“ಗಂಡ ನನ್ನ ಫೋಟೋ ವಾಟ್ಸಾಪ್ ‘ಡಿಪಿ’ ಇಡುವುದಿಲ್ಲ” ಎಂದು ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ ಪತ್ನಿ; ತಲೆಗೆ ಕೈ ಹಚ್ಚಿ ಕುಳಿತ ಪೊಲೀಸರು!

ಸಂಸಾರವೆಂದರೆ ಗಂಡ ಹೆಂಡಿರಲ್ಲಿ ಮನಸ್ತಾಪ, ಜಗಳ, ತಂಟೆ, ತಕರಾರು ಇದ್ದದ್ದೇ. ಕೆಲವೊಂದು ಸಲ ಚಿಕ್ಕ ಚಿಕ್ಕ ವಿಷಯಗಳಿಂದಲೂ ದೊಡ್ಡ ಜಗಳಗಳಾಗುತ್ತವೆ. ಯಾವ ವಿಷಯದಿಂದ ಇಬ್ಬರಲ್ಲಿ ಜಗಳ ಬರುತ್ತದೆ ಹೇಳಲು ಸಾಧ್ಯವಿಲ್ಲ. ಇತ್ತಿತ್ತಲಾಗಿ ಗಂಡ ಹೆಂಡಿರಲ್ಲಿ ಜಗಳಗಳ ಕಾರಣ ಮೊಬೈಲ್ ಸಹ ಆಗಿದೆ. ಹೌದು ಮೊಬೈಲ್ ಕಾರಣದಿಂದಲೂ ಅನೇಕ ಕಪಲ್ಸ್ ಗಳಲ್ಲಿ ಜಗಳಗಳು ಆಗುತ್ತಿರುತ್ತವೆ. ವಾಟ್ಸಪ್ ಕಾರಣದಿಂದಾಗಿ ಒಂದು ಸಂಸಾರದಲ್ಲಿ ಜಗಳ ಪ್ರಾರಂಭವಾಗಿದೆ. ಹೌದು ಇದು ನಿಜ. ಪುಣೆಯ ಒಂದು ದಂಪತಿಗಳ ಮಧ್ಯದಲ್ಲಿ ಜಗಳಕ್ಕೆ ವಾಟ್ಸಪ್ ಕಾರಣವಾಗಿದೆ.

ಕಾರಣವೇನು ಅಂತೀರಾ? ಓದಿ ಹಾಗಾದರೆ…

ಪೊಲೀಸ್ ಸ್ಟೇಷನ್ ನಲ್ಲಿ ಮಹಿಳೆಯೊಬ್ಬಳು ಗಂಡನ ತಕರಾರು ತೆಗೆದುಕೊಂಡು ಹೋಗಿದ್ದಾಳೆ. ಆಕೆ ಹೇಳುವ ಪ್ರಕಾರ, ನನ್ನ ಎಲ್ಲಾ ಗೆಳತಿಯರ ಗಂಡಂದಿರರು ತಮ್ಮ ಹೆಂಡತಿಯ ಫೋಟೋ ವಾಟ್ಸಾಪನ ಡಿಪಿಯಲ್ಲಿ ಇಡುತ್ತಾರೆ. ಆದರೆ ನನ್ನ ಗಂಡ ಮಾತ್ರ ಯಾವತ್ತೂ ನನ್ನ ಫೋಟೋವನ್ನು ಡಿಪಿಯಲ್ಲಿ ಇಡುವುದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಳು. ಈ ಕಾರಣದಿಂದಾಗಿ ಗಂಡ ಹೆಂಡಿರಲ್ಲಿ ಸತತವಾಗಿ ಜಗಳವಾಗುತ್ತಿತ್ತು. ಮುಂದೇನಾಯಿತು ನೋಡಿ…

ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸುಜಾತಾ ಶಾನಮೆ ಅವರು ಈ ಕೇಸಿನ ಬಗ್ಗೆ ಮಾಹಿತಿ ನೀಡಿದರು. ನಮ್ಮ ವಿಭಾಗದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿಯೂ ಕೆಲಸ ಮಾಡಲಾಗುತ್ತದೆ. ಹೀಗೆ ಒಂದು ಮಧ್ಯಾಹ್ನದಲ್ಲಿ ಮಹಿಳೆಯೊಬ್ಬಳು ಬಂದು, ನನ್ನ ಪತಿ ನನ್ನ ಕಡೆಗೆ ಗಮನ ನೀಡುವುದಿಲ್ಲ, ನನಗೆ ತಂದೆ ಇಲ್ಲ, ಆ ಕಾರಣದಿಂದಾಗಿ ತಾಯಿ ಮತ್ತು ತಂಗಿಯ ಹೊಣೆ ನನ್ನ ಮೇಲಿದೆ. ಆದರೂ ನನ್ನ ತಾಯಿ ಮತ್ತು ತಂಗಿ ಇಬ್ಬರು ನನ್ನ ತವರುಮನೆಯಲ್ಲಿ ಇರುತ್ತಾರೆ. ನಾವಿಬ್ಬರೂ ಗಂಡ ಹೆಂಡಿರಲ್ಲಿ ಯಾವುದೇ ರೀತಿಯ ಜಗಳವಿಲ್ಲ, ನಾವಿಬ್ಬರೂ ಕೂಡಿ ಮಾತನಾಡಿ ಚರ್ಚೆ ಮಾಡಿಕೊಂಡು ನನ್ನ ತಾಯಿಗೆ ಸಹಾಯ ಮಾಡುತ್ತೇವೆ. ಗಂಡನ ಕಡೆಯಿಂದ ನನಗೆ ಸಮಸ್ಯೆಯು ಇಲ್ಲ. ನಮ್ಮ ಇಬ್ಬರ ಸಂಸಾರ ಹಾಗೆ ನೋಡಿದರೆ ಚೆನ್ನಾಗಿಯೇ ಇದೆ.

ಇದನ್ನೆಲ್ಲ ಕೇಳಿದ ನಂತರ ಇನ್ಸ್ಪೆಕ್ಟರ್ ಸುಜಾತಾ ಅವರು, ಹಾಗಾದರೆ ನಿಮಗೆ ಯಾವ ಸಮಸ್ಯೆ ಇದೆ ಹಾಗೂ ಯಾವ ತಕರಾರನ್ನು ಇಲ್ಲಿ ನೋಂದಾಯಿಸಲು ಬಂದಿದ್ದೀರಿ ಎಂದು ಕೇಳಿದರು.

ಇದಕ್ಕೆ ಉತ್ತರವಾಗಿ ಮಹಿಳೆ ಹೇಳಿದ್ದು ಕೇಳಿದರೆ ಆಶ್ಚರ್ಯವಾಗದೇ ಇರದು. ನನ್ನ ಗಂಡ ವಾಟ್ಸಪ್ ನ ಡಿಪಿಯಲ್ಲಿ ನನ್ನ ಫೋಟೋ ಇಡುವುದಿಲ್ಲ. ಈ ಕಾರಣದಿಂದಾಗಿ ನಾನು ನನ್ನ ಗಂಡನ ಮೇಲೆ ಬೇಜಾರಾಗಿದ್ದೇನೆ ಎಂದು ಹೇಳಿದಳು.

ಮಹಿಳೆ ಹೇಳಿಕೆಯಿಂದ ಆಕೆಯ ಗಂಡನಲ್ಲಿ ಈ ಬಗ್ಗೆ ವಿಚಾರಿಸಿದಾಗ ಆತ ಹೀಗೆ ಹೇಳಿದ, ನಾನು ನನ್ನ ಪತ್ನಿಯ ಕಾಳಜಿ ತೆಗೆದುಕೊಳ್ಳುತ್ತೇನೆ. ಆಕೆಯನ್ನು ರಕ್ಷಿಸುತ್ತೇನೆ, ಆಕೆಯ ಸಹೋದರಿಯ ಶಿಕ್ಷಣದ ಖರ್ಚನ್ನು ಸಹಿತ ನಾನೇ ನೋಡಿಕೊಳ್ಳುತ್ತೇನೆ, ಅತ್ತೆಯವರಿಗೆ ನಾನೇ ಆಧಾರವಾಗಿದ್ದೇನೆ. ಏನಾದರೂ ಆರೋಗ್ಯ ತಪ್ಪಿದರೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತೇನೆ. ಈ ರೀತಿಯಾಗಿ ನಡೆದರೂ ಸಹ ಏಕೆ ವಾಟ್ಸಪ್ನಲ್ಲಿ ನನ್ನ ಡಿಪಿ ಇಡುವುದಿಲ್ಲವೆಂದು ಸತತವಾಗಿ ನನ್ನ ಜೊತೆ ಜಗಳ ಮಾಡುತ್ತಿರುತ್ತಾಳೆ. ಈ ಒಂದೇ ಕಾರಣದಿಂದ ನಮ್ಮಿಬ್ಬರಲ್ಲಿ ಮನಸ್ತಾಪ ಆಗುತ್ತಿರುತ್ತದೆ. ನಾನು ನನ್ನ ಹೆಂಡತಿಗೆ ಹೇಗೆ ತಿಳಿಸಿ ಹೇಳಬೇಕು ಅದೇ ತಿಳಿಯುತ್ತಿಲ್ಲ ಎಂದನು.

