ಗರ್ಬಾದಲ್ಲಿ ಡಾನ್ಸ್ ಮಾಡುತ್ತಿವಾಗಲೇ ಯುವತಿ ಹಠಾತ್ ಬದಲಾಯಿಸಿದಳು ಡಾನ್ಸ್ ನ ವರಸೆ; ಆ ಒಂದು ಝಲಕ್ ಗಾಗಿ ವೈರಲ್ ಆಯಿತು VIDEO!

ಇತ್ತೀಚೆಗೆ ಕುಣಿತವು ಒಂದು ಎನರ್ಜಿ ನೀಡುವ ವಿಷಯವಾಗಿದೆ. ಪ್ರತಿಯೊಬ್ಬರಿಗೂ ಈಗ ಕುಣಿತ ಇಷ್ಟವಾಗುತ್ತಿದೆ. ಸಭೆ ಸಮಾರಂಭಗಳಲ್ಲಿಯಂತೂ ನೃತ್ಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಪುರುಷರಿಗಿಂತ ಸ್ತ್ರೀಯರಿಗೆ ನೃತ್ಯದಲ್ಲಿ ಹೆಚ್ಚು ಆಸಕ್ತಿ ಇರುವುದು ಕಂಡುಬರುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ತನ್ನ ಸಂಗಡಿಗರ ಜೊತೆಗೆ ಡಾನ್ಸ್ ಮಾಡುತ್ತಿರುವಾಗ ಹಠಾತ್ ಬದಲಾಯಿಸಿದ ವರಸೆ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಡಾನ್ಸಿನ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ಅನೇಕ ಮಹಿಳೆಯರು ಕೂಡಿಕೊಂಡು ನೃತ್ಯ ಸಾದರಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವತಿಯೊಬ್ಬಳು ಪತಿಯನ್ನು ನೋಡಿದ ತಕ್ಷಣ ತನ್ನ ಡಾನ್ಸ್ ಸ್ಟೆಪ್ ನ್ನೇ ಒಮ್ಮೆಲೇ ಚೇಂಜ್ ಮಾಡಿದ್ದಾಳೆ. ಜೊತೆಗೆ ತನ್ನ ಗಂಡನ ಸಲುವಾಗಿ ವಿಶೇಷ ಹಾಗೂ ಗಮನ ಸೆಳೆಯುವ ನೃತ್ಯವನ್ನು ಸಾದರಪಡಿಸಿದ್ದಾಳೆ. ಮಹಿಳೆಯ ಈ ಲುಕ್ ಯೂಸರ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.

ನೋಡಿ ಈ ಸುಂದರ ಡಾನ್ಸ್ ನ ವಿಡಿಯೋ…

ಗಂಡನಿಗಾಗಿ ಮಾಡಿದ ಮನಸೆಳೆಯುವ ಪುಟ್ಟ ಡಾನ್ಸಿನ ಈ ವಿಡಿಯೋದ ತುಣುಕನ್ನು ritu_patil_official ಹೆಸರಿನ ಅಕೌಂಟ್ನಿಂದ instagram ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ 15.9 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಸುಮಾರು 7 ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಹೊಂದಿದೆ.