ಕ್ರೀಸ್ ಗೆ ಬಂದು ಗಾರ್ಡ್ ತೆಗೆದುಕೊಳ್ಳಲುತ್ತಲೇ ಬ್ಯಾಟ್ಸ್ ಮನ್ ಆಡಿದನು ಮೈಂಡ್ ಗೇಮ್! ಬೌಲರ್, ಫೀಲ್ಡರ್ ಜೊತೆಗೆ ಅಂಪಾಯರ್ ಸಹ ಪಾಜ್; ಬ್ಯಾಟ್ಸ್ ಮನ್ ರೈಟೋ? ಲೆಫ್ಟ್?
ಕ್ರಿಕೆಟ್ ಆಟ ಇದು ತುಂಬಾ ಅನಿಶ್ಚಿತತೆಯ ಆಟವಾಗಿದೆ. ಈ ಪಂದ್ಯದಲ್ಲಿ ಯಾವಾಗ, ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಅನೇಕ ಸಲ ಈ ಆಟದಲ್ಲಿ ತುಂಬಾ ತಮಾಷೆಯ ಘಟನೆಗಳು ಸಹ ನಡೆಯುತ್ತವೆ. ಸದ್ಯ MCA ಟಿ20 ಕ್ಲಬ್ ಇನ್ವಿಟೇಶನ್ ಸ್ಪರ್ಧೆಯ 8 ನೇಯ ಪಂದ್ಯದಲ್ಲಿ ತಮಾಷೆ ಘಟನೆಯೊಂದು ನಡೆಯಿತು. ಮೀಡಿಯಾದಲ್ಲಿ ಸದ್ಯ ಇದರದೇ ಚರ್ಚೆ ನಡೆಯುತ್ತಿದೆ. KL stars vs Royal warriors ಈ ಎರಡು ತಂಡಗಳ ನಡುವೆ ನಡೆದ ಘಟನೆಯಿದೆ.
ವಾರಿಯರ್ಸ್ ತಂಡವು ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡುತ್ತಿರುವಾಗ ಅವರ ಓಪನರ್ ಬ್ಯಾಟ್ಸಮನ್ ಸೈಯದ್ ಅಜೀಜ್ ಬೇಗನೆ ಪೆವಿಲಿಯನ್ ಗೆ ಮರಳಿದರು. 16 ರನ್ ಗಳಿಗೆ ಒಂದು ವಿಕೆಟ್ ಬಿದ್ದಿರುವಾಗ ಹರಿಂದರ್ ಜಿತ್ ಸೆಖಾನ್ ಬ್ಯಾಟಿಂಗ್ ಗೆ ಬಂದರು. ಹರಿಂದರ್ ಜೀತ್ ಗಾರ್ಡ್ ತೆಗೆದುಕೊಳ್ಳುವಾಗ ಬೌಲರ್ ಸಂತೋಷ್ ಅವರು ಫೀಲ್ಡಿಂಗ್ ನಲ್ಲಿ ಬದಲಾವಣೆಯನ್ನು ಮಾಡುತ್ತಾ ಆಪ್ ಸೈಡ್ನಲ್ಲಿ ಎರಡು ಪ್ಲೇಯರ್ ಗಳನ್ನು ನಿಲ್ಲಿಸಿದರು. ಬ್ಯಾಟ್ಸ್ಮನ್ ಲೆಫ್ಟ್ ಹ್ಯಾಂಡ್ ಇರಬಹುದೆಂದು ಬೌಲರ್ ಗೆ ಎನಿಸಿತ್ತು.
ನೋಡಿ ಈ ವಿಡಿಯೋ…
Never seen anything like this before in all my years of cricket 🤣🤣
Just wait for it..🤣 pic.twitter.com/HOO82voD5y— Harinder Sekhon (@harinsekhon9) March 21, 2022
ಆದರೆ ಬ್ಯಾಟ್ಸ್ಮನ್ ನಂತರ ತನ್ನ ಪೋಸಿಶನ್ ಚೇಂಜ್ ಮಾಡಿ ರೈಟ್ ಹ್ಯಾಂಡ್ ಸ್ಟೈಲ್ ನಲ್ಲಿ ನಿಂತನು. ಆಗ ಒಮ್ಮೆಲೆ ಬೌಲರ್, ಫೀಲ್ಡರ್ಸ್ ಜೊತೆಗೆ ಅಂಪಾಯರ್ ಸಹ ಗೊಂದಲದಲ್ಲಿ ಬಿದ್ದು ಬೌಲರ್ ಮತ್ತೆ ಫೀಲ್ಡಿಂಗ್ ಪೋಸಿಶನ್ ಚೇಂಜ್ ಮಾಡುವ ಸೂಚನೆಯನ್ನು ಕೊಟ್ಟನು. ಪ್ರಸ್ತುತ ವಿಡಿಯೋವನ್ನು ಸ್ವತಃ ಬ್ಯಾಟ್ಸ್ಮನ್ ಹರಿಂದರ್ ಜಿತ್ ಸೇಖಾನ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.