ಗಂಡು ಮಕ್ಕಳನ್ನು ಕಳೆದುಕೊಂಡು, ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಿ, ಆಟೋದಲ್ಲಿ ಬದುಕುತ್ತಿರುವ ಶ್ರಮ ಜೀವಿ ಇವರು
ಮುಂಬೈ ನಿವಾಸಿಯಾಗಿರುವ ದೇಸರಾಜ್ ಅವರ ಕಥೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ದೇಶದ ಆರ್ಥಿಕ ರಾಜಧಾನಿಯಾದ ಮುಂಬೈ ನಗರದಲ್ಲಿ ಆಟೋ ಚಾಲನೆ ಮಾಡುವ ದೇಸರಾಜ್ ಅವರು ಮೊಮ್ಮಗಳನ್ನು ಓದಿಸುವ ಸಲುವಾಗಿ ತಮ್ಮ ಮನೆಯನ್ನು ಮಾರಿದ್ದಾರೆ. ಅವರು ಆಟೋದಲ್ಲೇ ಮಲಗುತ್ತಾರೆ, ಅವರಿಗೆ ಆಟೋನೇ ಮನೆಯಾಗಿದೆ ಕೂಡಾ. ಇತ್ತೀಚಿಗೆ ಮೀಡಿಯಾ ಒಂದರ ಸಂದರ್ಶನದಲ್ಲಿ ದೇಸರಾಜ್ ಅವರು ತಮ್ಮ ಜೀವನದ ನೋ ವಿನ ಕಥೆಯನ್ನು ಹಂಚಿಕೊಂಡಿದ್ದು ಅದನ್ನು ಕೇಳಿದ ನೆಟ್ಟಿಗರು ಭಾವುಕರಾದರೆ ಅನೇಕರು ಈ ಹಿರಿಯ ವ್ಯಕ್ತಿಗೆ ಸಹಾಯವನ್ನು ನೀಡಲು ಕೂಡಾ ಸಿದ್ಧವಾಗಿದ್ದಾರೆನ್ನಲಾಗಿದೆ. ದೇಸರಾಜ್ ಅವರು ಹೇಳುವಂತೆ ಆರು ವರ್ಷಗಳ ಹಿಂದೆ ಕೆಲಸದ ನಿಮಿತ್ತ ಹೋದ ಅವರ ಒಬ್ಬ ಮಗ ನಾಪತ್ತೆಯಾಗಿ ಹೋದನಂತೆ. ಮನೆಗೆ ಮರಳಿ ಬರಲೇ ಇಲ್ಲ ಎನ್ನುತ್ತಾರೆ ಅವರು. ಇದಾದ ನಂತರ 40 ವರ್ಷಗಳ ಅವರ ಮಗ ಕೂಡಾ ಶವವಾಗಿ ದೊರೆತನಂತೆ.
ದೇಸರಾಜ್ ಅವರು ಹೇಳುವ ಹಾಗೇ ಅವರಿಗೆ ಮಗನ ಸಾ ವಿ ಗೆ ಕಣ್ಣೀರು ಹಾಕುವ ಸಮಯ ಕೂಡಾ ಸಿಗಲಿಲ್ಲವಂತೆ. ಅದಕ್ಕೆ ಪ್ರಮುಖವಾದ ಕಾರಣ ಅವರ ಹೆಗಲೇರಿದ ಜವಾಬ್ದಾರಿಗಳು. ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡ ಅವರಿಗೆ ಕುಟುಂಬವನ್ನು ನಡೆಸುವುದು ಅನಿವಾರ್ಯ ಕೂಡಾ ಆಗಿತ್ತು. ಮಗನ ಸಾ ವಿ ನ ಮರುದಿನವೇ ಅವರು ಆಟೋ ಚಾಲನೆಯನ್ನು ಆರಂಭಿಸಬೇಕಾಯಿತು. ಹೀಗೆ ರಸ್ತೆಗಿಳಿದು ಜೀವನ ನಡೆಸುವಾಗಲೇ ಎರಡು ವರ್ಷಗಳ ನಂತರ ಅವರ ಮತ್ತೊಬ್ಬ ಮಗ ಕೂಡಾ ಆ ತ್ಮ ಹ ತ್ಯೆ ಮಾಡಿಕೊಂಡು ಇಹಲೋಕವನ್ನು ತ್ಯಜಿಸಿದಾಗ ಈ ಹಿರಿಯರ ಮೇಲೆ ಇನ್ನಷ್ಟು ಜವಾಬ್ದಾರಿ ಬಂದೆರಗಿದವು. ದೇಸರಾಜ್ ಅವರ ಮೇಲೆ ಸೊಸೆ ಹಾಗೂ ನಾಲ್ಕು ಜನ ಮೊಮ್ಮಕ್ಕಳ ಜವಾಬ್ದಾರಿ ಇತ್ತು.

