ಖಾಲಿ ಹೊಟ್ಟೆಯಲ್ಲಿ ನೆನೆಯಿಸಿದ ಒಣ ದ್ರಾಕ್ಷಿಯ ನೀರನ್ನು ಸೇವಿಸುವುದರಿಂದ ಆಗುವ ಲಾಭಗಳು ಒಮ್ಮೆ ನೋಡಿ

ಒಣಫಲಗಳಲ್ಲಿ ಅಸಮಾನ್ಯ ಶಕ್ತಿ ಇರುತ್ತದೆ. ಇದರಿಂದ ದೇಹಕ್ಕೆ ಅಗಣಿತ ರೂಪದಲ್ಲಿ ಲಾಭವಾಗುತ್ತದೆ. ಅದರಲ್ಲೂ ಒಣದ್ರಾಕ್ಷಿಗಳಲ್ಲಂತೂ ಐರನ್, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ ಮತ್ತು ಫೈಬರ್ ಹೇರಳವಾಗಿ ಇರುತ್ತದೆ. ಆದ್ದರಿಂದ ಆರೋಗ್ಯಕ್ಕೆ ಒಣದ್ರಾಕ್ಷಿ ತುಂಬಾ ಲಾಭದಾಯಕವಾಗಿದೆ. ಒಣದ್ರಾಕ್ಷಿಯ ಹಾಗೆ ಒಣದ್ರಾಕ್ಷಿಯನ್ನು ನೆನೆಯಿಸಿ ಇಟ್ಟ ನೀರು ಸಹ ದೇಹಕ್ಕೆ ತುಂಬಾ ಉಪಯುಕ್ತವಾಗಿದೆ.

ಒಣದ್ರಾಕ್ಷಿಯಲ್ಲಿ ನೈಸರ್ಗಿಕವಾದ ಸಕ್ಕರೆಯ ಅಂಶ ಹೇರಳವಾಗಿ ಇರುತ್ತದೆ. ಇದನ್ನು ರಾತ್ರಿ ಪೂರ್ತಿ ನೀರಲ್ಲಿ ನೆನೆಯಿಸಿ ಇಡುವುದರಿಂದ ಅದರಲ್ಲಿಯ ಸಕ್ಕರೆಯ ಅಂಶವು ಕಡಿಮೆಯಾಗಿ ನ್ಯೂಟ್ರಿಷಿಯನ್ ವ್ಯಾಲ್ಯೂ ಹೆಚ್ಚಾಗುತ್ತದೆ. ಒಣದ್ರಾಕ್ಷಿಯಿಂದ ದೇಹವು ಡಿಟಾಕ್ಸ್ ಆಗಲೂ ಸಹಾಯವಾಗುತ್ತದೆ. ಮತ್ತು ಇದರ ನೀರು ದೇಹದಲ್ಲಿಯ ಟಾಕ್ಸಿನ್ ಘಟಕಗಳನ್ನು ಹೊರಗೆ ತೆಗೆಯಲು ಸಹಾಯ ಮಾಡುತ್ತದೆ.

ಒಣದ್ರಾಕ್ಷಿಯಲ್ಲಿಯ ಫೈಬರ್ ಘಟಕವು ಪಚನ ಸಂಸ್ಥೆಗೆ ಚಾಲನೆ ನೀಡಲು ಸಹಾಯ ಮಾಡುತ್ತದೆ. ಇದರಿಂದ ಪಚನ ಶಕ್ತಿಯಲ್ಲಿ ಸುಧಾರಣೆಯಾಗುತ್ತದೆ. ಒಣದ್ರಾಕ್ಷಿಯಲ್ಲಿ ಅಂಟಿಬ್ಯಾಕ್ಟರಿಯಲ್ ತತ್ವ ಗಳಿರುತ್ತವೆ. ಇದರಿಂದ ಗಂಟಲಿನಲ್ಲಿಯ ಇನ್ಫೆಕ್ಷನ್ ಮತ್ತು ಬಾಯಿಯ ದುರ್ಗಂಧವನ್ನು ಕಡಿಮೆ ಮಾಡುತ್ತದೆ. ಒಣದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ ಮತ್ತು ನ್ಯೂಟ್ರಿಯೆಂಟ್ಸ್ ಇರುತ್ತದೆ. ಇದರಿಂದ ಎಲುಬುಗಳಿಗೆ ಶಕ್ತಿ ಪ್ರಧಾನವಾಗುತ್ತದೆ.

ಒಣದ್ರಾಕ್ಷಿಯಲ್ಲಿ ಐರನ್ ಘಟಕವು ಎನಿಮಿಯಾದ ರೋಗಿಗಳಿಗೆ ತುಂಬಾ ಲಾಭದಾಯಕವಾಗಿದೆ. ಇದರಿಂದ ದೇಹದಲ್ಲಿ ರಕ್ತ ಹೆಚ್ಚಾಗಲು ಸಹಾಯವಾಗುತ್ತದೆ. ಒಣದ್ರಾಕ್ಷಿಯಲ್ಲಿ ಫೈಬರ್ ಜೊತೆಗೆ ಅನೇಕ ಪೋಷಕ ಘಟಕಗಳು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚು ಮಾಡಲು ಪ್ರಯತ್ನಿಸುತ್ತವೆ. ಹೀಗಾಗಿ ಹೃದಯದ ವಿಕಾರವಿರುವ ವ್ಯಕ್ತಿಗಳಿಗೆ ಒಣದ್ರಾಕ್ಷಿ ತುಂಬಾ ಗುಣಕಾರಿಯಾಗಿದೆ.

ಹೇಗೆ ಮಾಡಬೇಕು?

1 ಕಪ್ ಬೆಚ್ಚಗಿನ ನೀರಲ್ಲಿ ಒಂದು ಮುಷ್ಟಿಯಷ್ಟು ಒಣದ್ರಾಕ್ಷಿಗಳನ್ನು ಸ್ವಚ್ಛವಾಗಿ ತೊಳೆದು ನೆನೆಯಲು ಬಿಡಿ. ಆನಂತರ ಮುಂಜಾನೆ ಅದೇ ನೀರನ್ನು ಸ್ವಲ್ಪ ಬೆಚ್ಚಗೆ ಮಾಡಿ ಕುಡಿಯಬೇಕು. ಆಮೇಲೆ ಆ ಒಣ ದ್ರಾಕ್ಷಿಗಳನ್ನು ಸಹ ಕಚ್ಚಿ ಕಚ್ಚಿ ತಿನ್ನಬೇಕು.