ಗರ್ಲ್ ಫ್ರೆಂಡ್ ಳ ಮದುವೆಯಲ್ಲಿಯೇ ಬಾಯ್ ಫ್ರೆಂಡ್ ಮಾಡಿದನು ಗಂಡನ ಮುಂದೆ ಪ್ರಪೋಸ್! ನಂತರದ ದೃಶ್ಯ? ನೋಡಿ ಈ ವಿಡಿಯೋದಲ್ಲಿ…

ಗರ್ಲ್ ಫ್ರೆಂಡ್ ಇನ್ನೊಬ್ಬನ ಜೊತೆಗೆ ಮದುವೆ ಮಾಡಿಕೊಳ್ಳುತ್ತಿರುವಾಗ ಮಧ್ಯದಲ್ಲಿಯೇ ಬಾಯ್ ಫ್ರೆಂಡ್ ನ ಎಂಟ್ರಿ ಆಗುತ್ತದೆ. ಈ ಶಾಕ್ ನೀಡದ್ದು ಕಡಿಮೆಯೇನೋ ಎಂಬಂತೆ ಬಾಯ್ ಫ್ರೆಂಡ್ ಎಲ್ಲರೆದುರಿಗೆ ಇನ್ನೊಂದು ದೊಡ್ಡ ಶಾಕ್ ನೀಡುತ್ತಾನೆ. ಈ ದೃಶ್ಯ ಯಾವುದಾದರೂ ಒಂದು ಚಲನಚಿತ್ರದಲ್ಲಿ ನೋಡುವ ಸೀನ್ ತರ ಇತ್ತು ಅನ್ನಬಹುದು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಮದುವೆಯಲ್ಲಿ ಹಠಾತ್ ಪ್ರವೇಶ ಮಾಡುತ್ತಾನೆ. ಅಷ್ಟೇ ಅಲ್ಲ ಆಕೆಯ ಜೊತೆಗೆ ಸ್ಟೇಜ್ ಮೇಲೆಯೂ ಹೋಗುತ್ತಾನೆ. ಅಲ್ಲಿ ಸ್ಟೇಜ್ ಮೇಲೆ ಹೋಗಿ ವರನಿಗೆ ಬದಿಗೆ ಸರಿಸಿ ಎಲ್ಲರ ಮುಂದೆಯೇ ವಧುವಿಗೆ ಪ್ರಪೋಸ್ ಮಾಡುತ್ತಾನೆ. ತದನಂತರ ಅಲ್ಲಿ ನಡೆದ ಮುಂದಿನ ದೃಶ್ಯ ನೋಡಿ ಅಲ್ಲಿದ್ದ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. ಅವರ ಜೊತೆಗೆ ವಿಡಿಯೋ ನೋಡುವ ನಿಮಗೂ ಸಹ ಆಶ್ಚರ್ಯವೆನಿಸದೆ ಇರದು.

ಮದುವೆಯಲ್ಲಿ ಈ ರೀತಿಯ ಘಟನೆ ನಡೆದಾಗ ಮುಂದಿನ ದೃಶ್ಯ ಹೇಗಿರುತ್ತದೆ ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮೊದಲು ಆ ಯುವಕನನ್ನು ಹಿಡಿದು ಚೆನ್ನಾಗಿ ಥಳಿಸುತ್ತಾರೆ. ವಧು ಒಂದು ವೇಳೆ ಬಾಯ್ ಫ್ರೆಂಡ್ ಜೊತೆಗೆ ಹೋಗುವ ವಿಚಾರಮಾಡಿದರೆ ಆಕೆಯನ್ನು ಸಹ ಒಂದು ಕೈ ನೋಡುತ್ತಾರೆ. ಈ ಸಮಯದಲ್ಲಿ ವರನ ಕಡೆಯವರು ದೊಡ್ಡ ಜಗಳವನ್ನೇ ಕಾಯುತ್ತಾರೆ. ಹೀಗೆ ಇನ್ನೂ ಅನೇಕ ಬೇಡವಾದ ವಿಷಯಗಳು ಆ ಮದುವೆಯ ಸ್ಟೇಜಿನಲ್ಲಿ ನಡೆಯುತ್ತವೆ. ಆದರೆ ಅಂತಹ ಯಾವುದೇ ಘಟನೆಗಳು ಈ ಮದುವೆಯಲ್ಲಿ ನಡೆಯದೆ ಸಂಪೂರ್ಣವಾಗಿ ಅದರ ವಿರುದ್ಧ ನಡೆದಿರುವ ದೃಶ್ಯ ಕಂಡುಬರುತ್ತದೆ. ಇಲ್ಲಿ ನಡೆದಿರುವ ಘಟನೆಯ ಬಗ್ಗೆ ಯಾರು ಕನಸಿನಲ್ಲಿಯೂ ವಿಚಾರ ಮಾಡಲಿಕ್ಕಿಲ್ಲ.

ವಿಡಿಯೋದಲ್ಲಿ ಕಂಡುಬರುವ ಹಾಗೆ, ವಧು-ವರರು ಸ್ಟೇಜ್ ಮೇಲೆ ನಿಂತಿದ್ದಾರೆ. ಮದುಮಗ ಕೈಯಲ್ಲಿ ಗುಲಾಬಿ ಹೂವನ್ನು ಹಿಡಿದುಕೊಂಡು ನಿಂತಿದ್ದಾನೆ. ಆಗ ಹಠಾತ್ ವಧುವಿನ ಬಾಯ್ ಫ್ರೆಂಡ್ ಎಂಟ್ರಿ ಮಾಡಿ ವಧುವಿನ ಮುಂದೆ ಮೊಳಕಾಲೂರಿ ಕುಳಿತು ಆಕೆಯನ್ನೇ ಪ್ರಪೋಸ್ ಮಾಡುತ್ತಾನೆ. ಆಗ ಅಲ್ಲಿದ್ದವರೆಲ್ಲರೂ ಬೆರಗಾಗಿ ಈ ದೃಶ್ಯವನ್ನೆಲ್ಲ ನೋಡುತ್ತಾರೆ.

ಈ ಪ್ರಸಂಗದಲ್ಲಿ ವಧು ವರರ ಮುಖದಲ್ಲಿ ತೀವ್ರ ಬದಲಾವಣೆ ಕಂಡು ಬರುತ್ತದೆ. ಆದರೂ ಪರಿಸ್ಥಿತಿಯನ್ನು ಅರಿತ ವರ ಹಿಂದೆ ಸರಿಯುತ್ತಾನೆ. ಆಗ ವಧು ವರನ ಕಡೆಗೆ ನೋಡಿದಾಗ ವರ ನಿರ್ವಿಕಾರ ಭಾವದಿಂದ ಯುವಕನ ಪ್ರಪೋಸ್ ಸ್ವೀಕರಿಸು ಎಂದು ವಧುವಿಗೆ ಸನ್ನೆ ಮಾಡುತ್ತಾನೆ.

ವಿಡಿಯೋ ನೋಡಿ

ಪ್ರಸ್ತುತ ಈ ವಿಡಿಯೋವನ್ನು bhutni_ke_memes ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿ ನೇಟಿಜನ್ಸಗಳು ಅನೇಕ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.