ಗುರಿಯ ಮುಂದೆ ದೈಹಿಕ ನ್ಯೂನತೆ ಅಡ್ಡಿಯಲ್ಲ: ದೇಶದ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಈ ಮಹಿಳಾ ಐಎಎಸ್ ಅಧಿಕಾರಿ.

ಜಗತ್ತಿನಲ್ಲಿ ಯಾವುದೂ ಕೂಡ ಅಸಂಭವ ಅರ್ಧ ಎಂದು ಹೇಳುತ್ತಾರೆ ಯಾರಿಗೆ ಸಾಧಿಸುವ ಛಲ ಇರುತ್ತದೆ ಸಾಧನೆಯ ಕಡೆಗೆ ಸಾಗುವ ಧೈರ್ಯವಿರುತ್ತದೆ ನಿರಂತರ ಪ್ರಯತ್ನ ಮಾಡುವ ತಾಳ್ಮೆ ಇರುತ್ತದೆಯೋ ಎಲ್ಲದಕ್ಕಿಂತ ಮಿಗಿಲಾಗಿ ಗುರಿಯನ್ನು ತಲುಪುವ ಆತ್ಮವಿಶ್ವಾಸ ಇರುತ್ತದೆ ಅಂತಹವರನ್ನು ಯಶಸ್ಸಿನ ಹಾದಿಯಲ್ಲಿ ನಡೆಯುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಹಾಗೂ ಅವರನ್ನು ತಡೆಯುವ ಶಕ್ತಿಗಳು ಕೂಡ ಯಾವುದೂ ಇರುವುದಿಲ್ಲ ಬಹುಶಹ ಅಂತಹುದೇ ಆತ್ಮವಿಶ್ವಾಸದಿಂದ ಆಗಿ ನಾವಿಂದು ಹೇಳಲು ಹೊರಟಿರುವ ಈ ಮಹಿಳಾ ಐಎಎಸ್ ಅಧಿಕಾರಿ ದೇಶದ ಹೆಣ್ಣುಮಕ್ಕಳಿಗೆ ಒಂದು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಹಾಗೂ ಸಾಧಿಸುವ ಛಲ ಉಳ್ಳವರಿಗೆ ಪ್ರೇರಣೆ ಕೂಡ ಆಗಿದ್ದಾರೆ ಮಹಿಳಾ ಐಎಎಸ್ ಅಧಿಕಾರಿಯ ಜೀವನ ನಮ್ಮ-ನಿಮ್ಮಂತೆ ಸಾಮಾನ್ಯವಾಗಿ ಇರಲಿಲ್ಲ ಬಾಲ್ಯದಲ್ಲೇ ಬಹಳಷ್ಟು ಕಷ್ಟಗಳನ್ನು ಸಮಸ್ಯೆಗಳನ್ನು ಹಾಕಿ ಎದುರಿಸಬೇಕಾಯಿತು ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಕೆ ಯಾಕೆ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾದರು ಆಕೆಯ ದೈಹಿಕ ನ್ಯೂನ್ಯತೆ ಕೈಯನ್ನು ಸಾಧ್ಯವಾಗಲಿಲ್ಲ.

