ಕ್ಯಾಮೆರಾ ಇದ್ದದ್ದು ಒಳ್ಳೆಯದಾಯ್ತು; ಇಲ್ಲಾಂದ್ರೆ ಅಕ್ಕ ಸರಿಯಾಗಿ ಆಟ ಆಡಿಸ್ತಿದ್ಲು! ನೋಡಿ ಈ ವೈರಲ್ ವಿಡಿಯೋ…
ದಿನಬೆಳಗಾದರೆ ಅನೇಕ ಅಪಘಾತದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತವೆ. ಕೆಲವೊಮ್ಮೆ ಈ ಅಪಘಾತಗಳು ದೊಡ್ಡ ಜಗಳಕ್ಕೆ ಕಾರಣವಾಗುತ್ತವೆ. ತಪ್ಪಿಲ್ಲದಿದ್ದರೂ ಕೆಲವರು ಜೋರು ಮಾಡಿ ತಪ್ಪು ಹೊರೆಸುವದರಲ್ಲಿ ತುಂಬಾ ಮುಂದಿರುತ್ತಾರೆ. ಇಂಥವರಿಗೆ ಏನೇ ಸಮಜಾಯಿಸಿ ನೀಡಿದರೂ ಸಹ ಕೇಳುವ ಮನಸ್ಥಿತಿ ಉಳ್ಳವರು ಇರುವುದಿಲ್ಲ. ಸೇಮ್ ಇದೇ ರೀತಿಯ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಹಾಗೂ ವಿಡಿಯೋದಲ್ಲಿ ಕಂಡುಬರುವ ಅಕ್ಕಳ ಜೋರು ತುಂಬಾ ಚರ್ಚೆಗೆ ಕಾರಣವಾಗಿದೆ.
ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ಇಬ್ಬರು ಸ್ಕೂಟಿ ಮೇಲೆ ಸವಾರಾಗಿ ಹೋಗುತ್ತಿದ್ದಾರೆ. ಅವರ ಹಿಂದೆ ಒಬ್ಬ ಬೈಕ್ ಸವಾರ ಫಾಲೋ ಮಾಡುತ್ತಿದ್ದಾನೆ. ಆತ ತನ್ನ ಹೆಲ್ಮೆಟ್ ಗೆ GoPro ಕ್ಯಾಮೆರಾ ಅಳವಡಿಸಿದ್ದಾನೆ. ದಾರಿಯ ಮಧ್ಯದಲ್ಲಿ ಸ್ಕೂಟಿ ಸವಾರರು ಬ್ಯಾಲೆನ್ಸ್ ತಪ್ಪಿ ಆಕಸ್ಮಿಕವಾಗಿ ಒಮ್ಮೆಲೆ ಬಿದ್ದುಬಿಡುತ್ತಾರೆ. ಅವರು ಬಿದ್ದದ್ದನ್ನು ನೋಡಿ ಹಿಂದಿನ ಬೈಕ್ ಸವಾರ ಒಮ್ಮೆಲೆ ಅವರ ಹಿಂದೆ ತನ್ನ ಬೈಕ್ ಸಹ ನಿಲ್ಲಿಸಿ ಬಿಡುತ್ತಾನೆ.
ಆತ ತನ್ನ ಬೈಕ್ ನಿಲ್ಲಿಸಿದ ನಂತರ ಹಠಾತ್ ಅಲ್ಲಿ ಒಂದು ಇನ್ಸಿಡೆಂಟ್ ನಡೆದು ಹೋಗುತ್ತದೆ. ಅದೇನಂದರೆ ಸ್ಕೂಟಿಯಿಂದ ಬಿದ್ದ ಹಿಂದಿನ ಯುವತಿಯು ನೇರ ಬೈಕ್ ಸವಾರನಿಗೆ ಪ್ರಶ್ನೆ ಮಾಡುತ್ತಾಳೆ, ಏನು ನಿನಗೆ ಕಣ್ಣು ಕಾಣಿಸುತ್ತಿಲ್ಲವೇ? ಎಂದಾಗ ನನ್ನ ಬೈಕ್ ನಿಮ್ಮ ವಾಹನಕ್ಕೆ ಟಚ್ ಮಾಡೇ ಇಲ್ಲ ಎನ್ನುತ್ತಾನೆ ಬೈಕ್ ಸವಾರ. ಆಗ ಯುವತಿ ನೀನು ಟಚ್ ಮಾಡದೇನೆ ನಾವು ಅದ್ಹೇಗೆ ರಸ್ತೆಯಲ್ಲಿ ಬೀಳಲು ಸಾಧ್ಯ ಎಂದು ಮೊಂಡವಾದ ಹಾಕಲು ಶುರು ಮಾಡುತ್ತಾಳೆ. ಆಗ ಬೈಕ್ ಸವಾರ ಸ್ವಲ್ಪ ತಡೆಯಿರಿ ನಾನು ನಿಮಗೆ ವೀಡಿಯೊವನ್ನೇ ತೋರಿಸುತ್ತೇನೆ ಎಂದು ಬೈಕ್ ಸವಾರ ಹೇಳುತ್ತಾನೆ.
ವಿಡಿಯೋ ನೋಡಿ
वो तो कैमरा था नहीं तो दीदी तो अपना खेल खेल चुकी थी 😂🙏 pic.twitter.com/lvUyvUsgxU
— Rofl_Baba (@aflatoon391) June 19, 2022
ಜನ ಈ ರೀತಿ ಇದ್ದಾರೆ. ತಮ್ಮ ತಪ್ಪಿನಿಂದ ಬಿದ್ದರೂ ಥಟ್ಟನೆ ಇನ್ನೊಬ್ಬರ ಮೇಲೆ ಹಾಕಲು ಪರದಾಡುತ್ತಾರೆ. ಇಲ್ಲಿ ಆದದ್ದೂ ಇದೇನೆ. ಪ್ರಸ್ತುತ ವಿಡಿಯೋವನ್ನು Rofl_Baba ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋ ಇಲ್ಲಿಯವರೆಗೆ 1.3 ಮಿಲಿಯನ್ ವೀಕ್ಷಣೆ ಪಡೆದಿದೆ.