ಗಗನಯಾತ್ರಿ ಕಲ್ಪನಾ ಚಾವ್ಲಾ ಬಗ್ಗೆ ನಾಸಾ ಬಚ್ಚಿಟ್ಟ ಸತ್ಯ ಬಹಿರಂಗ!

ಕಲ್ಪನಾ ಚಾವ್ಲಾ ಈ ಒಂದು ಹೆಸರಿನಿಂದ ಭಾರತದ ಮಹಿಳೆಯ ಬಗ್ಗೆ ಇರುವ ಗೌರವ ಆಕಾಶದೆತ್ತರಕ್ಕೆ ಬೆಳೆಯುವದು. ಆ ಕರಾಳ ದಿವಸದಂದು ಆದದ್ದಾದರು ಏನು? ಆ ದುರ್ಘಟನೆ ಹೇಗಾಯಿತು? ಎಂಬುದರ ಬಗ್ಗೆ ನಾವು ಇಲ್ಲಿ ತಿಳಿಯುವಾ. ಕಲ್ಪನಾ ಚಾವ್ಲಾ ಇವಳು ಗಗನಯತ್ರಿಯಾಗಿ ಅವಕಾಶದಲ್ಲಿ ಸಂಚಾರ ಮಾಡಿ ಬಂದ ಭಾರತದ ಮೊದಲ ಮಹಿಳೆಯಾಗುವ ಕನಸನ್ನು ಪೂರ್ಣಗೊಳಿಸಿಕೊಂಡಳು. ಆದರೆ ದುರದೃಷ್ಟವಶಾತ್ ಕಲ್ಪನಾಳು ಭೂಮಿಗೆ ಸ್ಪರ್ಶ ಮಾಡುವ ಮುನ್ನವೇ ಅವಳ ಯಾನವು ಆಕಾಶದಲ್ಲಿಯೇ ಬೂದಿಯಾಗಿ ಹೋಯಿತು. ಇದೆಲ್ಲದರಲ್ಲಿ ನಾಸಾ ಎಲ್ಲರಿಂದಲೂ ಮುಚ್ಚಿಟ್ಟ ಒಂದು ಸತ್ಯವನ್ನು ಇಂದು ತಿಳಿಯೋಣ.

ಕಲ್ಪನಾಳ ಜನ್ಮ 17 ಮಾರ್ಚ್ 1962 ರಲ್ಲಿ ಭಾರತದ ಕರ್ನಾಲ್ ಪಟ್ಟಣದಲ್ಲಿ ಆಯಿತು. ಕಲ್ಪನಾ ಚಿಕ್ಕಂದಿನಿಂದಲೂ ಅವಕಾಶದಲ್ಲಿ ಹೋಗುವ ಕನಸನ್ನು ಕಾಣುತ್ತಿದ್ದಳು. ಆಕೆ PUC ನಂತರ 1982 ರಲ್ಲಿ ಪಂಜಾಬದ ಒಂದು ಕಾಲೇಜ್ ದಲ್ಲಿ ಎಸ್ಟ್ರೋನಾಟಿಕಲ್ ಇಂಜಿನಿಯರಿಂಗ್ ಮಾಡಿ ಮುಂದಿನ ಶಿಕ್ಷಣಕ್ಕಾಗಿ ಅಮೆರಿಕೆಗೆ ಹೋದಳು. ಅಲ್ಲಿ ಅವಳು ಏರೋಸ್ಪೇಸ್ ನಲ್ಲಿ ಪಿ ಎಚ್ ಡಿ ಮಾಡಿದಳು. ತದನಂತರ ಕಲ್ಪನಾಳನ್ನು ಎಸ್ಟ್ರೋನಟ್ಸ್ ಟೀಮಿನಲ್ಲಿ ಆರಿಸಲಾಯಿತು. ಮುಂದೆ ಆಕೆ ಕನಸು ಕಂಡ ಆ ಒಂದು ದಿನ ಕಲ್ಪನಾಳ ಜೀವನದಲ್ಲಿ ಉದಯಿಸಿತು.

