ಖೆಡ್ಡಾದಲ್ಲಿ ಬಿದ್ದ ಪುಟ್ಟ ಆನೆಯನ್ನು ಮೇಲೆತ್ತುವಲ್ಲಿ ಕೊನೆಗೂ ಯಶಸ್ವಿಯಾದ ಮಿತ್ರರು..! ನೋಡಿ ತಮಾಷೆಯ ವಿಡಿಯೋ.

ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯದ ಅನೇಕ ವಿಡಿಯೋಗಳು ನೋಡಲು ಸಿಗುತ್ತವೆ. ಅದರಲ್ಲೂ ಮಕ್ಕಳ ವಿಡಿಯೋ ಅಂತೂ ನೋಡುಗರಿಗೆ ತುಂಬಾ ನಕ್ಕು ನಗಿಸುತ್ತವೆ. ಸ್ಥೂಲಕಾಯದ ಹುಡುಗನೊಬ್ಬನ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಮಕ್ಕಳೆಲ್ಲರೂ ಕೂಡಿ ಕೆಸರಾಟದಲ್ಲಿ ಫುಲ್ ಮಜಾ ಮಾಡುತ್ತಿದ್ದಾರೆ. ದೃಶ್ಯದಲ್ಲಿ ಕಾಣುವ ಪ್ರಕಾರ ಮೈದಾನದ ಮಧ್ಯದಲ್ಲಿ ಕೆಸರಿನ ಒಂದು ಗುಂಡಿ ತಯಾರಾಗಿದೆ. ಈ ಗುಂಡಿಯ ಸುತ್ತಮುತ್ತಲೂ ಕೆಸರಿನ ಕಾರಣದಿಂದಾಗಿ ತುಂಬಾ ಜಾರಿಕೆಯಾಗಿದೆ. ಇಲ್ಲಿ ಮಕ್ಕಳೆಲ್ಲರೂ ಒಟ್ಟುಗೂಡಿ ಆಟದ ಫುಲ್ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಈ ಆಟ ಆಡುವಾಗ ಧಡೂತಿಕಾಯದ ಪುಟ್ಟ ಆನೆಯ ಮರಿಯನ್ನು ಹೋಲುವ ಹುಡುಗನೊಬ್ಬ ಗುಂಡಿಯಿಂದ ಮೇಲೆದ್ದು ಹೊರಗೆ ಬರಲು ಪ್ರಯತ್ನಿಸುತ್ತಿದ್ದಾನೆ. ಆದರೆ ಈ ಪ್ರಯತ್ನದಲ್ಲಿ ಆತ ಮೇಲಿಂದ ಮೇಲೆ ಫೇಲಾಗುತ್ತಿದ್ದ. ಆದರೆ ಗೆಳೆಯರ ಶಕ್ತಿ ಮುಂದೆ ಏನು ಅಸಾಧ್ಯ? ಸಂಕಟದಲ್ಲಿ ಸಿಲುಕಿದ ತಮ್ಮ ಮಿತ್ರನನ್ನು ಹೇಗಾದರೂ ಮಾಡಿ ಗುಂಡಿಯಿಂದ ಮೇಲಕ್ಕೆ ಎತ್ತಲು ಪಣ ತೊಟ್ಟೇ ಬಿಟ್ಟಿದ್ದಾರೆ. ಹಾಗೂ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಪ್ರಯತ್ನದಲ್ಲಿ ಗೆಳೆಯನೊಬ್ಬ ಮೇಲಕ್ಕೆ ಪುಶ್ ಮಾಡಲು ಆತನ ಹತ್ತಿರ ಹೋಗಿದ್ದಾನೆ. ಉಳಿದವರಲ್ಲಿ ಕೆಲವು ಮಿತ್ರರು ಆತನಿಗೆ ಕೈ ನೀಡಿ ಶಕ್ತಿಯಿಂದ ಮೇಲೆ ಜಗ್ಗುವುದರಲ್ಲಿ ತೊಡಗಿದ್ದಾರೆ. ಈ ಪ್ರಯತ್ನದಲ್ಲಿ ಮಿತ್ರರು ಪುಟ್ಟ ಆನೆಯಂಥ ದೇಹವನ್ನು ಹೊಂದಿದ ಮಿತ್ರನನ್ನು ಹೊಟ್ಟೆಯ ಮುಖಾಂತರ ಜಗ್ಗಿ ಮೇಲೆ ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಯಲ್ಲಿದ್ದ ಗೆಳೆಯ ಸರ್ವಶಕ್ತಿಯಿಂದ ಆತನಿಗೆ ಮೇಲೆ ಕಳುಹಿಸಲು ಪುಶ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಕ್ಕಳೆಲ್ಲರೂ ಒಂದೇ ಸವನೆ ಶಬ್ದ ಮಾಡುತ್ತಾ ಫುಲ್ ಸಪೋರ್ಟ್ ಮಾಡಿದ್ದಾರೆ. ಕೊನೆಗೂ ಪುಟ್ಟ ಆನೆಯನ್ನು ಗುಂಡಿಯಿಂದ ಮೇಲೆತ್ತುವ ಆಪರೇಶನ್ ನಲ್ಲಿ ಮಿತ್ರವರ್ಗ ಯಶಸ್ವಿಯಾಗಿದೆ. ಈ ತಮಾಷೆಯ ದೃಶ್ಯ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.

ವಿಡಿಯೋ ನೋಡಿ

 

View this post on Instagram

 

A post shared by Gus Sanjaya (@prankduniaketiga)

ಈ ಸಖತ್ ಕಾಮಿಡಿ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ prankduniaketiga ಹೆಸರಿನ ಐಡಿ ಇಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ 18 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಹಾಗೂ ಸುಮಾರು 4 ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಹೊಂದಿದೆ.