ಗಾಯಾಳು ಹಸುವಿನ ಪ್ರಾಣ ಉಳಿಸಲು ಹೆಲಿಕಾಪ್ಟರ್ ನಿಂದ ಏರ್ ಲಿಫ್ಟ್ ಮಾಡಿಸಿದ ರೈತ! ನೋಡಿ ಈ ವಿಡಿಯೋ!

ಸಾಕು ಪ್ರಾಣಿಗಳೆಂದರೆ ಸಹಜವಾಗಿಯೇ ಎಲ್ಲರಿಗೂ ಪ್ರೀತಿ ಇರುತ್ತದೆ. ಕೆಲವರಂತೂ ಅವುಗಳನ್ನು ಕೂಡಾ ತಮ್ಮ ಕುಟುಂಬದ ಸದಸ್ಯರಂತೇ ಬಹಳ ಪ್ರೀತಿ ಮತ್ತು ಆಪ್ಯಾಯತೆ ತೋರುವುದು ಮಾತ್ರವೇ ಅಲ್ಲದೇ ಅವುಗಳ ಆರೋಗ್ಯದ ಬಗ್ಗೆ ಕೂಡಾ ತೀವ್ರವಾದ ಕಾಳಜಿಯನ್ನು ವಹಿಸುತ್ತಾರೆ. ಅವುಗಳ ಕಾಳಜಿಗಾಗಿ ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ಸಿದ್ಧರಾಗಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ವೀಡಿಯೋ ನೋಡಿದಾಗ ನಾವು ಮೇಲೆ ಏನು ಹೇಳಿದ್ವಿ ಆ ಮಾತುಗಳೆಲ್ಲಾ ಅಕ್ಷರಶಃ ನಿಜ ಅನ್ನೋದಕ್ಕೆ ಈ ವೀಡಿಯೋ ಸಾಕ್ಷಿ ಆಗಿದೆ.

ವೈರಲ್ ಆಗಿರೋ ವಿಡಿಯೋದಲ್ಲಿ ಹೆಲಿಕಾಪ್ಟರ್ ಬಳಸಿ ಒಂದು ಹಸುವನ್ನು ಏರ್ ಲಿಫ್ಟ್ ಮಾಡಿರುವುದನ್ನು ನಾವು ನೋಡಬಹುದಾಗಿದೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಬಹಳಷ್ಟು ವ್ಯಾಪಕವಾಗಿ ನೋಡಿರೋದು ಮಾತ್ರವಲ್ಲ ವೀಡಿಯೋನ ಬಹಳಷ್ಟು ಜನ ಹಂಚಿಕೊಂಡಿದ್ದಾರೆ ಕೂಡಾ. ಈ ಘಟನೆಯ ಹಿನ್ನೆಲೆಗೆ ಬಂದರೆ, ಈ ಪ್ರಕರಣ ನಡೆದಿದ್ದು ಸ್ವಿಟ್ಜರ್ಲೆಂಡ್‌ನ ಆಲ್ಪ್ಸ್ ಬೆಟ್ಟಗಳ ಸಾಲಿನಲ್ಲಿ. ಅಲ್ಲಿ ರೈತನೊಬ್ಬರ ಹಸು ಸಂಕಷ್ಟ ದಲ್ಲಿ ಸಿಕ್ಕಿ ಬಿದ್ದಿದೆ. ಹಸು ಗಾಯಗೊಂಡಿದ್ದು, ನಡೆಯಲಾಗದ ಪರಿಸ್ಥಿತಿಯಲ್ಲಿ ಅದು ಕುಂಟುತ್ತಾ ಹೆಜ್ಜೆಗಳನ್ನು ಇಡುತ್ತಿತ್ತು ಎನ್ನಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಹಸುವನ್ನು ಅಲ್ಲಿಂದ ಸುರಕ್ಷಿತವಾಗಿ ಕರೆ ತರಲು ಬೇರಾವ ಮಾರ್ಗವೂ ಇಲ್ಲವೆಂದು ರೈತನು ಹಸುವನ್ನು ಹೆಲಿಕಾಪ್ಟರ್ ಸಹಾಯದಿಂದ ಏರ್ ಲಿಫ್ಟ್ ಮಾಡಲು ನಿರ್ಧಾರ ಮಾಡಿದ್ದಾರೆ.

ಅವರ ಆ ಪ್ಲಾನ್ ಯಶಸ್ವಿ ಕೂಡಾ ಆಗಿದೆ. ಹೆಲಿಕಾಪ್ಟರ್ ನಲ್ಲಿ ಹಸುವನ್ನು ಅಪಾಯದಿಂದ ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಿರುವ ಸಂಪೂರ್ಣ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ, ವೀಡಿಯೋದಲ್ಲಿ ಹಸುವನ್ನು ಏರ್ ಲಿಫ್ಟ್ ಮಾಡಿರುವುದು, ಹಸು ಗಾಳಿಯಲ್ಲಿ ಮೇಲೇರುವಂತೆ ಕಂಡಿದೆ. ಆದರೆ ಈ ಪರಿಸ್ಥಿತಿಯಲ್ಲಿ ಗಾಬರಿಗೊಂಡ ಹಸು ಮಾತ್ರ ಕಿರುಚುತ್ತಿರುವುದು ಕಂಡುಬಂದಿದೆ. ಹಸುವನ್ನು ಉಳಿಸುವ ಈ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಎಬಿಸಿ ನ್ಯೂಸ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಜೊತೆಗೆ ಸ್ವಿಟ್ಜರ್ಲೆಂಡ್‌ ನ ರೈತನು ಹೆಲಿಕಾಪ್ಟರ್ ತರಿಸಿ, ತನ್ನ ಪ್ರೀತಿಯ ಹಸುವನ್ನು ಉಳಿಸಲು ಏರ್ ಲಿಫ್ಟ್ ಮಾಡಿಸಿದನು ಎಂದು ವಿವರಿಸಿದೆ.

ವಿಡಿಯೋ ನೋಡಿ…..

ಆಲ್ಪ್ಸ್ ಬೆಟ್ಟಗಳ ಸಾಲಿನಲ್ಲಿ ಸಿಲುಕಿಕೊಂಡು, ಗಾಯವಾಗಿದ್ದ ಹಸುವಿಗೆ ಏನೂ ತೊಂದರೆಯಾಗದಿರಲೆಂದು ರೈತ ಹೆಲಿಕಾಪ್ಟರ್‌ಗೆ ಕರೆ ಮಾಡಿ ಅಲ್ಲಿಂದ ಹೊರಗೆ ಬರುವಂತೆ ಮಾಡಿದ ಎಂದು ಕೂಡಾ ವಿವರಿಸಿದೆ. ಸೋಶಿಯಲ್ ಮೀಡಿಯಾದ ಲ್ಲಿ ವೈರಲ್ ಆದ ಈ ವೀಡಿಯೋವನ್ನು ಆರು ಲಕ್ಷ ಜನರು ವೀಕ್ಷಣೆ ಮಾಡಿದ್ದರೆ, ಒಂಬತ್ತೂವರೆ ಸಾವಿರ ಲೈಕ್ಸ್ ಗಳು, ಎರಡು ಸಾವಿರಕ್ಕಿಂತ ಅಧಿಕ ರೀಟ್ವೀಟ್ ಗಳನ್ನು ಈ ವೀಡಿಯೋ ಪಡೆದುಕೊಂಡಿದೆ. ಟ್ವಿಟರ್ ಬಳಕೆದಾರರು ಈ ರಕ್ಷಣಾ ಕಾರ್ಯಾಚರಣೆ ಬಗ್ಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.‌ ಜನರು ಇದೇ ನಿಜವಾದ ಪ್ರಾಣಿ ಪ್ರೀತಿ ಎಂದು ರೈತನನ್ನು ಹಾಡಿ ಹೊಗಳಿದ್ದಾರೆ ಕೂಡಾ.