ಖಾತೆಗೆ ಏಕಾಏಕಿ ಜಮಾವಾಯಿತು 1 ಕೋಟಿ ರೂಪಾಯಿ: ತಕ್ಷಣವೇ ಕಾರು ಮತ್ತು ಚಿನ್ನವನ್ನು ಖರೀದಿಸಿದ, ಆದರೆ….!!

ಪ್ರಸ್ತುತ, ದೇಶಾದ್ಯಂತ ಆನ್‌ಲೈನ್ ವ್ಯವಹಾರ ಹೆಚ್ಚುತ್ತಿದೆ. ಆನ್‌ಲೈನ್ ವ್ಯವಹಾರ ಮಾಡುವ ಸಲುವಾಗಿ ಸದ್ಯಕ್ಕೆ ವಿವಿಧ ಅಪ್ಲಿಕೇಶನ್‌ಗಳಿವೆ. ಇವುಗಳ ಮೂಲಕ ಕೊಡ-ಕೊಳ್ಳುವಿಕೆಯ ವ್ಯವಹಾರ ಮಾಡಲಾಗುತ್ತಿದೆ. ಆದರೆ ಕೆಲವೊಮ್ಮೆ ಆನ್ಲೈನ್ ವ್ಯವಹಾರ ಮಾಡುವಾಗ ತಪ್ಪಿ ಬೇರೆಯವರ ಖಾತೆಯಲ್ಲಿ ಹಣ ಹೋಗಿರುವ ಅನುಭವ ನಿಮಗೂ ಬಂದಿರ ಬಹುದು. ಆದರೆ ಒಂದು ವೇಳೆ ನಿಮ್ಮ ಖಾತೆಯಲ್ಲಿ ಯಾರಾದರೂ ತಪ್ಪಿ 1 ಕೋಟಿ ರೂಪಾಯಿ ಟ್ರಾನ್ಸ್ಫರ್ ಮಾಡಿದರೆ? ಈ ಪ್ರಶ್ನೆ ಕೇಳಿದರೆ ಸಾಕು ನಾವು ಯಾವುದೋ ವಿಚಾರಕ್ಕೆ ಹೋಗುತ್ತೇವೆ.

ಉತ್ತರ ಪ್ರದೇಶದ ಲಖನೌದಲ್ಲಿಯ ಒಂದು ಬ್ಯಾಂಕ್‌ನ ತಾಂತ್ರಿಕ ದೋಷದಿಂದ ಯುವಕನ ಖಾತೆಗೆ 1 ಕೋಟಿ ರೂ ಜಮಾವಾದವು. ಹೀಗಾಗಿ ಈ ವಿಷಯ ತಿಳಿದ ಯುವಕ ತಕ್ಷಣ ಖುಷಿಯಲ್ಲಿ ಜಿಗಿದಾಟ ಮಾಡತೊಡಗಿದನು.
ಹಣ ಬಂದ ಕೂಡಲೇ ಅವನು ಮಾಡುವ ಖರ್ಚು ಮತ್ತು ಆಡಂಬರಕ್ಕೆ ನೆರೆಹೊರೆಯವರು ಬೆಚ್ಚಿಬಿದ್ದರು