ಸಲಹೆ, ಸಮಾಲೋಚನೆಯಿಂದ ಇಬ್ಬರು ಒಂದಾದರು.

ಭರೋಸಾ ಸೇಲ್ ಹೆಸರಿನ ಒಂದು NGO ಇವರಿಬ್ಬರಿಗೂ ಸರಿಯಾಗಿ ಸಲಹೆ ನೀಡಿದರು. ನಿನ್ನ ಪತಿ ನಿನ್ನನ್ನು ತುಂಬಾ ಕಾಳಜಿ ಮಾಡುತ್ತಾನೆ. ನಿನ್ನ ಬೇಕು-ಬೇಡಗಳನ್ನು ಪೂರೈಸುತ್ತಾನೆ. ನಿನ್ನ ಮನೆಯವರ ಕಾಳಜಿ ತೆಗೆದುಕೊಳ್ಳುತ್ತಾನೆ. ಇದರ ಅರ್ಥ ಆತ ನಿನ್ನನ್ನು ತುಂಬಾ ಪ್ರೀತಿಸುತ್ತಾನೆ ಎಂದಾಗ ನಿನ್ನ ಒಂದು ಫೋಟೋ ಡಿಪಿಯಲ್ಲಿ ಇಡಲಿಲ್ಲವೆಂದರೆ ಏನಾಗುತ್ತದೆ? ಇದರಿಂದ ಯಾವ ವ್ಯತ್ಯಾಸವು ಆಗುವದಿಲ್ಲ ಎಂದಾಗ ಮಹಿಳೆಯು ಪ್ರೀತಿ ಇದು ತೋರಿಸುವುದಕ್ಕಾಗಿ ಇರುವುದಿಲ್ಲ. ಅದು ನಮ್ಮ ಮಾತಿನಿಂದ ಮತ್ತು ನಡತೆಯಿಂದ ವ್ಯಕ್ತ ಮಾಡಬೇಕಾಗುತ್ತದೆ. ಅಂದರೇನೇ ಅದು ನಿಜವಾದ ಪ್ರೀತಿ ಎಂದು ಹೇಳಿದಳು. ತದನಂತರ ಅವರಿಬ್ಬರೂ ಭರೊಸಾ ಆಫೀಸಿನಿಂದ ಹೊರಟು ಹೋದರು. ಈ ಮಾಹಿತಿಯನ್ನು ಸುಜಾತಾ ಅವರು ನೀಡಿದರು.

ಸುಜಾತಾ ಅವರು ಹೇಳುವ ಪ್ರಕಾರ ಅವರ ಪೊಲೀಸ್ ಸ್ಟೇಷನ್ ಗೆ ಈ ರೀತಿಯ ಅನೇಕ ಕೇಸುಗಳು ಬರುತ್ತಲೇ ಇರುತ್ತವೆ. ಪ್ರತಿಯೊಂದು ಚಿಕ್ಕ ಪುಟ್ಟ ಕಾರಣಗಳಿಗೆ ನಾವು ಕೇಸುಗಳನ್ನು ದಾಖಲಿಸುತ್ತ ಕೂಡುವುದಿಲ್ಲ. ಅವರ ಜೊತೆಗೆ ಸರಿಯಾಗಿ ಸಂವಾದವನ್ನು ಮಾಡಿ ಸಮಸ್ಯೆಯ ಕಾರಣವನ್ನು ಹುಡುಕಿ ಅವುಗಳ ಮೇಲೆ ಆದಷ್ಟು ಮಾತುಕತೆಯಿಂದ ಮಾರ್ಗ ಹುಡುಕಿ ಸಮಾಧಾನ ಮಾಡುವ ಪ್ರಯತ್ನ ನಮ್ಮ ಕಡೆಯಿಂದ ನಾವು ಮಾಡುತ್ತೇವೆ ಎಂದು ಇನ್ಸ್ಪೆಕ್ಟರ್ ಸುಜಾತಾ ಅವರು ಹೇಳಿದರು.