ಇಂತಹುದೊಂದು ಸಾಧನೆ ಮಾಡಿದ ಈ ಐ ಎ ಎಸ್ ಅಧಿಕಾರಿಯ ಹೆಸರು ಆರತಿ ಡೋಗ್ರಾ. ಇವರು ಮೂಲತಃ ಉತ್ತರಾಖಂಡ್ ನ ಡೂನ್ ನಲ್ಲಿರುವ ವಿಜಯ್ ಕಾಲೋನಿಯ ನಿವಾಸಿಯಾಗಿದ್ದಾರೆ. ಆರತಿ ಅವರ ಬಾಲ್ಯದ ಜೀವನ ಯಾವುದೇ ಸಂ ಘ ರ್ಷಕ್ಕೆ ಕಡಿಮೆಯಿರಲಿಲ್ಲ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣವಾಗಿದ್ದು ಅವರ ಎತ್ತರ. ಆರತಿಯವರು ಕೇವಲ ಮೂರು ಅಡಿ ಎರಡು ಇಂಚು ಎತ್ತರವಾಗಿದ್ದರು. ಬಾಲ್ಯದಲ್ಲಿ ವೈದ್ಯರು ಆರತಿ ಅವರ ತಂದೆ ತಾಯಿಗೆ ನಿಮ್ಮ ಮಗಳು ಸಾಮಾನ್ಯ ಮಕ್ಕಳು ಓದುವ ಶಾಲೆಯಲ್ಲಿ ಅಧ್ಯಯನ ಮಾಡುವುದು ಕಷ್ಟ ಎಂದು ಹೇಳಿ ಬಿಟ್ಟಿದ್ದರು‌. ಆದರೆ ಆರತಿ ಅವರ ತಂದೆ ತಾಯಿ ಅದರಿಂದ ಧೃತಿಗೆಡಲಿಲ್ಲ.

ಸೇನೆಯಲ್ಲಿ ಅಧಿಕಾರದಲ್ಲಿದ್ದ ಆರತಿ ಅವರ ತಂದೆ ರಾಜೇಂದ್ರ ಡೋಗ್ರಾ ಮತ್ತು ಶಾಲೆಯೊಂದರ ಪ್ರಿನ್ಸಿಪಾಲ್ ಆಗಿದ್ದ ತಾಯಿ ಕುಂಕುಮ್ ಅವರು ಮಗಳಲ್ಲಿ ಉತ್ಸಾಹವನ್ನು ತುಂಬಿದರು. ಮಗಳನ್ನು ಸಾಮಾನ್ಯ ಮಕ್ಕಳ ಶಾಲೆಗೆ ಕಳುಹಿಸಿದರು, ಅನ್ಯ ಮಕ್ಕಳಂತೆ ಆಟ ಪಾಠ ಗಳಲ್ಲಿ ಮಗಳನ್ನು ಪಾಲ್ಗೊಳ್ಳಲು ಸಿದ್ಧಪಡಿಸಿದರು.ಆರತಿ ಅವರೇ ಸಂದರ್ಶನ ಒಂದರಲ್ಲಿ ತಮ್ಮ ತಂದೆ ತಾಯಿ ತನಗಾಗಿ ಎಷ್ಟೆಲ್ಲಾ ಗಮನ ನೀಡುತ್ತಿದ್ದರು ಎನ್ನುವ ವಿಷಯವನ್ನು ಹಂಚಿಕೊಂಡಿದ್ದರು. ತಂದೆ ತನಗೆ ಕುದುರೆ ಸವಾರಿಯನ್ನು ಕೂಡಾ ಹೇಳಿ ಕೊಟ್ಟಿದ್ದರು ಎಂದು ತಿಳಿಸಿದ್ದರು. ಶಾಲಾ ಶಿಕ್ಷಣ ಮುಗಿಸಿದ ನಂತರ ಅವರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿಗೆ ಪದವಿ ಶಿಕ್ಷಣಕ್ಕಾಗಿ ಸೇರಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳ ರಾಜಕಾರಣದಲ್ಲಿ ಭಾಗವಹಿಸಿದ ಅವರು ವಿದ್ಯಾರ್ಥಿ ನಾಯಕಿ ಕೂಡಾ ಆಗಿ ಆಯ್ಕೆಯಾದರು. ಪದವಿ ಮುಗಿದ ನಂತರ ಅವರು ಪಿಜಿಯನ್ನು ಡೆಹ್ರಾಡೂನ್ ನಲ್ಲಿ ಮುಗಿಸಿದರು. ಇದಾದ ನಂತರ ಅವರು ಒಮ್ಮೆ ಡೆಹ್ರಾಡೂನ್ ನ ಕಲೆಕ್ಟರ್ ಮನೀಶ್ ಅವರನ್ನು ಭೇಟಿ ಮಾಡಿದರು. ಅಲ್ಲಿಂದಲೇ ಆರತಿ ಅವರ ಜೀವನ ಕೂಡಾ ಬದಲಾಯಿತು. ಆರತಿ ಅವರು ಹೇಳುವಂತೆ ಮನೀಶ್ ಆರತಿಗೆ ಐಎಎಸ್ ಪರೀಕ್ಷೆ ಮಾಡುವಂತೆ ಪ್ರೇರಣೆಯನ್ನು ನೀಡಿದರಂತೆ. ಆಗಲೇ ಆರತಿ ಐಎಎಸ್ ಮಾಡುವ ನಿರ್ಣಯವನ್ನು ಮಾಡಿದರು. ಅದನ್ನು ಅವರು ತಮ್ಮ ತಂದೆಗೆ ಕೂಡಾ ತಿಳಿಸಿದರು‌.

