ಗರುಡರಾಜ ಮೇಕೆಯ ಮೇಲೆ ಮಾಡಿದ ಭ#ಯಂಕರ ದಾಳಿಯ ವೈರಲ್ ವೀಡಿಯೋ! 35 ಮಿಲಿಯನ್ ವೀವ್ಸ್ ! ಮತ್ತು 999K ಲೈಕ್ಸ್!
ಮಾಂಸಾಹಾರಿ ಪ್ರಾಣಿಗಳು ಮತ್ತು ಪಕ್ಷಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇನ್ನೊಂದು ಪ್ರಾಣಿಗಳ ಬೇಟೆಯಾಡದೆ ಬೇರೆ ಮಾರ್ಗವೇ ಇಲ್ಲ. ಈ ಕಾಡು ಪ್ರಾಣಿಗಳು ಅಸಹಾಯಕ ಪ್ರಾಣಿಗಳ ಬೇಟೆ ಆಡುವ ವಿಡಿಯೋಗಳನ್ನು ನೋಡುವಾಗ ಎಷ್ಟೋ ಸಲ ಮನ ಕಲಕುತ್ತದೆ. ಆದರೆ ಈ ಪ್ರಾಣಿಗಳ ಆಹಾರವೇ ಮಾಂಸವಾಗಿರುವದರಿಂದ ಇನ್ನೊಂದು ಜೀವಿಯ ಬೇಟೆಯಾಡಿಯೇ ಬದುಕಬೇಕಾಗುತ್ತದೆ. ಇಲ್ಲವಾದರೆ ಈ ಪ್ರಾಣಿಗಳು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ.
ಈ ಕಾಡುಪ್ರಾಣಿ ಮತ್ತು ಪಕ್ಷಿಗಳು ಆಹಾರಕ್ಕಾಗಿ ಕೆಲವೊಮ್ಮೆ ಮಾಡುವ ಬೇಟೆಗಾರಿಕೆ ತುಂಬಾ ಭ#ಯಂಕರವಾಗಿ ಇರುತ್ತದೆ. ಕಾಡಿನಲ್ಲಿ ಬದುಕಲು ಮತ್ತು ಉಳಿಯಲು ಸದಾಕಾಲ ಸಂಘರ್ಷ ನಡೆದೇ ಇರುತ್ತದೆ. ಪಕ್ಷಿಗಳ ರಾಜನೆಂದು ಕರೆಸಿಕೊಳ್ಳುವ ಗರುಡ ಪಕ್ಷಿಯ ಬೇಟೆಯಾಡುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಸದ್ಯ ತುಂಬಾ ಸಂಚಲನ ಮೂಡಿಸಿದೆ.
ಈ ವೀಡಿಯೋವನ್ನು ಇಲ್ಲಿಯವರೆಗೆ 35 ಮಿಲಿಯನ್ ಗಿಂತಲೂ ಮೇಲ್ಪಟ್ಟು ಜನರು ನೋಡಿದ್ದಾರೆ ಹಾಗೂ 999 K ಗಿಂತಲೂ ಲೈಕ್ಸ್ ಗಳ ಸುರಿಮಳೆ ಆಗಿದೆ.
ಈ ವಿಡಿಯೋದಲ್ಲಿ ಗರುಡ ಪಕ್ಷಿಯು ತನಗಿಂತ ಭಾರವಾದ ಮೇಕೆಯ ಮೇಲೆ ಕಣ್ಣು ಹಾಕಿ ಅದನ್ನು ಬೇಟೆಯಾಡುವ ಕತರ್ನಾಕ್ ಪ್ರಯತ್ನ ಮಾಡಿದೆ. ಬೆಟ್ಟದಲ್ಲಿ ಮೇಕೆಯು ತನ್ನಷ್ಟಕ್ಕೆ ತಾನು ಮೇಯುತ್ತಿರುವಾಗ ಗರುಡವು ಮೇಕೆಯ ಮೇಲೆ ಅಟ್ಯಾಕ್ ಮಾಡಿದೆ.
ವಿಡಿಯೋ ನೋಡಿ
ಗರುಡವು ಮೇಕೆಯ ಮೇಲೆ ತನ್ನ ಕಾಲುಗಳ ಉಗುರಿನಿಂದ ಬಲವಾದ ಹಿಡಿತ ಸಾಧಿಸಲು ಯತ್ನಿಸಿದೆ. ಕಾರಣ ಗರುಡ ಪಕ್ಷಿಯು ಬೇಟೆ ದೊಡ್ಡದಾಗಿದ್ದರೆ ಅದನ್ನು ತನ್ನ ಕಾಲಿನ ಉಗುರುಗಳಲ್ಲಿ ಹಿಡಿದು ಆಕಾಶದಲ್ಲಿ ಎತ್ತರಕ್ಕೆ ಒಯ್ದು ಭೂಮಿಗೆ ಜೋರಾಗಿ ಅಪ್ಪಳಿಸುವಂತೆ ಮಾಡುತ್ತದೆ. ಇಲ್ಲಿಯೂ ಗರುಡ ಅದೇ ರೀತಿ ಮಾಡಲು ಹೋಗಿದೆ. ಆದರೆ ಮೇಕೆಯ ಭಾರ ಹೆಚ್ಚಾಗಿರುವುದರಿಂದ ಮತ್ತು ಬೆಟ್ಟದ ಇಳಿಜಾರಿನಲ್ಲಿ ಓಡಿ ಹೋಗುತ್ತಿರುವುದರಿಂದ ಮೇಕೆಯ ಬ್ಯಾಲನ್ಸ್ ತಪ್ಪಿ ಗರುಡಿಗೆ ತನ್ನ ಬೇಟೆಯನ್ನು ಸರಿಯಾಗಿ ಹಿಡಿಯಲು ಅನುಕೂಲವಾಗಿಲ್ಲ. ಹಾಗೂ ಮೇಕೆಯ ಜೊತೆಗೆ ಇನ್ನೊಂದು ಮೇಕೆ ಜೊತೆ ಇರುವುದರಿಂದಲೂ ಗರುಡಕ್ಕೆ ತನ್ನ ಬೇಟೆ ಸಾಧಿಸಲು ಕಷ್ಟವಾಗಿದೆ. ಆದರೂ ಗರುಡವು ಪಟ್ಟ ಕಷ್ಟ ಇತ್ತ ಮೇಕೆಯೂ ಬದುಕಲು ಮಾಡಿದ ಯತ್ನ ಎರಡು ನೋಡಲು ಅದ್ಭುತ ಮತ್ತು ಆಶ್ಚರ್ಯವಾಗಿದೆ ಎಂದು ಹೇಳಬಹುದು.