ಗೂಗಲ್ ಮ್ಯಾಪ್ ನಂಬಿ ಶಾರ್ಟ್ ಕಟ್ ದಾರಿಗೆ ಹೋದ, ಪ್ರಾಣಾನೆ ಕಳೆದುಕೊಂಡ!
ಸದ್ಯ ಮೊದಲಿಗಿಂತಲೂ ವಾಹನಗಳ ಸಂಖ್ಯೆ ತುಂಬಾ ಹೆಚ್ಚಾಗಿವೆ. ಅದರಂತೆ ಜನರ ಓಡಾಟವೂ ಸಹಿತ ಹೆಚ್ಚಳವಾಗಿದೆ. ಜೊತೆಗೆ ಖಾಸಗಿ ವಾಹನಗಳ ಸಂಖ್ಯೆ ಮಿತಿಮೀರಿದೆ. ಹೀಗಾಗಿ ಪ್ರವಾಸದಲ್ಲಿರುವ, ತಿರುಗಾಡುವ ಹೆಚ್ಚಿನ ಸಂಖ್ಯೆಯ ಜನರು ತಾವು ಹೋಗಬಯಸುವ ಸ್ಥಳಗಳಿಗೆ ತಲುಪಲು ಗೂಗಲ್ ಮ್ಯಾಪ್ ಸಹಾಯವನ್ನು ತೆಗೆದುಕೊಳ್ಳುತ್ತಾರೆ.
ಗೂಗಲ್ ಮ್ಯಾಪ್ ಇದು ಶಾರ್ಟ್ ಕಟ್ ರಸ್ತೆಯನ್ನು ತೋರಿಸುತ್ತದೆ. ಇದು ತೋರಿಸಿದ ಶಾರ್ಟ್ಕಟ್ ರಸ್ತೆಯು ವ್ಯಕ್ತಿಯ ಜೀವಕ್ಕೆ ಅಪಾಯವನ್ನು ತಂದಿದೆ. ಗೂಗಲ್ ಮ್ಯಾಪ್ ತೋರಿಸಿದ ತಪ್ಪು ಮಾರ್ಗದಿಂದಾಗಿ ಓರ್ವ ವ್ಯಕ್ತಿ ಜೀವ ಕಳೆದುಕೊಂಡು ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ.
ಮಾಸ್ಕೋ
ಪ್ರವಾಸ ಮಾಡುವವರು ಸರಿ ದಾರಿಯನ್ನು ಹುಡುಕಲು ಮತ್ತು ದಾರಿ ತಪ್ಪಿದಾಗ ಸಹಾಯ ಪಡೆಯಲು ಗೂಗಲ್ ಮ್ಯಾಪ್ ಮೊರೆ ಹೋಗುತ್ತಾರೆ. ಹಾಗೆ ನೋಡಲಾಗಿ ಗೂಗಲ್ ಮ್ಯಾಪ್ ನಿಂದ ಅನೇಕ ಡ್ರೈವರ್ ಗಳ ಸಮಸ್ಯೆಗಳು ದೂರಾಗಿವೆ. ಗೂಗಲ್ ಮ್ಯಾಪ್ ಯಾವತ್ತೂ ಕಡಿಮೆ ಸಮಯದಲ್ಲಿ ಹೋಗಿ ಮುಟ್ಟುವ ಶಾರ್ಟ್ಕಟ್ ದಾರಿಯನ್ನು ತೋರಿಸುತ್ತದೆ. ಇದರಿಂದ ಎಷ್ಟೋ ಸಲ ಕೆಲವರಿಗೆ ಸಮಸ್ಯೆಗಳು ಆಗಿರುವುದುಂಟು. ಈಗ ವ್ಯಕ್ತಿಯೊಬ್ಬನು ಗೂಗಲ್ ಮ್ಯಾಪ್ ತಪ್ಪಿನಿಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ವರದಿಯಾಗಿದೆ.

ದ ಸನ್ ನೀಡಿದ ವೃತ್ತದ ಪ್ರಕಾರ, ಸರ್ಗೆ ಉಸ್ತಿನೋವ್ ಮತ್ತು ವಾಲ್ದಿಸ್ಲಾವ್ ಇಸ್ತೋಮಿನ್ ಇವರಿಬ್ಬರು ಸೈಬೇರಿಯಾದಲ್ಲಿಯ ಪೋರ್ಟ್ ಆಫ್ ಮ್ಯಾಗದಾನ್ ಪ್ರಾಂತಕ್ಕೆ ತೆರಳುತ್ತಿದ್ದರು. ಈ ಪ್ರಾಂತವು ಜಗತ್ತಿನ ಅತೀ ಹೆಚ್ಚು ಛಳಿಯುಳ್ಳ ಪ್ರದೇಶವಾಗಿದೆ. ಈ ಸ್ಥಳಕ್ಕೆ ಹೋಗಲು ಇಬ್ಬರೂ ಗೂಗಲ್ ಮ್ಯಾಪ್ ನ ಸಹಾಯ ತೆಗೆದುಕೊಂಡರು.