ದೇಸರಾಜ್ ಅವರ ಮೊಮ್ಮಗಳು ಒಂಬತ್ತನೇ ತರಗತಿ ಓದುವಾಗ ತಾನು ಶಾಲೆ ಬಿಟ್ಟು ಬಿಡುವುದಾಗಿ ಹೇಳಿದಳಂತೆ. ಆದರೆ ದೇಸರಾಜ್ ಅವರು ಮೊಮ್ಮಗಳಿಗೆ ಬುದ್ಧಿ ಹೇಳಿ, ಎಲ್ಲಿಯವರೆಗೆ ಓದಲು ಬಯಸುವಳೋ ಅಲ್ಲಿಯವರೆಗೆ ಓದು ಎಂದು ತಿಳಿಸಿದರು. ಅಲ್ಲದೇ ಅದಕ್ಕಾಗಿ ಅವರು ಆಟೋ ಓಡಿಸುವಲ್ಲಿ ಹೆಚ್ಚು ಸಮಯ ಮೀಸಲಿರಿಸಿದರು. ಬೆಳಿಗ್ಗೆ ಆರು ಗಂಟೆಗೆ ಅವರು ಆಟೋ ತೆಗೆದುಕೊಂಡು ರಸ್ತೆಗೆ ಇಳಿಯುತ್ತಾರೆ. ತಡರಾತ್ರಿವರೆಗೆ ಆಟೋ ಚಲಾಯಿಸುವ ಅವರು ತಿಂಗಳಿಗೆ ಹತ್ತು ಸಾವಿರ ರೂ ಗಳಿಸುತ್ತಾರೆ. ಅದರಲ್ಲಿ ಆರು ಸಾವಿರ ಮೊಮ್ಮಕ್ಕಳ ಶಿಕ್ಷಣಕ್ಕೆ ಖರ್ಚಾದರೆ ಉಳಿದ ನಾಲ್ಕು ಸಾವಿರದಲ್ಲಿ ಏಳು ಜನರ ಕುಟುಂಬವನ್ನು ನಡೆಸುತ್ತಿದ್ದಾರೆ ದೇಸರಾಜ್ ಅವರು.
ಅನೇಕ ಸಲ ಅವರ ಮನೆಯಲ್ಲಿ ತಿನ್ನುವುದಕ್ಕೆ ಕೂಡಾ ಏನೂ ಇರುವುದಿಲ್ಲ ಎನ್ನುವ ಅವರು ಈ ಎಲ್ಲಾ ಕಷ್ಟಗಳನ್ನು ಮೊಮ್ಮಗಳು 12 ನೇ ತರಗತಿಯಲ್ಲಿ 80% ಅಂಕ ಪಡೆದಾಗ ಮರೆತಿದ್ದಾಗಿ, ಅಂದು ಎಲ್ಲಿರಿಗೂ ಆಟೋದಲ್ಲಿ ಉಚಿತವಾಗಿ ಸವಾರಿ ಮಾಡಿಸಿದ್ದಾಗಿ ಹೇಳುವ ಅವರು ಮೊಮ್ಮಗಳು ದೆಹಲಿಯಲ್ಲಿ ಬಿಇಡಿ ಮಾಡಬೇಕು ಎಂದಾಗ ಅದನ್ನು ಭರಿಸುವುದು ಕಷ್ಟ ಎಂದು ತಿಳಿದ ಅವರು ಇದ್ದ ಮನೆಯನ್ನು ಮಾರಿ ಮೊಮ್ಮಗಳ ಶಿಕ್ಷಣಕ್ಕೆ ಹಣ ಹೊಂದಿಸಿದ್ದಾರೆ. ಅವರ ಪತ್ನಿ, ಸೊಸೆ ಹಾಗೂ ಮೊಮ್ಮಕ್ಕಳು ಹಳ್ಳಿಯ ಸಂಬಂಧಿಕರ ಮನೆಯಲ್ಲಿ ಇದ್ದಾರೆ. ಆದರೆ ದೇಸರಾಜ್ ಮಾತ್ರ ಮುಂಬೈನಲ್ಲಿ ಉಳಿದು ಆಟೋ ಚಾಲನೆ ಮಾಡುತ್ತಿದ್ದಾರೆ. ಒಂದು ವರ್ಷ ಆಯಿತು ಪರಿಸ್ಥಿತಿ ಹದಗೆಟ್ಟಿಲ್ಲ, ಈಗ ಆಟೋ ದಲ್ಲೇ ತಿನ್ನುವುದು, ಮಲಗುವುದು ಎಲ್ಲಾ ಎನ್ನುವ ದೇಸರಾಜ್ ಅವರು ನಿಜಕ್ಕೂ ಅನೇಕರಿಗೆ ಸ್ಪೂರ್ತಿ.
ದೇಸರಾಜ್ ಅವರು ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡುತ್ತಾ ಮೊಮ್ಮಗಳು ಫೋನ್ ಮಾಡಿ ತಾನು ತನ್ನ ತರಗತಿಯಲ್ಲಿ ಫಸ್ಟ್ ಬಂದಿದ್ದೇನೆ ಎಂದು ಹೇಳಿದಾಗ ನನ್ನೆಲ್ಲಾ ಕಷ್ಟಗಳನ್ನು ನಾನು ಮರೆತು ಬಿಡುತ್ತೇನೆ ಎನ್ನುತ್ತಾರೆ. ಅಲ್ಲದೇ ಮೊಮ್ಮಗಳು ಶಿಕ್ಷಣ ಮುಗಿಸಿ ಒಬ್ಬ ಶಿಕ್ಷಕಿಯಾಗಿ ಬಂದಾಗ ಅವಳ ಬಗ್ಗೆ ತನಗೆ ಹೆಮ್ಮೆಯಿದೆ ಎಂದು ಹೇಳಲು ಕಾಯುತ್ತಿದ್ದೇನೆ. ಏಕೆಂದರೆ ಆಕೆ ನಮ್ಮ ಕುಟುಂಬದಲ್ಲಿ ಮೊದಲ ಪದವೀಧರೆ ಎನ್ನುವಾಗ ಅವರ ಕಣ್ಣಲ್ಲಿ ಮೊಮ್ಮಗಳ ಶಿಕ್ಷಣಕ್ಕಾಗಿ ಎಷ್ಟಾದರೂ ಕಷ್ಟ ಎದುರಿಸಲು ತಾನು ಸಿದ್ಧ ಎನ್ನುವ ಭಾವನೆ ಮಿಂಚುವುದನ್ನು ನೋಡಬಹುದಾಗಿದೆ.
Desraj is a Auto driver on streets of Mumbai! His 2 sons hv died in accident & suicide. He drives frm 6am in th morn to 10 pm to earn Rs10000 /month. You cn find him at Khar Danda naka, Auto no 160. His no is 08657681857. We need to reach out to help. RT pl & Mumbaikars pl help. pic.twitter.com/5zAm9TtgT5
— Archana Dalmia (@ArchanaDalmia) February 11, 2021
ದೇಸರಾಜ್ ಅವರ ಈ ಕಥೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಮೇಲೆ ಅದನ್ನು ತಿಳಿದ ನೆಟ್ಟಿಗರು ಕೂಡಾ ಭಾವುಕರಾಗಿದ್ದಾರೆ. ಅನೇಕರು ತಾವು ದೇಸರಾಜ್ ಅವರ ಕುಟುಂಬಕ್ಕೆ ನೆರವನ್ನು ನೀಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ದೇಸರಾಜ್ ಅವರ ಜೀವನ ಅಕ್ಷರಶಃ ಒಂದು ಸ್ಪೂರ್ತಿಯ ಕಥೆಯೆಂದರೆ ತಪ್ಪಿಲ್ಲ. ಜವಾಬ್ದಾರಿ ಹಾಗೂ ಕಷ್ಟಗಳನ್ನು ಎದುರಿಸಿ ಜೀವನಕ್ಕೆ ಹೆ ದರಿ ಓಡುವ ಅದೆಷ್ಟೋ ಜನರಿಗೆ ಇವರ ಜೀವನ ಮಾದರಿಯಾಗಬೇಕಿದೆ. ಇಳಿ ವಯಸ್ಸಿನಲ್ಲಿ ಕೂಡಾ ಕುಟುಂಬದ ಜವಾಬ್ದಾರಿ ಹೊತ್ತು ಹಗಲಿರುಳು ದುಡಿಯುತ್ತಿರುವ ಈ ಶ್ರಮ ಜೀವಿಗೆ ಒಂದು ದೊಡ್ಡ ಸೆಲ್ಯೂಟ್ ಮಾಡಲೇಬೇಕಿದೆ.