ಕ್ರಿಕೆಟರ್ಸ್ ಗಳಿಗಿಂತಲೂ ಅಧಿಕ ಗಳಿಸುತ್ತಾರೆ ಪಿ.ವಿ.ಸಿಂಧು: ಅವರ ವಾರ್ಷಿಕ ಆದಾಯ ನೋಡಿದರೆ ಬೆಚ್ಚಿ ಬೀಳೋದು ಖಚಿತ

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಒಲಂಪಿಕ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು. ಇದಕ್ಕೂ ಮೊದಲು 2016 ರ ರಿಯೋ ಒಲಂಪಿಕ್ ನಲ್ಲಿ ರಜತವನ್ನು ಗೆದ್ದಿದ್ದರು. ಸಿಂಧು ಅವರು ಸತತ ಎರಡು ಒಲಂಪಿಕ್ ಗಳಲ್ಲಿ ಪದಕ ಗೆಲ್ಲುವ ಭಾರತದ ಮೊದಲ ಮಹಿಳೆಯಾಗಿದ್ದಾರೆ.

ಇತ್ತಿತ್ತಲಾಗಿ ಕ್ರಿಕೆಟ್ ಹೊರತಾಗಿ ಬೇರೆ ಆಟದಲ್ಲಿ ಮಿಂಚುತ್ತಿರುವ ಆಟಗಾರರನ್ನು ಸಹ ದೊಡ್ಡ ದೊಡ್ಡ ಕಂಪನಿ ಬ್ರ್ಯಾಂಡ್ ಗಳು ತಮ್ಮ ಜಾಹೀರಾತಿಗಾಗಿ ಸೆಳೆದು ಕೊಳ್ಳುತ್ತಿದ್ದಾರೆ. ಅವರಲ್ಲಿಯೇ ಸಿಂಧು ಒಬ್ಬರಾಗಿದ್ದಾರೆ.

ಬೇರೆ ಆಟಗಳ ಆಟಗಾರರಲ್ಲಿ ಪಿ.ವಿ. ಸಿಂಧು ಅತಿ ಹೆಚ್ಚು ಗಳಿಕೆಯ ಭಾರತೀಯ ಆಟಗಾರ್ತಿಯಾಗಿದ್ದಾರೆ ಎಂದರೆ ತಪ್ಪಿಲ್ಲ. ಅವರು ಸದ್ಯಕ್ಕೆ ಅನೇಕ ಕಂಪನಿಗಳ ಜಾಹೀರಾತನ್ನು ಮಾಡುತ್ತಿದ್ದಾರೆ. ಈಗಂತೂ ಮತ್ತೆ ಒಲಂಪಿಕ್ ನಲ್ಲಿ ಪದಕದ ಬೇಟೆ ಯಾಡಿದ್ದರಿಂದ ಜಾಹೀರಾತಿಗಾಗಿ ಮತ್ತೆ ಹೊಸ ಹೊಸ ಕಂಪನಿಗಳ ಪ್ರವಾಹ ಅವರೆಡೆಗೆ ಹರಿಯುವದರಲ್ಲಿ ಸಂಶಯವಿಲ್ಲ.

ಕಳೆದ ವರ್ಷ ಸಿಂಧು ಅವರ ನೆಟ್ ವರ್ಥ್ ಒಟ್ಟು 72 ಕೋಟಿಯಷ್ಟು ಇತ್ತು. 2018 ಮತ್ತು 19 ರಲ್ಲಿ ಫೋರ್ಬ್ಸ್ ಜಾಹೀರು ಮಾಡಿದ ಜಗತ್ತಿನ ಅತೀ ಹೆಚ್ಚು ಗಳಿಕೆ ಮಾಡುವ ಮಹಿಳಾ ಆಟಗಾರರಲ್ಲಿ ಪಿ ವಿ ಸಿಂಧು ಅವರು ಸ್ಥಾನ ಪಡೆದಿದ್ದರು.

2018 ರಲ್ಲಿ ಇವರ ನೆಟ್ ವರ್ಥ್ 60 ಕೋಟಿ ಇದ್ದು 2019 ರಲ್ಲಿ ಅದು ಇಳಿದು 40 ಕೋಟಿಗೆ ಬಂದಿತ್ತು. ಈ ಒಂದು ವರ್ಷದಲ್ಲಿ ಅವರ ಗಳಿಕೆಯಲ್ಲಿ ಸ್ವಲ್ಪ ಕಡಿಮೆ ಕಂಡು ಬಂದರೂ ಈಗ ಮತ್ತೆ ಫೀನಿಕ್ಸ್ ಜಿಗಿತ ಹೊಡೆಯುವುದರಲ್ಲಿ ಸಂಶಯವಿಲ್ಲ.

2019 ರಲ್ಲಿ ಚೈನಾದ ಲಿ ನಿಂಗ್ ಬ್ರ್ಯಾಂಡ್ ಜೊತೆಗೆ 50 ಕೋಟಿ ರೂಪಾಯಿಗಳಿಗೆ ನಾಲ್ಕು ವರ್ಷಗಳ ಕರಾರು ಮಾಡಿದ್ದರು. ಇದು ಬ್ಯಾಡ್ಮಿಂಟನ್ ಆಟದಲ್ಲಿಯ ಎಲ್ಲಕ್ಕೂ ದೊಡ್ಡ ವೈಯಕ್ತಿಕ ಕರಾರಾಗಿತ್ತು. ಇದರಲ್ಲಿಯ 40 ಕೋಟಿ ರೂಪಾಯಿಗಳು ಪ್ರಾಯೋಜಕತ್ವಕ್ಕೆ ಮತ್ತು 10 ಕೋಟಿ ರೂಪಾಯಿಗಳು ಉಪಕರಣಗಳ ಸಲುವಾಗಿ ಇತ್ತು.

ಇದಕ್ಕೂ ಮುನ್ನ ಸಿಂಧೂ 2016 ರಿಂದ 2018 ರ ವರೆಗೆ 35 ಕೋಟಿ ರೂಪಾಯಿಗಳ ಕರಾರಿಗೆ ಸಹಿ ಮಾಡಿದ್ದರು. ಈಗ ಸಿಂಧು ಅವರು ಒಲಂಪಿಕ್ ನಲ್ಲಿ ಕಂಚು ಗೆದ್ದ ನಂತರ ಅವರ ಮಾಡಿಕೊಳ್ಳುವ ಮುಂದಿನ ಕರಾರಿನ ಹಣದಲ್ಲಿ ಸಹಜವಾಗಿಯೇ ಹೆಚ್ಚಾಗುತ್ತದೆ.

ಸದ್ಯದ ಸಮಯದಲ್ಲಿ ಸಿಂಧುಳ ಕಡೆಗೆ 13 ಕ್ಕಿಂತ ಹೆಚ್ಚು ದೊಡ್ಡ ಹಾಗೂ ಹೆಸರಾಂತ ಬ್ರಾಂಡ್ ಗಳು ಇವೆ. ಇವುಗಳಿಗಾಗಿ ಅವರು ಜಾಹೀರಾತನ್ನು ಮಾಡುತ್ತಾರೆ. ಸಿಂಧು ಜೇಬಿಎಲ್, ಬ್ರಿಡ್ಜ್ ಸ್ಟೋನ್ ಟೈರ್ಸ್, ಬ್ಯಾಂಕ್ ಆಫ್ ಇಂಡಿಯಾ, ಗೆಟೋರೆಡ್, ಮೂವ್, ಮಿಂತ್ರಾ, ಫ್ಲಿಪ್ ಕಾರ್ಟ್, ನೋಕಿಯಾ, ಪ್ಯಾನಸೋನಿಕ್, ಸ್ಟೆಫ್ರೀ ಹೀಗೆ ಅನೇಕ ಬ್ರಾಂಡ್ ಗಳ ಸಮಾವೇಶವಿದೆ.

ಪಿವಿ ಸಿಂಧು ತಮ್ಮ ಪ್ರತಿ ಜಾಹೀರಾತಿಗಾಗಿ 1.5 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಇದರ ಮೇಲಿಂದಲೇ ಅವರ ವಾರ್ಷಿಕ ಉತ್ಪನ್ನ ಎಷ್ಟೆಂದು ತಿಳಿದು ಬರುತ್ತದೆ. ರಿಪೋರ್ಟ್ ಪ್ರಕಾರ ಬರೀ ವಾರ ಒಂದಕ್ಕೆ ಇವರ ಗಳಿಕೆ ಕೋಟಿಗೆ ಸ್ವಲ್ಪವೇ ಕಡಿಮೆ ಇದೆ ಎಂದು ಹೇಳಲಾಗಿದೆ. paycheck.in ಪ್ರಕಾರ ಪಿ ವಿ ಸಿಂಧು ಅವರ ವಾರ್ಷಿಕ ಉತ್ಪನ್ನ 45 ಕೋಟಿ ರೂಪಾಯಿಗಳಿಗೂ ಮೇಲ್ಪಟ್ಟಿದೆ.