ಗಂಡನಿಂದ ಕದ್ದು ಆನ್ ಲೈನ್ ಮಾಡಿದಳು ಶಾಪಿಂಗ್! ಡಿಲೆವರಿ ಬಾಯ್ ಪ್ಯಾಕೇಜ್ ಮರೆಮಾಚುವಾಗ ಆದ ಫಜೀತಿ ಒಮ್ಮೆ ನೋಡಿಯೇ ಬಿಡಿ ಈ ವಿಡಿಯೋದಲ್ಲಿ…
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಮೆಜಾನ್ ಡೆಲಿವರಿ ಬಾಯ್ ಬಾಗಿಲು ಹತ್ತಿರ ಪ್ಯಾಕೇಜ್ ಮರೆಮಾಚಿದ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ನಿಜವಾಗಿ ಹೇಳಬೇಕಾದರೆ ಸೂಪರ್ ಸ್ಮಾರ್ಟ್ ಹೆಂಡತಿಯೊಬ್ಬಳು ಗಂಡನಿಗೆ ಗೊತ್ತಾಗದಂತೆ ಮಾಡಿದ ಶಾಪಿಂಗ್ ಮರೆಮಾಚುವ ಸಲುವಾಗಿ ಒಂದು ವಿಶೇಷ ಐಡಿಯಾ ಯೂಸ್ ಮಾಡಿದ್ದಾಳೆ. ಆಕೆಯ ಸೂಚನೆಯನ್ನು ಪರಿಪಾಲಿಸುವಾಗ ಡೆಲಿವರಿ ಮಾಡಲು ಬಂದ ಹುಡುಗನದ್ದು ಮಾತ್ರ ಫಜೀತಿ ಆಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದನ್ನು ನೋಡುವಾಗ ನಿಶ್ಚಿತವಾಗಿಯೂ ನಿಮ್ಮ ಮುಖದಲ್ಲಿ ನಗು ಕಂಡುಬರಲಿದೆ. ನಿಜಕ್ಕೂ ನಿಮ್ಮ ಮೂಡ್ ಫ್ರೆಶ್ ಮಾಡಲಿದೆ ಈ ವಿಡಿಯೋ.
ಈ ವಿಡಿಯೋದಲ್ಲಿ ಮನೆಯ ಬಾಗಿಲು ಮುಂದೆ ಹಾಸಿದ ಡೋರ್ ಮ್ಯಾಟ್ ಮೇಲೆಯೇ ಒಂದು ಸಂದೇಶವನ್ನು ಬರೆಯಲಾಗಿತ್ತು. ‘ಪತಿಯಿಂದ ಪ್ಯಾಕೇಜನ್ನು ಮರೆಮಾಚು’ ಎಂಬ ಆದೇಶವೇ ಅದರ ಮೇಲೆ ನೀಡಲಾಗಿತ್ತು. ಅಮೆಜಾನ್ ಡೆಲಿವರಿ ಬಾಯ್ ನೀಡಿದ ಆರ್ಡರ್ ಪ್ಯಾಕೇಜನ್ನು ತೆಗೆದುಕೊಂಡು ಮನೆಗೆ ಬಂದನು. ಬಾಗಿಲಿನ ಮುಂದೆ ಬಂದು ಡೋರ್ ಬೆಲ್ ಸಹ ಬಾರಿಸಿದನು. ಡೋರ್ ಬೆಲ್ ಬಾರಿಸಿದ ನಂತರ ಬಾಗಿಲು ತೆರೆಯಲು ಸ್ವಲ್ಪ ಸಮಯಬೇಕಾಗುತ್ತದೆ. ಆಗ ಡೆಲಿವರಿ ಬಾಯ್ ಅತ್ತಿತ್ತ ನೋಡುವಾಗ ಆತನ ದೃಷ್ಟಿ ಡೋರ್ ಮ್ಯಾಟ್ ಮೇಲಿನ ಮೆಸೇಜ್ ಮೇಲೆ ಬೀಳುತ್ತದೆ. ಆಗ ತಕ್ಷಣ ಅವನು ಆ ಆದೇಶದ ಪಾಲನೆಯನ್ನು ಮಾಡಲು ಜಾಗೃತನಾಗುತ್ತಾನೆ. ಈ ಸಂದರ್ಭದಲ್ಲಿ ಕಂಡು ಬರುವ ಡೆಲಿವರಿ ಬಾಯ್ ನ ಫಜೀತಿ ನಿಜಕ್ಕೂ ನೋಡುವ ಹಾಗಿದೆ.
ಮೊದಲು ಡಿಲೆವರಿ ಬಾಯ್ ಡೋರ್ ಮ್ಯಾಟ್ ಮೇಲೆ ನೀಡಿದ ಮೆಸೇಜಿನ ಫೋಟೋ ತನ್ನ ಮೊಬೈಲ್ ನಿಂದ ಕ್ಲಿಕ್ ಮಾಡುತ್ತಾನೆ. ಡೋರ್ ಮ್ಯಾಟ್ ಮೇಲೆ ನೀಡಿದ ಸೂಚನೆಯ ಪ್ರಕಾರ, ಪ್ಯಾಕೇಜನ್ನು ಮೊದಲು ಡೋರ್ ಮ್ಯಾಟ್ ಕೆಳಗೆ ಮುಚ್ಚಿಡುತ್ತಾನೆ. ಪ್ಯಾಕೇಜ್ ಯಾವ ಸ್ಥಾನದಲ್ಲಿ ಇಟ್ಟಿರುತ್ತಾನೆ ಅದರ ಒಂದು ಫೋಟೋ ತೆಗೆದುಕೊಳ್ಳುತ್ತಾನೆ. ಇದರ ನಂತರ ಮುಂದೆ ಏನು ಘಟಿಸುತ್ತದೆ ಅದು ನಿಜವಾಗಿಯೂ ತುಂಬಾ ತಮಾಷೆಯಾಗಿದೆ. ಸೂಪರ್ ಸ್ಮಾರ್ಟ್ ಪತ್ನಿ ನೀಡಿದ ಸೂಚನೆಯ ಪ್ರಕಾರ ಡೆಲಿವರಿ ಬಾಯ್ ಡೋರ್ ಮ್ಯಾಟ್ ಕೆಳಗಡೆ ಪ್ಯಾಕೇಜನ್ನು ಮುಚ್ಚಿಟ್ಟು ಇನ್ನೇನು ಅಲ್ಲಿಂದ ಹೋಗಬೇಕು ಎನ್ನುವಷ್ಟರಲ್ಲಿಯೇ ಬಾಗಿಲು ತೆರೆಯುತ್ತದೆ. ಮುಂದೆ ಆಕೆಯ ಪತಿಯನ್ನು ನೋಡಿ ಡಿಲೆವರಿ ಬಾಯ್ ಸ್ವಲ್ಪ ಸಮಯ ಗೊಂದಲದಲ್ಲಿ ಬೀಳುತ್ತಾನೆ.
ಮನೆಯ ಬಾಗಿಲ ಮುಂದೆ ನಿಂತ ಈ ವ್ಯಕ್ತಿಗೆ ನೋಡಿ ಪತಿಯು ಆತನಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆಗ ಡೆಲಿವರಿ ಬಾಯ್ ತಾನು ಕ್ರಿಶ್ಚಿಯನ್ ಧರ್ಮದ ಪ್ರಸಾರಕನಿದ್ದೇನೆ ಎಂದು ಹೇಳುತ್ತಾನೆ. ಇಷ್ಟೆಲ್ಲ ಮಾಡುವಾಗ ತನ್ನ ಕಳ್ಳತನ ಎಲ್ಲಿಯಾದರೂ ಬಯಲಾಗುತ್ತದೆ ಏನೋ ಎಂಬ ಭಯದ ಭಾವನೆ ಆತನ ಮುಖದ ಮೇಲೆ ಸ್ಪಷ್ಟವಾಗಿ ಕಂಡುಬರುತ್ತದೆ.
ವಿಡಿಯೋ ನೋಡಿ