ಆರತಿ ಅವರ ತಂದೆ ಕೂಡಾ ಮಗಳ ನಿರ್ಧಾರಕ್ಕೆ ಸಾಥ್ ನೀಡಿದರು. ಆರತಿ ಐಎಎಸ್ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸಿದರು. ಆರತಿ ಅವರು 2006 ರ ಬ್ಯಾಚ್ ನಲ್ಲಿ ಐಎಎಸ್ ಅಧಿಕಾರಿಯಾಗಿ ನೇಮಕವಾದರು. ಲಿಖಿತ ಪರೀಕ್ಷೆಗಳನ್ನು ಪಾಸ್ ಮಾಡಿದ್ದ ಆರತಿ ಸಂದರ್ಶನದ ವೇಳೆ ನರ್ವಸ್ ಆಗಿದ್ದರಂತೆ. ಆದರೆ ಅಲ್ಲಿ ಕೂಡಾ ಸಿಕ್ಕ ಪ್ರೋತ್ಸಾಹ ಹಾಗೂ ನೆರವು ಅವರು ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸಲು ನೆರವಾಯಿತು. ಹೀಗೆ ಮೊದಲ ಪ್ರಯತ್ನದಲ್ಲೇ ಆರತಿ ಡೋಗ್ರಾ ಐಎಎಸ್ ಅಧಿಕಾರಿಯಾದರು. ರಾಜಸ್ಥಾನದಲ್ಲಿ ಐಎಎಸ್ ಅಧಿಕಾರಿಯಾಗಿ ಆರತಿ ಅವರು ಮಾಡಿದ ಸುಧಾರಣೆಗಳು ಅವರಿಗೆ ದೊಡ್ಡ ಹೆಸರು ಹಾಗೂ ಜನಪ್ರಿಯತೆ ಎರಡನ್ನೂ ತಂದು ಕೊಟ್ಟಿದೆ.

ಜೀವನದಲ್ಲಿ ಏನಾದರೂ ಸಾಧಿಸಬೇಕು, ಸಮಾಜದಲ್ಲೊಂದು ಸ್ಥಾನವನ್ನು ಪಡೆಯಲೇಬೇಕು ಎ‌ಂದು ದೃಢ ನಿಶ್ಚಯವನ್ನು ಮಾಡಿ, ಅದಕ್ಕಾಗಿ ಶ್ರಮ ಹಾಗೂ ಪ್ರಯತ್ನ ಇದ್ದರೆ ಯಾವುದೇ ಗುರಿಯನ್ನು ತಲುಪುವುದು ಕೂಡಾ ಅಸಾಧ್ಯ ಅಲ್ಲ ಎನ್ನುವುದಕ್ಕೆ ಒಂದು ಅತ್ಯುತ್ತಮವಾದ ಉದಾಹರಣೆಯಾಗಿದೆ ಆರತಿ ಡೋಗ್ರಾ ಅವರ ಜೀವನ ಹಾಗೂ ಸಾಧನೆ. ಇದು ನಿಜಕ್ಕೂ ದೇಶದ ಅದೆಷ್ಟೋ ಜನರಿಗೆ ಸ್ಪೂರ್ತಿ ಹಾಗೂ ಪ್ರೇರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನಬಹುದು.