ಖಂಡಿತ ಒಂದ ದಿನ ಏಲಿಯನ್ ಗಳ ಸಂಪರ್ಕ ಸಿಗಲಿದೆ, ಬ್ರಹ್ಮಾಂಡದಲ್ಲಿ ಏಲಿಯನ್ ಗಳ ಅಸ್ತಿತ್ವದ ಬಗ್ಗೆ ನಾಸಾದ ಮುಖ್ಯಸ್ಥರ ಮಾತು

ಈ ಬ್ರಹ್ಮಾಂಡದಲ್ಲಿ ಮನುಷ್ಯರು ಮಾತ್ರವೇ ಸುಸಂಸ್ಕೃತ ಹಾಗೂ ಬುದ್ಧಿವಂತ ಜೀವಿಗಳಲ್ಲ ಎಂದು ಮಾಜಿ ಗಗನಯಾತ್ರಿ ಮತ್ತು ನಾಸಾದ ಮುಖ್ಯಸ್ಥರಾಗಿರುವ ಬಿಲ್ ನೆಲ್ಸನ್ ಅವರು ಹೇಳಿದ್ದಾರೆ. ಮನುಷ್ಯರಿಗಿಂತ ಹೆಚ್ಚಾಗಿ ಬುದ್ಧಿಶಕ್ತಿಯನ್ನು ಉಳ್ಳಂತಹ ಜೀವಿಗಳು ಈ ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲಿರುವ ಸಂಭವವಿದೆ, ಅವುಗಳನ್ನು ನಾವು ಇಂಟಲಿಜೆಂಟ್ ಲೈಫ್ ಎಂದು ಕರೆಯುತ್ತೇವೆ. ಅಂದರೆ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಏಲಿಯನ್ಸ್ ಎಂದು ಕರೆಯಬಹುದು. ಮನುಷ್ಯ ಒಂದು ದಿನ ಖಂಡಿತವಾಗಿಯೂ ಏಲಿಯನ್ ಗಳನ್ನು ಭೇಟಿ ಮಾಡುವನು ಎಂದು ಅವರು ಹೇಳಿದ್ದಾರೆ. ಪೆಂಟಗನ್ ಏಲಿಯನ್ ವಾಹನಗಳ ಕುರಿತಾಗಿ ನೀಡಿರುವಂತಹ ವರದಿಯು ಬಂದ ಕೆಲವೇ ವಾರಗಳನಂತರ ಬಿಲ್ ನೆಲ್ಸನ್ ಅವರು ನೀಡಿರುವ ಹೇಳಿಕೆಗಳು ಹೊರಬಂದಿದೆ.

ಪೆಂಟಗನ್ ನ ವರದಿಯಲ್ಲಿ ಏಲಿಯನ್ ವಾಹನಗಳನ್ನು ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಬೆನ್ನಲ್ಲೇ, ನಾಸಾದ ಮುಖ್ಯಸ್ಥರು ಏಲಿಯನ್ ಗಳ ಅಸ್ತಿತ್ವದ ಕುರಿತಾಗಿ ನೀಡಿರುವ ಹೇಳಿಕೆ ಬಹಳ ಗಮನಸೆಳೆದಿದೆ. ಬಿಲ್ ನೆಲ್ಸನ್ ಅವರು ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಬ್ರಹ್ಮಾಂಡದ ಯಾವುದೋ ಒಂದು ಮೂಲೆಯಲ್ಲಿ ಬೇರೆ ಜಗತ್ತಿನ ಜೀವಿಗಳು ಇದ್ದಾರೆ. ಭೂಮಿಯನ್ನು ಹೊರತು ಪಡಿಸಿ ಅನ್ಯ ಗ್ರಹಗಳಲ್ಲಿ ಸಹ ಬುದ್ಧಿವಂತ ಜೀವನ ಖಂಡಿತವಾಗಿಯೂ ಇರಲು ಸಾಧ್ಯವಿದೆ. ನಾಸಾ ನಿರಂತರವಾಗಿ ಇಂತಹ ವಿಷಯಗಳ ಮೇಲೆ ತನ್ನ ಗಮನವನ್ನು ಇರಿಸಿದೆ.