ಆದರೆ ಗೂಗಲ್ ಮ್ಯಾಪ್ ಇವರಿಗೆ ರೋಡ್ ಆಫ್ ಬೋನ್ಸ್ ಸ್ಥಳಕ್ಕೆ ಹೋಗುವ ದಾರಿಯನ್ನು ತೋರಿಸಿ ತಪ್ಪಿಸಿದೆ. ಇನ್ನು ಈ ದಾರಿಯ ಬಗ್ಗೆ ಹೇಳಬೇಕಾದರೆ ಇದಕ್ಕೆ ‘ದ ವೆ ಆಫ್ ಡೆತ್’ (ಸಾವಿನ ಮಾರ್ಗ) ಎಂದು ಕರೆಯುತ್ತಾರಂತೆ. ಹವಾಮಾನದ ಕಾರಣದಿಂದಾಗಿ ಇಲ್ಲಿ ರಾತ್ರಿಯ ಹವಾಮಾನವು ಮನುಷ್ಯನ ಜೀವಕ್ಕೆ ತುಂಬಾ ಅಪಾಯಕಾರಿಯಾಗಿರುತ್ತದೆ. ರಾತ್ರಿ ಹೊತ್ತಿನಲ್ಲಿ ತಾಪಮಾನದಲ್ಲಿ ತುಂಬಾ ಇಳಿಮುಖವಾಗುತ್ತದೆ. ಹೀಗಾಗಿ ಈ ದಾರಿ ತುಂಬಾ ಕಷ್ಟಕರ ಹಾಗೂ ಅಪಾಯದಿಂದ ಕೂಡಿದೆ.
ರಾತ್ರಿ ಸಮಯದಲ್ಲಿ ಇವರು ಎಂಟ್ರಿ ಮಾಡಿದಾಗ ರಸ್ತೆಯು ಬರ್ಫಾಚ್ಚಾದಿತವಾಗಿತ್ತು. ತಪಮಾನದಲ್ಲಿ ಇಳಿಮುಖವಾಗಿದ್ದರಿಂದ ರೇಡಿಯೇಟರ್ ಸಹ ಕೆಲಸ ಮಾಡುವದು ನಿಲ್ಲಿಸಿತು. ಇಬ್ಬರೂ ತರುಣರು ಇಂಥ ಪರಿಸ್ಥಿತಿಯ ಬಗ್ಗೆ ಪರಿಪೂರ್ಣವಾಗಿ ಜ್ಞಾನವಿಲ್ಲದವರಾಗಿದ್ದರು. ಹೀಗಾಗಿ ಕೊರೆಯುವ ಛಳಿಯಿಂದಾಗಿ 18 ವರ್ಷದ ತರುಣನಾದ ಸರ್ಗೆ ತೀರಿಕೊಂಡಿದ್ದು ಇನ್ನೊಬ್ಬನ ಸ್ಥಿತಿಯು ರಕ್ತ ಹೆಪ್ಪುಗಟ್ಟಿದ್ದಕ್ಕಾಗಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಈ ದಾರಿಯ ಇತಿಹಾಸದ ಬಗ್ಗೆ ಸ್ವಲ್ಪ ಹೇಳಬೇಕಾದರೆ, ಇದನ್ನು ಕೈದಿಗಳಿಂದ ತಯಾರಿಸಲಾಗಿದೆಯಂತೆ. ಇದನ್ನು ಸೋವಿಯತ್ ಯೂನಿಯನ್ ಸಮಯದಲ್ಲಿ ಸ್ಟಾಲಿನ್ ತಯಾರಿಸಿದ್ದರು. ರಸ್ತೆ ನಿರ್ಮಾಣದ ಹಂತದಲ್ಲಿಯೂ ವೈಪರೀತ್ಯ ಹವಾಮಾನದಿಂದಾಗಿ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಮುಂದೆ 1970 ರ ನಂತರ ಈ ರಸ್ತೆಯ ಉಪಯೋಗವನ್ನೇ ತೆಗೆದುಕೊಳ್ಳುವುದು ನಿಲ್ಲಿಸಿಬಿಟ್ಟರು. ಇವರಿಬ್ಬರ ಸಹಾಯಕ್ಕೆ ಹೋಗಬೇಕಾದರೆ ಪೊಲೀಸರಿಗೂ ತುಂಬಾ ಹೆಣಗಾಡಬೇಕಾಯಿತು. ಸಮಯ ತುಂಬಾ ವ್ಯರ್ಥವಾಗಿ ಹೋದುದರಿಂದ ಸಾವಿನಿಂದ ಬಚಾವ್ ಮಾಡಲು ಸಾಧ್ಯವಾಗಿಲ್ಲ.