ಡಿಸೆಂಬರ್ 17, 2021 ರಂದು ಲಖನೌ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಕರಣ್ ಶರ್ಮಾ ಶಾಪಿಂಗ್‌ ಮಾಡಲು ಹೋಗಿದ್ದರು. ಆ ಸಮಯದಲ್ಲಿ ಆತನ ಖಾತೆಯಲ್ಲಿ ಕೇವಲ 1983 ರೂಪಾಯಿ ಮಾತ್ರ ಇದ್ದವು. ಮಾಲ್ ನಲ್ಲಿ ಎಲ್ಲ ವಸ್ತುಗಳನ್ನು ಕೊಂಡ ನಂತರ ತನ್ನ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದ. ಸ್ವೈಪ್ ಮಾಡಿದ ಕೂಡಲೇ ಆತನು ತನ್ನ ಬ್ಯಾಂಕ್ ಬ್ಯಾಲನ್ಸ್ ಕಂಡು ಆಶ್ಚರ್ಯ ಗೊಂಡನು ಏಕೆಂದರೆ ಖಾತೆಯಲ್ಲಿ ಕೇವಲ 1983 ರೂ ಇದ್ದ ಹಣ ಏಕಾಏಕಿಯಾಗಿ ಒಂದು ಕೋಟಿ ರೂಪಾಗಿಯಾಗಿದ್ದವು ಇದನ್ನು ಅರಿತ ಆ ವ್ಯಕ್ತಿಯ ಯೋಚನೆಯೇ ಬದಲಾಯಿತು.

ತನಗೆ ಹಣದ ಲಾಟರಿ ಹತ್ತಿದೆ ಎಂದುಕೊಂಡು ಐದು ದಿವಸಗಳಲ್ಲಿ 15.51 ಲಕ್ಷ ರೂಪಾಯಿಯ ಎಸ್ ಯುವಿ , 22.47 ಲಕ್ಷದ ಚಿನ್ನದ ಆಭರಣಗಳು, 5 ಲಕ್ಷದ ಮೊಬೈಲ್ ಮತ್ತು ಒಂದೂವರೆ ಲಕ್ಷದ ಬೈಕ್ ಖರೀದಿ ಮಾಡಿದ. ಆತ ಕೇವಲ ಐದು ದಿವಸಗಳಲ್ಲಿ 76.2 ಲಕ್ಷ ರೂಪಾಯಿಗಳ ಖರೀದಿ ಮಾಡಿದ. ಇಷ್ಟು ದೊಡ್ಡ ಮೊತ್ತದ ವ್ಯವಹಾರ ಮಾಡುವದನ್ನು ಕಂಡು ಬ್ಯಾಂಕ್ ನೌಕರರು ಬೆಚ್ಚಿಬಿದ್ದರು. ಕೂಡಲೇ ಕರಣ್ ಶರ್ಮಾರನ್ನು ಬ್ಯಾಂಕ್ ಗೆ ಕರೆದರು. ಆದರೆ ಕರಣ್ ಶರ್ಮಾ ಬ್ಯಾಂಕ್ ಗೆ ಹೋಗಲೇ ಇಲ್ಲ.

ತಾಂತ್ರಿಕ ದೋಷದಿಂದ ಕರಣ್ ಅವರ ಡೆಬಿಟ್ ಕಾರ್ಡ್ ಅನ್ನು ಬ್ಯಾಂಕ್‌ನ ಸರ್ವರ್‌ ದೊಂದಿಗೆ ಲಿಂಕ್ ಕೂಡಾ ಆಗಿತ್ತು. ಆದ್ದರಿಂದ ಬ್ಯಾಂಕ್ ಖಾತೆಯಿಂದ ಹಣ ಹೋಗುತ್ತಿತ್ತು. ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಕರಣ್ ಜೊತೆ ಮಾತನಾಡಲು ಪ್ರಯತ್ನಿಸಿದರು. ಆದರೆ ಅವರು ಉತ್ತರಿಸಲಿಲ್ಲ. ನಂತರ ಬ್ಯಾಂಕ್ ಡಿಸೆಂಬರ್ 24 ರಂದು 76 ಲಕ್ಷ ರೂಪಾಯಿ ವಂ#ಚನೆಯ ಆರೋ#ಪದ ಮೇರೆಗೆ ಪೊಲೀಸರಿಗೆ ದೂರು ನೀಡಿತು. ಈ ಪ್ರಕರಣದಲ್ಲಿ ಕರಣ್ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ಇದರಲ್ಲಿ ಶಾಮೀಲಾಗಿದ್ದಾರೆಯೇ? ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.