ನಾಸಾ ಅನ್ಯಗ್ರಹ ವಾಸಿಗಳು, ಅವರ ವಾಹನಗಳು, ಅವುಗಳ ಸಂಕೇತ, ಅಂತರಿಕ್ಷದಿಂದ ಬರುವಂತಹ ಸಂದೇಶಗಳು ಹಾಗೂ ಇನ್ನಿತರೆ ವಿಷಯಗಳ ಮೇಲೆ ಬಹಳ ನಿಗಾ ಇಟ್ಟಿದೆ ಎಂದು ಹೇಳಿದ್ದಾರೆ.ನಿಮ್ಮ ಮುಂದೆ 13.5 ಶತಕೋಟಿ ವರ್ಷಗಳಷ್ಟು ಹಳೆಯದಾದ ಬ್ರಹ್ಮಾಂಡವು ಇದೆ ಎನ್ನುವುದಾದರೆ, ಈ ಬ್ರಹ್ಮಾಂಡದಲ್ಲಿ ಮತ್ತೊಂದು ಸೂರ್ಯ ಖಂಡಿತವಾಗಿ ಇರುವ ಸಾಧ್ಯತೆ ಇದೆ. ನಮ್ಮ ಭೂಮಿಯಂತಹ ಇನ್ನೊಂದು ಗ್ರಹ ಇರುತ್ತದೆ. ನಮ್ಮಂತಹ ವಾತಾವರಣವೂ ಇರುತ್ತದೆ. ಅಂತಹ ಬುದ್ಧಿವಂತ ಜೀವಗಳಿಂದ ಒಂದು ಸಂದೇಶದ ನಾವು ನಿರೀಕ್ಷೆಯಲ್ಲಿದ್ದೇವೆ. ಒಂದಲ್ಲ ಒಂದು ದಿನ ಅವರೊಂದಿಗೆ ಸಂಪರ್ಕ ಸಿಕ್ಕೇ ಸಿಗುತ್ತದೆ. ಅಲ್ಲದೇ ಆ ಸಂಬಂಧವು ಬಹಳ ದೀರ್ಘಕಾಲದವರೆಗೂ ಮುಂದುವರೆಯಲಿದೆ ಎಂದು ಬಿಲ್ ನೆಲ್ಸನ್ ಅವರು ಹೇಳಿದ್ದಾರೆ.

ಅಮೇರಿಕಾದ ನಾಸಾ ಬಾಹ್ಯಾಕಾಶ ಸಂಸ್ಥೆಯು ನಮ್ಮ ಸೌರಮಂಡಲ ಹಾಗೂ ಅದರಾಚೆಗಿನ ಗ್ರಹಗಳು ಮತ್ತು ನಕ್ಷತ್ರಗಳಲ್ಲಿ ಬುದ್ಧಿವಂತ ಜೀವನದ ಅಸ್ತಿತ್ವವನ್ನು ಕಂಡುಹಿಡಿಯಲು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ. ಅದು ಮಾತ್ರವೇ ಅಲ್ಲದೆ ನಾಸಾ ಅನ್ಯ ಸೂರ್ಯ ಗಳನ್ನು ಮತ್ತು ವಾಸ್ತವ ಯೋಗ್ಯವಾದ ಗ್ರಹಗಳನ್ನು ಸಹ ಹುಡುಕುತ್ತಿದೆ. ಜುಲೈ ಐದರ ಸೋಮವಾರ ನಾಸಾದ ಇಂಜಿನ್ಯಟಿ ಹೆಲಿಕ್ಯಾಪ್ಟರ್ ಮಂಗಳದ ಮೇಲೆ ತನ್ನ 9ನೇ ಹಾರಾಟವನ್ನು ನಡೆಸಿದ್ದು, ಇದನ್ನು ಅತಿ ಉದ್ದವಾದ, ಅತಿ ವೇಗವಾದ ಹಾಗೂ ಅತಿ ಹೆಚ್ಚು ದೂರದ ಹಾರಾಟ ಎಂದು ಹೇಳಲಾಗಿದೆ. ಈ ಹೆಲಿಕಾಪ್ಟರ್ ಪ್ರತಿ ಸೆಕೆಂಡಿಗೆ ಐದು ಮೀಟರ್ ದೂರ ಹಾರಿದೆ. ಇದು ಮಂಗಳನ ಮೇಲೆ ಜೀವನದ ಕುರಿತಾದ ಮಹತ್ವದ ಮಾಹಿತಿಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜೂನ್ 25ರಂದು ಯುಎಸ್ ನ ರಕ್ಷಣಾ ಸಚಿವಾಲಯ ಪೆಂಟಗನ್ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಏಲಿಯನ್ ವೆಹಿಕಲ್ ಕುರಿತಾದ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಲಾಗಿದೆ. ಅಲ್ಲದೇ 2004ರಿಂದ 2021 ರ ಅವಧಿಯಲ್ಲಿ ಒಟ್ಟು 144 ಘಟನೆಗಳಲ್ಲಿ ಏಲಿಯ‌ನ್ ವಾಹನಗಳನ್ನು ನೋಡಲಾಗಿದೆ ಎಂದು ಹೇಳಲಾಗಿದ್ದು, ಇದರಲ್ಲಿ ಒಂದು ಘಟನೆಯನ್ನು ಮಾತ್ರವೇ ದೃಢೀಕರಿಸಬಹುದು ಎಂದು ತಿಳಿಸಲಾಗಿದೆ. ಉಳಿದ 143 ಘಟನೆಗಳ ಕುರಿತಾಗಿ ಖಚಿತವಾದ ಮಾಹಿತಿ ಯನ್ನು ನೀಡಲಾಗುವುದಿಲ್ಲ ಹಾಗೂ ಇದರ ಬಗ್ಗೆ ಸಾಕಷ್ಟು ವಿವಾದಗಳು ಇವೆ ಎಂದು ಹೇಳಿದೆ.‌

ಭೂಮಿಯ ಸುತ್ತ ಇರುವ 1715 ನಕ್ಷತ್ರಗಳ ಸತ್ತ ಏಲಿಯನ್ಸ್ ಸುತ್ತುತ್ತಿವೆ. ನಕ್ಷತ್ರಗಳು ಭೂಮಿಯಿಂದ 375 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ವಿಜ್ಞಾನಿಗಳು ಸೌರಮಂಡಲದ ಸಮೀಕ್ಷೆಯನ್ನು ಮಾಡಿದ ನಂತರ 1402 ನಕ್ಷತ್ರಗಳು ಹೇಗಿದೆಯೆಂದರೆ ಅಲ್ಲಿಂದ ಏಲಿಯನ್ಸ್ ಭೂಮಿಯನ್ನು ನೇರವಾಗಿ ನೋಡುತ್ತಿದ್ದಾರೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ. ಇದರಲ್ಲಿ 75 ನಕ್ಷತ್ರಗಳು ಭೂಮಿಯಿಂದ ಕಳಿಸುವಂತಹ ರೇಡಿಯೋ ಸಂದೇಶಗಳನ್ನು ಹಿಡಿಯುತ್ತವೆ ಎಂದು ಹೇಳಿರುವ ವಿಜ್ಞಾನಿಗಳು ಏಲಿಯನ್ಸ್ ಭೂಮಿಯನ್ನು ಎಲ್ಲಾ ಕಡೆಯಿಂದಲೂ ಗಮನಿಸುತ್ತಿದ್ದಾರೆ ಎಂದು ಊಹಿಸಬಹುದಾಗಿದೆ ಎಂದಿದ್ದಾರೆ.

ಈ ಡೇಟಾವನ್ನು ಸಂಗ್ರಹಿಸಲು ವಿಜ್ಞಾನಿಗಳು ಬಳಸುವ ವಿಧಾನವೆಂದರೆ ಭೂಮಿ ಮತ್ತು ಬೇರೆ ನಕ್ಷತ್ರಗಳ ನಡುವೆ ವಿನಿಮಯವಾದಂತಹ ರೇಡಿಯೋ ಮತ್ತು ಇತರೆ ಕಿರಣಗಳ ವಿಶ್ಲೇಷಣೆ ಆಗಿದೆ. ಏಕೆಂದರೆ ಏಲಿಯನ್ಸ್ ಎಲ್ಲೇ ಇದ್ದರೂ ಸಹಾ ಈ ರೇಡಿಯೋ ಕಿರಣಗಳನ್ನು ನಿರ್ಬಂಧಿಸುತ್ತಾರೆ. ನ್ಯೂಯಾರ್ಕ್‌ ‌ನ ಕಾರ್ನೆಲ್ ವಿಶ್ವವಿದ್ಯಾಲಯದ ಲಿಸಾ ಕಲ್ಟೆನೆಜರ್ ಮತ್ತು ಅಮೇರಿಕನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಜಾಕಿ ಫಾಹೆರ್ಟಿ ಅವರು ಗಯಾ ಬಾಹ್ಯಾಕಾಶ ದೂರದರ್ಶಕದ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಇದರಲ್ಲಿ ಅವರು ನಕ್ಷತ್ರಗಳು ಹಾಗೂ ಏಲಿಯನ್ ಕುರಿತಾಗಿ ಮಾಹಿತಿಗಳನ್ನು ನೀಡಿದ್ದಾರೆ.