ಕಲ್ಪನಾ ಚಾವ್ಲಾ ಅವರು ತಮ್ಮ ಮೊದಲ ಹಾರಾಟ ಎಸ್ ಟಿ ಎಸ್ 87 ಕೊಲಂಬಿಯಾ ಸೆಟಲ್ ದಲ್ಲಿ ಪೂರ್ಣ ಮಾಡಿದರು. 19 ನವೆಂಬರ್ 1997 ರಿಂದ 15 ಡಿಸೆಂಬರ್ 1997ರ ವರೆಗೆ ಅವಳ ಮೊದಲ ಪ್ರವಾಸವಾಗಿತ್ತು. ಕಲ್ಪನಾಳು ಅಂತರಿಕ್ಷದಲ್ಲಿ 372 ಗಂಟೆಗಳ ಕಾಲ ಪ್ರವಾಸ ಮಾಡಿ ಪೃಥ್ವಿಯ 252 ಸುತ್ತುಗಳನ್ನು ಹಾಕಿದ್ದರು. ತದನಂತರ 2003 ರಲ್ಲಿ ಅವಳ ಎರಡನೆಯ ಪ್ರವಾಸದ ಸಂದರ್ಭದಲ್ಲಿ ಆಕೆಯಿದ್ದ ಯಾನದಲ್ಲಿ ಒಂದು ಚಿಕ್ಕ ಸಮಸ್ಯೆಯಾಗಿದೆ ಎಂದು ಅವಳ ಜೊತೆಗಾರರಿಗೆ ಅನಿಸುತ್ತಿತ್ತು. ಆದರೆ ಮುಂದೆ ಇದು ಒಂದು ದೊಡ್ಡ ಗಂಡಾಂತರವಾಗಲಿದೆ ಎಂಬುದನ್ನು ಅರಿಯಲು ಅವರಿಗೆ ಸಾಧ್ಯವಾಗಲಿಲ್ಲ.

ಯಾನದಲ್ಲಿಯ ವೈಜ್ಞಾನಿಕರಿಗೆ ಇದರ ಬಗ್ಗೆ ಸ್ವಲ್ಪವೂ ತಿಳಿಯಲಿಲ್ಲ, ಆದರೆ ಆ ಯಾನದ ಶಟಲ್ ಕೆಟ್ಟು ಹೋಗಿದೆ ಎಂಬುದು ನಾಸಾಗೆ ತಿಳಿದಿತ್ತಾದರೂ, ಅವರು ಯಾನದಲ್ಲಿಯ ಗಗನಯಾತ್ರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿರಲಿಲ್ಲ. ಕೊನೆಗೆ ಪೃಥ್ವಿಯ ಕಡೆಗೆ ಮರಳಿ ಬರುವಾಗ 63 ಕಿಲೋ ಮೀಟರ್ ಅಂತರದಲ್ಲಿರುವಾಗ ಶಟಲ್ ಒಡೆದು ಚೂರು ಚೂರಾಯಿತು. ಆಕಾಶದಲ್ಲಿ ಮಾತ್ರ ಬರೀ ಶುಭ್ರವಾದ ಹೊಗೆಯಷ್ಟೇ ಕಾಣುತ್ತಿತ್ತು.

ಈ ರೀತಿ ಕಲ್ಪನಾ ಚಾವ್ಲಾ ಅವರು ಮತ್ತೆ ಭೂಮಿಗೆ ಎಂದೂ ಮರಳಿ ಬರಲಿಕ್ಕೆ ಸಾಧ್ಯವಾಗಲಿಲ್ಲ. ನಂತರ ನಾಸಾದವರು ಈ ಸುದ್ದಿಯನ್ನು ಹಂಚಿಕೊಂಡಾಗ ತಿಳಿದುಬಂತು. ಒಂದು ವೇಳೆ ಮೊದಲೇ ಈ ದುರಂತ ಸುದ್ದಿಯನ್ನು ಹೇಳಿದ್ದೇ ಆಗಿದ್ದಲ್ಲಿ ಗಗನಯಾತ್ರಿಗಳು ಆ 6 ದಿನಗಳು ತಮ್ಮ ಜೀವನವನ್ನು ಮುಷ್ಠಿಯಲ್ಲಿ ಹಿಡಿದು ಆತಂಕದಲ್ಲಿಯೇ ಬದುಕಬೇಕಾಗುತ್ತಿತ್ತು. ಇದೇ ಕಾರಣದಿಂದ ಅವರು 16 ದಿನಗಳಾದರೂ ಸಂತೋಷದಿಂದ ಬದುಕಲಿ ಎನ್ನುವ ಉದ್ದೇಶದಿಂದ ಯಾನದಲ್ಲಿರುವ ಸಮಸ್ಯೆಯನ್ನು ಗಗನಯಾತ್ರಿಗಳಿಗೆ ಹೇಳದೆ ಬಚ್ಚಿಟ್ಟಿದ್ದರು. ಮಿತ್ರರೇ, ಕಲ್ಪನಾ ಚಾವ್ಲಾ ಅವರು ಭಾರತೀಯರ ಪ್ರೇರಣೆಯಾಗಿದ್ದಾಳೆ. ಅವರು ನಮ್ಮೆಲ್ಲರ ಮತ್ತು ವಿಜ್ಞಾನಿಗಳ ಮನದಲ್ಲಿ ಸದಾ ಚಿರಂಜೀವಿಯಾಗಿತ್ತಾರೆ, ಅಲ್ಲವೇ?