‘ಗೂಗಲ್ ಮ್ಯಾಪ್’ ಬಳಸಿ ಪುಣೆಯಿಂದ ನಾಗಪುರಕ್ಕೆ ಹೊರಟ ವ್ಯಕ್ತಿ; ಗೂಗಲ್ ಮ್ಯಾಪ್ ಆತನಿಗೆ ತಲುಪಿಸಿದ್ದು ಎಲ್ಲಿಗೆ ಕೇಳಿದರೆ ಶಾಕ್!

ಆಧುನಿಕತೆ ಹಾಗೂ ತಂತ್ರಜ್ಞಾನದ ಬೆಳವಣಿಗೆಯ ಕಾರಣ ಇಂದು ಬಹುತೇಕ ನಾವು ಪ್ರತಿಯೊಂದಕ್ಕೂ ಕೂಡಾ ಅವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಯಾವುದಾದರೂ ವಿಳಾಸ ಗೊತ್ತಾಗಲಿಲ್ಲ ಅಂದ್ರೆ ಕೂಡಲೇ ಗೂಗಲ್ ಮ್ಯಾಪ್ ಆನ್ ಮಾಡಿ, ಅದರಲ್ಲಿ ತಾವು ಸೇರಬೇಕಾಗಿರೋ ಗಮ್ಯವನ್ನು ಸರ್ಚ್ ಮಾಡಿ, ಗೂಗಲ್ ಮ್ಯಾಪ್ ಸಹಾಯದಿಂದ ಆ ಸ್ಥಳಕ್ಕೆ ಹೋಗೋ ಪ್ರಯತ್ನ ಮಾಡ್ತಾರೆ. ಆದರೆ ಕೆಲವೊಮ್ಮೆ ಗೂಗಲ್ ಮ್ಯಾಪ್ ತಿಳಿಸಿದ ಹಾದಿಯಲ್ಲಿ ಸಾಗಿದ ಕೆಲವರು ತೊಂದರೆಯಲ್ಲಿ ಸಿಲುಕಿಕೊಂಡ ಉದಾಹರಣೆಗಳು ಕೂಡಾ ಉಂಟು. ಇಂತಹುದೊಂದು ಹೊಸ ಘಟನೆ ಕೆಲವೇ ದಿನಗಳ ಹಿಂದೆ ಕೂಡಾ ನಡೆದಿದ್ದು, ಗೂಗಲ್ ಮ್ಯಾಪ್ ನೀಡಿದ ಮಾರ್ಗಸೂಚಿ ಅನುಸರಿಸಿ ಸಮಸ್ಯೆಗೆ ಸಿಲುಕಿದ ಘಟನೆಯೊಂದು ನಡೆದಿದೆ.

ಗೂಗಲ್ ಮ್ಯಾಪ್ ನ ಸಹಾಯದಿಂದ ವ್ಯಕ್ತಿ ತಾನು ಹೋಗಬೇಕಾಗಿರುವ ಗಮ್ಯವನ್ನು ತಲುಪಲು ಪ್ರಯತ್ನ ಮಾಡಿ ಕಾಡಿನಲ್ಲಿ ಸಿಲುಕಿಕೊಂಡು, ಅಲ್ಲಿಂದ ಹೊರಬರಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು ಎನ್ನಲಾಗಿದೆ. ಇಷ್ಟಕ್ಕೂ ಘಟನೆ ಏನು ಅನ್ನೋದಾದ್ರೆ, ಟಾಟಾ ಹ್ಯಾರಿಯರ್ ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಕುಟುಂಬದೊಂದಿಗೆ ಪುಣೆಯಿಂದ ಜಬಲ್ ಪುರಕ್ಕೆ ಪ್ರಯಾಣ ಹೊರಟಿದ್ದಾರೆ. ಅವರಿಗೆ ಲಾಂಗ್ ಡ್ರೈವ್ ನ ಅನುಭವ ಇಲ್ಲದ ಕಾರಣ, ಅವರು ಪುಣೆಯ ಗೂಗಲ್ ಮ್ಯಾಪ್ ಅನ್ನು ನೆರವಿಗೆ ಪಡೆದು ಸಾಗಿದ್ದಾರೆ. ದಾರಿಯಲ್ಲಿ ನಾಗ್ಪುರದಲ್ಲಿ ಅವರು ಒಂದು ಬ್ರೇಕ್ ಪಡೆದು ಪ್ರಯಾಣ ಮಾಡುವ ಯೋಜನೆ ರೂಪಿಸಿಕೊಂಡಿದ್ದರು. ಗೂಗಲ್ ಮ್ಯಾಪ್ ಪ್ರಕಾರ ರಾತ್ರಿ 11 ಕ್ಕೆ ನಾಗ್ಪುರ ತಲುಪಬೇಕಿತ್ತು.

ಹಾಗೆ ಹೋಗುವಾಗ 14 ಗಂಟೆಗಳ ಪ್ರಯಾಣ ಮಾಡಿದ ನಂತರ ಅಮರಾವತಿ ಬಳಿ ಡೈವರ್ಷನ್ ತೆಗೆದುಕೊಂಡು ಹೋಗುವಂತೆ ಸೂಚಿಸಿದೆ. ಆ ವ್ಯಕ್ತಿ ಅದೇ ಪ್ರಕಾರ ಡೈವರ್ಷನ್ ತೆಗೆದುಕೊಂಡು ಪ್ರಯಾಣ ಮುಂದುವರೆಸಿದರು‌, ಹಾಗೆ ಸಾಗಿದ ಅವರಿಗೆ ಸುಮಾರು 200 ಕಿಮೀ ಸಾಗಿದ ನಂತರ ಎದುರಿಗೆ ಒಂದು ನದಿ ಹಾಗೂ ಅದರ ಮೇಲೆ ಒಂದು ಹಾನಿಗೊಳಗಾದ ಸೇತುವೆ ಕಂಡಿದೆ. ಅವರು ಅನುಮಾನದಿಂದ ಮತ್ತೆ ಗೂಗಲ್ ಮ್ಯಾಪ್ ನೋಡಿದ್ದಾರೆ, ಅದು ಮಾತ್ರ ಮುಂದೆ ಸಾಗುವಂತೆ ಸೂಚಿಸಿದೆ, ನದಿಯ ಬಳಿ ಇದ್ದ ಇನ್ನೊಂದು ಕಚ್ಛಾ ರಸ್ತೆ ಇರುವುದನ್ನು ಕಂಡು ಅಲ್ಲಿ ಕಾರು ನಡೆಸಲು ಸಾಧ್ಯವಿದೆ ಎಂದು ನೋಡಿದ್ದಾರೆ.

ತಡಮಾಡದೆ ಅವರು ಕಾರನ್ನು ಆ ರಸ್ತೆಯಲ್ಲಿ ಓಡಿಸಿದ್ದಾರೆ. ಆದರೆ ಆ ರಸ್ತೆ ಕೂಡಾ ಸಾಕಷ್ಟು ಹಾಳಾಗಿ ಹೊಂಡಗಳು ತುಂಬಿದ್ದ ಕಾರಣ ಒಂದು ಸ್ವಲ್ಪ ದೂರ ಸಾಗಿದ ನಂತರ ಕಾರಿನ ಚಕ್ರಗಳು ಹೊಂಡದಲ್ಲಿ ಸಿಲುಕಿಕೊಂಡು ಕಾರು ಮುಂದೆ ಚಲಿಸಲು ಸಾಧ್ಯವಾಗದೇ ಹೋಗಿದೆ. ಆಗ ಅವರು ಕಾರಿನ ಇಂಜಿನ್ ನಿಂದ ಹೊಗೆ ಬರುತ್ತಿರುವುದನ್ನು ಹಾಗೂ ಏನೋ ಸುಟ್ಟ ವಾಸನೆ ಕೂಡಾ ಬರುತ್ತಿರುವುದು ಗಮನಿಸಿದ್ದಾರೆ. ಕಡೆಗೆ ವಿಧಿಯಿಲ್ಲದೇ ರಾತ್ರಿ 2:30 ರ ವೇಳೆಗೆ ಅವರು ರೋಡ್ ಅಸಿಸ್ಟೆನ್ಸ್ ಗೆ ಕಾಲ್ ಮಾಡಿ ಸಹಾಯವನ್ನು ಯಾಚಿಸಿದ್ದಾರೆ. ಅನಂತರ ಸುಮಾರು 3:30 ರ ವೇಳೆಗೆ ಕಾರ್ ಮೆಕ್ಯಾನಿಕ್ ಸುಮಾರು 70 ಕಿಮೀ ಪ್ರಯಾಣ ಮಾಡಿ ಬಂದು ಇವರ ಕಾರನ್ನು ದುರಸ್ತಿ ಮಾಡಲು ನೆರವು ನೀಡಿದ್ದಾರೆ.

ಈ ಘಟನೆಯು ಲಾಂಗ್ ಡ್ರೈವ್ ಹೋಗುವಾಗ ಸಂಪೂರ್ಣವಾಗಿ ಗೂಗಲ್ ಮ್ಯಾಪ್ ನಂಬಿ ಹೋಗಬಾರದು ಎನ್ನುವ ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದೆ. ಎಲ್ಲಾದರೂ ಹೋಗುವಾಗ ವಿಶೇಷವಾಗಿ ದೂರ ಪ್ರಯಾಣ ಮಾಡುವಾಗ ಶಾರ್ಟ್ ಕಟ್ ಅಥವಾ ಡೈವರ್ಷನ್ ಗಳ ಬಗ್ಗೆ ಮಾಹಿತಿಗಾಗಿ ಗೂಗಲ್ ಬದಲಾಗಿ ಅನುಭವವುಳ್ಳವರು ಅಥವಾ ರಸ್ತೆ ಮಾರ್ಗಗಳ ಜ್ಞಾನವುಳ್ಳವರ ಬಳಿ ಮಾಹಿತಿಯನ್ನು ಪಡೆಯುವುದು ಅತ್ಯುತ್ತಮ ಮಾತ್ರವಲ್ಲದೇ ಸುರಕ್ಷತಾ ದೃಷ್ಟಿಯಿಂದ ಕೂಡಾ ಅದೇ ಒಳಿತು ಎನಿಸುತ್ತದೆ. ಇಲ್ಲವಾದರೆ ನಾವೇ ಅ ಪಾ ಯ ಕ್ಕೆ ಆಹ್ವಾನ ನೀಡಿದಂತಾಗುತ್ತದೆ.