ಗಂಡನನ್ನೇ(ಚಹಲ್) ಬಿಟ್ಟು ಜೋಸ್ ಬಟ್ಲರ್ ಜೊತೆಗೆ ಡಾನ್ಸ್ ಗೆ ಇಳಿದರು ಧನಶ್ರೀ ವರ್ಮಾ! ಚಹಲ್ ಮಾಡಿದ್ದೇನು?

ಭಾರತ ತಂಡದ ಕ್ರಿಕೆಟರ್ ಯಜುರ್ವೇಂದ್ರ ಚಹಲ್ ಅವರ ಪತ್ನಿ ಧನಶ್ರೀ ವರ್ಮ ಅವರು ಯಾವತ್ತೂ ಚರ್ಚೆಯಲ್ಲಿ ಇರುತ್ತಾರೆ. ಧನಶ್ರೀ ಫೇಮಸ್ ಕೊರಿಯೋಗ್ರಾಫರ್ ಸಹ ಇದ್ದಾರೆ. ಇವರು ಡಾನ್ಸ್ ಮಾಡಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತವೆ. ಸದ್ಯ ಅವರು ಡಾನ್ಸ್ ಮಾಡಿದ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಓಡಾಡುತ್ತಿದೆ. ಡ್ಯಾನ್ಸ್ ನೋಡಿದ ನಂತರ ಚಹಲ್ ಅವರ ಫ್ಯಾನ್ಸ್ ಗಳು ಸಹ ಬೇಜಾರಾಗಬಹುದು. ಧನಶ್ರೀಯವರು ಡಾನ್ಸ್ ಮಾಡುತ್ತಾ ಮಾಡುತ್ತಾ ಚಹಲ್ ಅವರನ್ನು ಬಿಟ್ಟು ಬಟ್ಲರ್ ಅವರ ಜೊತೆಗೆ ಮುಂದುವರೆಯುತ್ತಾರೆ. ಇದೇ ವಿಡಿಯೋವನ್ನು ಧನಶ್ರೀ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ.

ಚಹಲ್ ಮತ್ತು ಜೋಸ್ ಬಟ್ಲರ್ ಅವರು ಡಾನ್ಸ್ ಸ್ಟಾರ್ಟ್ ಮಾಡುವ ಮೊದಲು ಸ್ಟೆಪ್ಸ್ ಗಳನ್ನು ಸರಿಯಾಗಿ ಹಾಕಲು ಧನಶ್ರೀ ಅವರಿಗೆ ಸಹಾಯಕ್ಕಾಗಿ ಕರೆಯುತ್ತಾರೆ. ಧನಶ್ರೀ ಹಾಡಿಗೆ ಸ್ಟೆಪ್ಸ್ ಗಳನ್ನು ಹೇಗೆ ಹಾಕುವುದು ಎಂಬುದನ್ನು ಕಲಿಸಲು ಅಣಿಯಾಗುತ್ತಾರೆ. ಧನಶ್ರೀ ಅವರು ಹೇಳಿದಂತೆ ಡಾನ್ಸ್ ಮಾಡಲು ಚಹಲ್ ಹಾಗೂ ಬಟ್ಲರ್ ಇಬ್ಬರೂ ಧನಶ್ರೀಗೆ ಅನುಕರಣೆ ಮಾಡುತ್ತಾರೆ. ಈ ಸಮಯದಲ್ಲಿ ಧನಶ್ರೀ ಯವರು ಚಹಲ್ ರ ಕಡೆಗೆ ಸ್ವಲ್ಪ ನಿರ್ಲಕ್ಷ ಮಾಡಿ ಬಟ್ಲರ್ ಅವರ ಕಡೆಗೆ ಗಮನಹರಿಸುತ್ತಾರೆ. ಇದು ಯಾಕೋ ಚಹಲ್ ಅವರಿಗೆ ಇಷ್ಟವಾಗುವುದಿಲ್ಲ. ಅದಕ್ಕಾಗಿಯೇ ಅವರು ಬದಿಗೆ ಸರಿದು ನಾಟಕೀಯವಾಗಿ ಇಬ್ಬರ ಕಡೆಗೆ ನೋಡಲು ಶುರು ಮಾಡುತ್ತಾರೆ. ಸ್ಟೆಪ್ ಹಾಕುವಲ್ಲಿ ಮಾತ್ರ ಬಟ್ಲರ್ ಅವರು ಧನಶ್ರೀಗೆ ತುಂಬಾ ಸರಿಯಾಗಿ ಸಾಥ್ ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಮೂವರ ವಿಡಿಯೋ ಭರ್ಜರಿಯಾಗಿ ಶೇರ್ ಆಗುತ್ತಿದೆ. ಜೊತೆಗೆ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಗಳನ್ನು ಸಹ ಹೊರಹಾಕುತ್ತಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Dhanashree Verma (@dhanashree9)