ಕ್ರಿಕೆಟ್ ಜಗತ್ತಿಗೆ ಆಘಾತ!ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಇನ್ನು ನೆನಪು ಮಾತ್ರ!
ಕ್ರಿಕೆಟ್ ಜಗತ್ತಿನ ಅದ್ಭುತ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ತೀರಿಕೊಂಡ ಸುದ್ದಿ ಕ್ರಿಕೆಟ್ ರಸಿಕರಿಗೆ ಶಾಕ್ ಹೊಡೆದಂತಾಗಿದೆ.
ಫಾಕ್ಸ್ ನ್ಯೂಸ್ ನೀಡಿದ ರಿಪೋರ್ಟ್ ಪ್ರಕಾರ, ಶೇನ್ ವಾರ್ನ್ ಅವರು ಥೈಲ್ಯಾಂಡಿನ ತಮ್ಮ ವಿಲಾದಲ್ಲಿ ಮೂರ್ಚಿತಾವಸ್ಥೆಯಲ್ಲಿ ಕಂಡುಬಂದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಪ್ರಾಥಮಿಕ ತಪಾಸಣೆಯಲ್ಲಿ ಹಾರ್ಟ್ ಅಟ್ಯಾಕ್ ಆಗಿರುವ ಸಾಧ್ಯತೆಯನ್ನು ಡಾಕ್ಟರ್ಗಳು ವರ್ತಿಸಿದ್ದಾರೆ.
ಶೇನ್ ವಾರ್ನ್ ಅವರ ಜೀವನ ತುಂಬಾ ಚರ್ಚೆಯಿಂದ ಕೂಡಿತ್ತು. ತಮ್ಮ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಒಟ್ಟು 145 ಪಂದ್ಯಗಳನ್ನು ಆಡಿ ಒಟ್ಟು 708 ವಿಕೆಟ್ಗಳನ್ನು ಕಬಳಿಸಿದ್ದರು. ಹಾಗೂ ಏಕದಿನ ಪಂದ್ಯಗಳಲ್ಲಿ 194 ಪಂದ್ಯಗಳ ಪ್ರತಿನಿಧಿತ್ವ ಮಾಡಿ 293 ವಿಕೆಟ್ಗಳನ್ನು ಪಡೆದಿದ್ದರು. ಟೆಸ್ಟ್ನಲ್ಲಿ 71 ರನ್ ಗಳಿಗೆ 8 ವಿಕೆಟ್ ಪಡೆದಿದ್ದು ಅತ್ಯುಚ್ಚ ದಾಖಲೆಯಾಗಿತ್ತು.