ಗರ್ಭಿಣಿ ಪತ್ನಿಯನ್ನು ಬೆಟ್ಟದ ಮೇಲೇ ಸೆಲ್ಫಿ ತೆಗೆದುಕೊಳ್ಳಲು ಕರೆದುಕೊಂಡು ಹೋದ ಪತಿ: ಮುಂದೆ ಆಗಿದ್ದು ಊಹಿಸಲು ಕೂಡಾ ಸಾಧ್ಯವಿಲ್ಲ
ಪ್ರೇಮ ಕ್ಕೆ ಕಣ್ಣಿಲ್ಲ, ಪ್ರೇಮ ಕುರುಡು ಎನ್ನುವ ಮಾತನ್ನು ನಾವೆಲ್ಲರೂ ಕೂಡಾ ಕೇಳಿದ್ದೇವೆ. ಪ್ರೇಮದಲ್ಲಿ ಮುಳುಗಿದವರು ಯಾರನ್ನಾದರೂ ಹೃದಯಪೂರ್ವಕವಾಗಿ ಪ್ರೇಮಿಸಲು ಆರಂಭ ಮಾಡಿದರೆ ಅವರನ್ನು ಸಂಪೂರ್ಣವಾಗಿ ನಂಬಿ ಬಿಡುತ್ತಾರೆ. ಆದರೆ ಕೆಲವೊಮ್ಮೆ ತಾವು ಪ್ರೇಮಿಸಿದ, ನಂಬಿ ಅವರಿಗಾಗಿ ಜೀವನವನ್ನೇ ಮೀಸಲಿಟ್ಟಾಗ ಮುಂದೆ ಅವರಿಂದಾಗುವ ಅ ಪಾ ಯಗಳ ಬಗ್ಗೆ ಎಂದಿಗೂ ಕೂಡಾ ಯೋಚನೆ ಮಾಡಿರುವುದಿಲ್ಲ. ಏಕೆಂದರೆ ಪ್ರೇಮದ ಮಾಯೆಯೇ ಅದು, ಪ್ರೇಮದಲ್ಲಿ ಕಳೆದು ಹೋದರೆ ಪ್ರೇಮಿಸದವರು ಮಾಡುವ ತಂತ್ರಗಳ ಕುರಿತಾಗಿ ಅವರು ತೋಡುತ್ತಿರುವ ಹಳ್ಳದ ಬಗ್ಗೆ ಯಾಗಲೀ ಎಂದಿಗೂ ಅನುಮಾನ ಬರುವುದೇ ಇಲ್ಲ. ಈಗ ಇಂತಹುದೇ ಒಂದು ಘಟನೆ ನಡೆದಿದೆ. ಟರ್ಕಿಯಲ್ಲಿ ಪ್ರೇಮದ ಜಾಲ ಹೆಣೆದ ವ್ಯಕ್ತಿಯೊಬ್ಬರು ಹೇಗೆ ತನ್ನ ಪ್ರೀತಿಸಿದವರಿಗೆ ಮಾಡಿದ್ದಾನೆ ಮೋಸ ಎಂದು ತಿಳಿದರೆ ನಿಜಕ್ಕೂ ಇಂತಹ ಕ್ರೂ ರಿಗಳು ಕೂಡಾ ಇರುತ್ತಾರೆಯೆ ಎನಿಸಿಬಿಡುತ್ತದೆ.

ಟರ್ಕಿಯಲ್ಲಿ ನಡೆದಿರುವಂತಹ ಒಂದು ಘಟನೆ ಈಗ ಎಲ್ಲೆಡೆ ಸುದ್ದಿಯಾಗಿದೆ. ಇಲ್ಲಿನ ನಿವಾಸಿಯಾದ 32 ವರ್ಷ ವಯಸ್ಸಿನ ಸೆಮರಾ ಎಸ್ಸೆಲ್, ತನ್ನ 40 ವರ್ಷದ ಪತಿ ಹಕನ್ ಐಸಲ್ ಜೊತೆಗೆ ಬಟರ್ ಫ್ಲೈ ವ್ಯಾಲಿಗೆ ಹೋಗಿದ್ದಾರೆ. ಆಕೆ ಏಳು ತಿಂಗಳ ಗರ್ಭಿಣಿ ಕೂಡಾ ಆಗಿದ್ದರು. ಬೆಟ್ಟವನ್ನು ತಲುಪಿದ ಮೇಲೆ ಆಕೆಯ ಪತಿ ತನ್ನ ಪತ್ನಿಯೊಂದಿಗೆ ವಿವಿಧ ಕಡೆಗಳಲ್ಲಿ ಸುಂದರವಾದ ಸೆಲ್ಫಿಗಳನ್ನು ತೆಗೆದುಕೊಂಡಿದ್ದಾರೆ. ಈ ಸೆಲ್ಫಿಗಳಲ್ಲಿ ಆಕೆ ಸುಂದರವಾದ ನಗು ಎಲ್ಲರನ್ನೂ ಸೆಳೆಯುತ್ತದೆ. ಆಕೆಯ ಮುಖದಲ್ಲೊಂದು ಸಂತೃಪ್ತಿ ಹಾಗೂ ಸಂತೋಷವು ಕೂಡಾ ಕಾಣುತ್ತದೆ. ಆದರೆ ಆಕೆ ತನ್ನ ಪತಿ ತನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿರುವುದು ತನ್ನ ಮೇಲಿನ ಪ್ರೇಮದಿಂದ ಅಲ್ಲ ಎನ್ನುವುದನ್ನು ಆಕೆ ಊಹೆ ಕೂಡಾ ಮಾಡಿರಲಿಲ್ಲ.

ಹೆಂಡತಿಯೊಡನೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ತನ್ನ ಪತ್ನಿ ತನ್ನ ಬೆಟ್ಟದ ಮೇಲಿಂದ ಕೆಳಗೆ ತಳ್ಳಿ ಆಕೆಯನ್ನು ಹಾಗೂ ಆಕೆಯ ಗರ್ಭದಲ್ಲಿದ್ದ ಇನ್ನೂ ಭೂಮಿಗೆ ಬಾರದ ಅಮಾಯಕ ಕಂದನ ಸಾ ವಿ ಗೆ ಕಾರಣನಾಗಿದ್ದಾನೆ. ಇಲ್ಲಿ ಹೀಗೆ ಆ ವ್ಯಕ್ತಿಯು ತನ್ನನ್ನು ನಂಬಿದ್ದ ಪತ್ನಿಯ ಸಾ ವಿ ಗೆ ಕಾರಣವಾಗಿದ್ದು ಏಕೆ ಎನ್ನುವುದಾದರೆ ಆಕೆಯ ಹೆಸರಿನಲ್ಲಿದ್ದ ಜೀವ ವಿಮೆಯನ್ನು ತನ್ನದಾಗಿಸಿಕೊಳ್ಳಲು ಎನ್ನುವುದು ಅನಂತರ ತಿಳಿದು ಬಂದಿದೆ. ಪತ್ನಿಯನ್ನು ಬೆಟ್ಟದ ಮೇಲಿಂದ ತಳ್ಳಿ ಕೊಂ ದ ಈತ ಅಮಾಯಕನಂತೆ ಆಕೆಯ ಸಾವನ್ನು ಒಂದು ಅ ಪ ಘಾತ ಎಂದು ವಿವರಣೆಯನ್ನು ನೀಡಿದ್ದಾನೆ ಹಾಗೂ ಇನ್ಷೂರೆನ್ಸ್ ಕಂಪನಿಯಿಂದ 36 ಲಕ್ಷ ರೂಪಾಯಿಗಳ ಹಣವನ್ನು ಪಡೆದುಕೊಂಡಿದ್ದಾನೆ.

ಈ ಘಟನೆ 2018 ರಲ್ಲಿ ನಡೆದಿದ್ದಾದರೂ ತಪ್ಪು ಮಾಡಿದವನ ತಪ್ಪು ಒಂದಲ್ಲಾ ಒಂದು ದಿನ ಹೊರ ಬರಲೇ ಬೇಕು ಎನ್ನುವಂತೆ ಆತ ಮಾಡಿದ ತಪ್ಪು ಹೊರ ಬಂದಿದೆ. ಅದು ಹೇಗೆ ಎಂದರೆ ಅಂದು ಆತ ಪತ್ನಿಯನ್ನು ಬೆಟ್ಟದ ಮೇಲಿಂದ ನೂಕಿರುವ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಇದ್ದಕ್ಕಿದ್ದಂತೆ ವೈರಲ್ ಆಗಿದೆ. ಅಂದು ಹೆಂಡತಿಯನ್ನು ಬೆಟ್ಟಕ್ಕೆ ಕರೆದುಕೊಂಡ ಹೋದ ವೇಳೆಯಲ್ಲಿ ಆತ ಪತ್ನಿಯೊಡನೆ ಬಹಳ ಸಮಯ ಬೆಟ್ಟದ ಮೇಲೆಯೇ ಉಳಿದಿದ್ದ ಎನ್ನಲಾಗಿದೆ. ಬೆಟ್ಟದ ಮೇಲೆ ಜನದಟ್ಟಣೆ ಕಡಿಮೆಯಾಗಲಿ ಎಂದು ಕಾಯುತ್ತಿದ್ದು, ಅವಕಾಶ ಸಿಕ್ಕ ಕೂಡಲೇ ಹೆಂಡತಿಯನ್ನು ಬೆಟ್ಟದ ಮೇಲೆ ನೂಕಿದ್ದಾನೆ. ಪ್ರವಾಸಿಗರು ಅಲ್ಲಿ ಮಾಡಿದ್ದ ವೀಡಿಯೋ ಒಂದರಿಂದ ಬಹು ದಿನಗಳ ನಂತರ ಈ ವಿಷಯ ಬಯಲಾಗಿದೆ.

ಹೆಂಡತಿಯನ್ನು ಬೆಟ್ಟದ ಮೇಲಿಂದ ನೂಕಿದ ಆ ಕಿ ರಾ ತಕನಿಗೆ ತನ್ನ ಈ ಕೃತ್ಯ ಪ್ರವಾಸಿಗನೊಬ್ಬನ ಕ್ಯಾಮೆರಾ ದಲ್ಲಿ ಬಂ ಧಿ ತವಾಗಿದೆ ಎನ್ನುವುದು ಅವನಿಗೆ ತಿಳಿದೇ ಇರಲಿಲ್ಲ. ವೀಡಿಯೋ ವೈರಲ್ ಆದ ಕೂಡಲೇ ಕಾರ್ಯ ಪ್ರವೃತ್ತರಾದ ಪೋಲಿಸರು ಆತನನ್ನು ಬಂ ಧಿ ಸಿದ್ದಾರೆ. ಅನಂತರ ನ್ಯಾಯಾಲಯದಲ್ಲಿ ವಿಚಾರಣೆಯನ್ನು ನಡೆಸಲಾಗಿ, ವಿಚಾರಣೆಯ ನಂತರ
ಕ ಠಿ ಣ ಶಿ ಕ್ಷೆಯನ್ನು ಕೂಡಾ ವಿಧಿಸಲಾಗಿದೆ. ಈ ಘಟನೆಯ ವಿಷಯ ತಿಳಿದ ಪ್ರತಿಯೊಬ್ಬರಿಗೂ ಕೂಡಾ ಒಂದು ಕ್ಷಣ ಭ ಯ ಹುಟ್ಟಿಸಿದೆ. ಜನರಿಗೆ ತಾವು ಅಪಾರವಾಗಿ ಪ್ರೀತಿಸಿದವರ ಮೇಲೆ ಇರುವ ನಂಬಿಕೆ ಹಾಗೂ ವಿಶ್ವಾಸಗಳ ಮೇಲೆ ಅನುಮಾನವನ್ನು ಹುಟ್ಟಿಸಿದೆ ಈ ಘಟನೆ.