುವ ಅದೆಷ್ಟೋ ಜನ ಸಮಾಜದಲ್ಲಿ ಇದ್ದಾರೆ. ಇವರಿಗೆ ಸಂಕಷ್ಟದಲ್ಲಿ ನಲುಗುತ್ತಿರುವ ಜನರ ಕಡೆ ನೋಡುವ ತಾಳ್ಮೆಯಾಗಲೀ, ಅವರಿಗೆ ಸಹಾಯ ಕೈಲಾದ ಸಹಾಯವನ್ನು ನೀಡುವುದಾಗಲಿ ದೂರದ ಮಾತಾಗಿದೆ.

ಮನುಷ್ಯನನ್ನು ತಪ್ಪುಗಳ ಪ್ರತಿಮೆಯೆಂದೇ ಕರೆಯಲಾಗುತ್ತದೆ. ಏಕೆಂದರೆ ಕೆಲವರು ಮಾಡಿದ ತಪ್ಪನ್ನು ತಿದ್ದಿಕೊಂಡು ಜೀವನದಲ್ಲಿ ಮುಂದುವರೆಯುವ ಕೆಲಸವನ್ನು ಮಾಡಿದರೆ, ಇನ್ನೂ ಕೆಲವರು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾ ಸಾಗುತ್ತಾರೆ. ಅವರ ಮನಸ್ಸಿನಲ್ಲಿ ಪಶ್ಚಾತ್ತಾಪದ ಭಾವನೆ ಇರುವುದಿಲ್ಲ. ಮಾನವ ಬಯಸಿದರೆ ತನ್ನ ಸುತ್ತಮುತ್ತಲಿನ ಪರಿಸರವನ್ನು ನೋಡುತ್ತಾ ಅನೇಕ ವಿಷಯಗಳನ್ನು ಕಲಿಯುವ ಅವಕಾಶವಿದೆ. ಆದರೆ ಅವನಿಗೆ ಕಲಿಯುವ ಆಸಕ್ತಿ ಇರಬೇಕಾದದ್ದು ಮುಖ್ಯ ವಿಷಯವಾಗಿದೆ. ಮನುಷ್ಯ ಅನೇಕ ಸಂದರ್ಭಗಳಲ್ಲಿ ತಾನು ಮಾಡುವ ತಪ್ಪಿನಿಂದ ಕಲಿಯುತ್ತಾನೆ. ಬೇರೆಯವರ ಕೆಲಸಗಳನ್ನು ನೋಡಿ ಕಲಿಯುತ್ತಾನೆ.

ಜನರಿಂದ ಬರುವ ಪ್ರತಿಕ್ರಿಯೆಗಳಿಂದ ಕಲಿಯುತ್ತಾನೆ. ಈಗ ಇಂಥದೇ ಒಂದು ವಿಡಿಯೋ ಹೊರ ಬಂದಿದ್ದು ಇದರಲ್ಲಿ ಎರಡು ನಾಯಿಗಳನ್ನು ನೋಡಿ ಮನುಷ್ಯ ಒಂದು ಉತ್ತಮ ವಿಷಯವನ್ನು ಕಲಿಯಲು ಸಾಧ್ಯವಿದೆ. ಈ ವಿಡಿಯೋವನ್ನು ರಾಕ್ ಚಾಪ್ಮನ್ ಎನ್ನುವವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 30 ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಸಹಸ್ರಾರು ಜನ ಮೆಚ್ಚಿದ್ದಾರೆ. ಇದೊಂದು ಸೆಕ್ಯೂರಿಟಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿರುವಂತಹ ವಿಡಿಯೋ ಆಗಿದೆ. ವಿಡಿಯೋವನ್ನು ಗಮನಿಸಿದಾಗ ಒಂದು ನಾಯಿಯು ಸ್ವಿಮ್ಮಿಂಗ್ ಪೂಲ್ ನೊಳಗೆ ಬಿದ್ದು ಹೋಗಿರುತ್ತದೆ.

ನೀರಿಗೆ ಬಿದ್ದ ಅದು ಮೇಲೆ ಬರುವ ಪ್ರಯತ್ನವನ್ನು ಮಾಡುತ್ತದೆ. ಆದರೆ ಅದರಿಂದ ಮೇಲೆ ಬರಲು ಸಾಧ್ಯ ವಾಗುವುದಿಲ್ಲ. ಸಿಮ್ಮಿಂಗ್ ಪೂಲ್ ನಲ್ಲಿ ಬಿದ್ದು ಅದು ಕಷ್ಟ ಪಡುತ್ತಿರುವುದನ್ನು ಕಂಡ ಕಪ್ಪುಬಣ್ಣದ ಲ್ಯಾಬ್ರಡಾರ್ ನಾಯಿ ಅಲ್ಲಿಗೆ ಬಂದು ನೀರಿನಿಂದ ಹೊರ ಬರಲು ಕಷ್ಟಪಡುತ್ತಿರುವ ನಾಯಿಗೆ ಸಹಾಯವನ್ನು ಮಾಡುತ್ತದೆ. ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಈ ಘಟನೆಯು ದಕ್ಷಿಣ ಆಫ್ರಿಕಾದ ಬೊಕ್ಸ್ಬರ್ಗ್ ನಗರದಿಂದ ವರದಿಯಾಗಿದೆ ಎನ್ನಲಾಗಿದೆ. ನೀರಿನಲ್ಲಿ ಬಿದ್ದಿರುವ ನಾಯಿಯನ್ನು ಕಾಪಾಡಲು ಹೋದ ಕಪ್ಪು ಬಣ್ಣದ ಲ್ಯಾಬ್ರಡಾರ್ ನಾಯಿಯ ಹೆಸರು ಜೆಸಿ ಎನ್ನಲಾಗಿದ್ದು ಸ್ವಿಮ್ಮಿಂಗ್ ಪೂಲಿನೊಳಗೆ ಬಿದ್ದ ನಾಯಿಯ ಹೆಸರು ಚಕಿ ಎನ್ನಲಾಗಿದೆ.

ವಿಡಿಯೋ ನೋಡಿ

ಜೆಸಿ ತನ್ನ ಹಲ್ಲುಗಳ ಮೂಲಕ ಚಕಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಈಜುಕೊಳದಿಂದ ಹೊರಗೆ ಎಳೆಯುವಲ್ಲಿ ಸಫಲವಾಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ಪ್ರಾಣಿಗಳನ್ನು ನೋಡಿ ಮನುಷ್ಯನು ಕಲಿಯಬೇಕಾದದ್ದು ಬಹಳಷ್ಟಿದೆ,ಒಬ್ಬರಿಗೊಬ್ಬರು ಹೇಗೆ ಸಹಕಾರವನ್ನು ನೀಡಬೇಕು ಎನ್ನುವುದನ್ನು ಈ ವಿಡಿಯೋ ನೋಡಿ ಪ್ರತಿಯೊಬ್ಬರೂ ಕಲಿಯಬೇಕು ಎಂದು ಹೇಳಿದ್ದಾರೆ. ಒಬ್ಬ ಟ್ವಿಟರ್ ಬಳಕೆದಾರರು ಅನೇಕ ಸಂದರ್ಭಗಳಲ್ಲಿ ಮನುಷ್ಯ ಮತ್ತೊಬ್ಬರೊಡನೆ ಹೇಗೆ ಬದುಕಬೇಕು ಎನ್ನುವುದನ್ನು ಪ್ರಾಣಿಗಳನ್ನು ನೋಡುವ ಮೂಲಕ ಕಲಿಯಬೇಕು ಎಂದಿದ್ದಾರೆ.