ಗೆಳತಿಯ ಸವತಿಯಾಗಲು ಇಷ್ಟವಿಲ್ಲದೇ ಅಕ್ಷಯ್ ಕುಮಾರ್ ಜೊತೆಗಿನ ತನ್ನ ಪ್ರೇಮಕ್ಕೆ ಕೊಳ್ಳಿಯಿಟ್ಟಿದ್ದರು ನಟಿ ಶಿಲ್ಪಾ ಶೆಟ್ಟಿ!
ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಪ್ರಸ್ತುತ ಮಾಧ್ಯಮಗಳ ಮುಖ್ಯ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆಯ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ಈ ವಿಚಾರವಾಗಿ ಪತಿಯ ಮುಂದೆ ಕುಳಿತು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನಟಿ ಶಿಲ್ಪಾ ಶೆಟ್ಟಿ ಕೂಡಾ ಉತ್ತರ ನೀಡಬೇಕಾಯಿತು. ಅವರು ಗಂಟೆಗಳ ಕಾಲ ನಡೆದ ವಿಚಾರಣೆಯನ್ನು ಎದುರಿಸಬೇಕಾಯಿತು. ಈ ಎಲ್ಲಾ ವಿಚಾರಗಳ ನಡುವೆ ಸೋಶಿಯಲ್ ಮೀಡಿಯಾ ಗಳಲ್ಲಿ ಶಿಲ್ಪಾ ಶೆಟ್ಟಿಯವರ ಹಳೆಯ ಪ್ರೇಮ ಕಥೆ ಇದೀಗ ಮತ್ತೊಮ್ಮೆ ಸುದ್ದಿಯಾಗಿ ವೈರಲ್ ಆಗುತ್ತಿದೆ. ಒಂದು ಸಮಯದಲ್ಲಿ ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್ ನ ಜನಪ್ರಿಯ ನಟನಾದ ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗುವವರಿದ್ದರು ಎಂದು ಹೇಳಲಾಗುತ್ತದೆ.

ಆದರೆ ಶಿಲ್ಪಾಶೆಟ್ಟಿ ತಾನು ತನ್ನ ಸ್ನೇಹಿತೆಯ ಸವತಿಯಾಗಲು ಇಷ್ಟಪಡದ ಕಾರಣ ಅಕ್ಷಯ್ ಕುಮಾರ್ ಅವರಿಂದ ದೂರವಾಗಿದ್ದರು ಎನ್ನಲಾಗಿದೆ. ಅಲ್ಲದೆ ಆ ವೇಳೆಯಲ್ಲಿ ಶಿಲ್ಪಾ ಶೆಟ್ಟಿ ಅಕ್ಷಯ್ ಕುಮಾರ್ ಅವರ ಮೇಲೆ ಕೆಲವು ಗಂಭೀರವಾದ ಆರೋಪಗಳನ್ನು ಸಹಾ ಮಾಡಿದ್ದರು. ಹಾಗಾದರೆ ಶಿಲ್ಪಾ ಹಾಗೂ ಅಕ್ಷಯ್ ನಡುವಿನ ಈ ವಿಚಾರ ಏನು ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ.
ಶಿಲ್ಪಾ ಶೆಟ್ಟಿ ಮತ್ತು ಅಕ್ಷಯ್ ಕುಮಾರ್ ಜೊತೆಯಾಗಿ ಇನ್ಸಾಫ್, ಖಿಲಾಡಿಯೋಂ ಕಾ ಖಿಲಾಡಿ ಹಾಗೂ ಹಾಗೂ ಧಡ್ಕನ್ ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹೀಗೆ ಸಿನಿಮಾಗಳಿಂದ ಇಬ್ಬರ ನಡುವೆ ಸ್ನೇಹ ಏರ್ಪಟ್ಟು ಇಬ್ಬರು ಹತ್ತಿರವಾದರು. ಅನಂತರ ಅವರ ನಡುವೆ ಪ್ರೀತಿ ಮೂಡಿದಾಗ ಶಿಲ್ಪಾ ಶೆಟ್ಟಿ ಹಾಗೂ ಅಕ್ಷಯ್ ಕುಮಾರ್ ಮದುವೆಯಾಗಲಿದ್ದಾರೆ ಎನ್ನುವ ವಿಷಯ ಸಾಕಷ್ಟು ಸದ್ದು ಮಾಡಿತ್ತು. ಆದರೆ ಅದೇ ಸಮಯದಲ್ಲಿ ಅಕ್ಷಯ್ ಕುಮಾರ್ ಅವರು ತಮ್ಮ ಮೊದಲ ಗೆಳತಿ ರವೀನಾ ಟಂಡನ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಅದು ಸಾಲದೆಂಬಂತೆ ಮತ್ತೊಂದು ಕಡೆ ಅವರು ನಟಿ ಟ್ವಿಂಕಲ್ ಖನ್ನಾ ಜತೆಗೆ ಡೇಟ್ ಮಾಡುತ್ತಿದ್ದು.ಆ ದಿನಗಳಲ್ಲಿ ಶಿಲ್ಪಾ ಶೆಟ್ಟಿ ಹಾಗೂ ಟ್ವಿಂಕಲ್ ಖನ್ನಾ ಬಹಳ ಆತ್ಮೀಯ ಗೆಳತಿಯರಾಗಿದ್ದರು.

ಧಡ್ಕನ್ ಫಿಲಂ ಚಿತ್ರೀಕರಣದ ವೇಳೆಯಲ್ಲಿ ಟ್ವಿಂಕಲ್ ಖನ್ನಾ ಅವರಿಗೆ ಶಿಲ್ಪ ಶೆಟ್ಟಿ ಮತ್ತು ಅಕ್ಷಯ್ ಕುಮಾರ್ ನಡುವಿನ ಅಫೆರ್ ನ ಕುರಿತಾದ ಎಲ್ಲಾ ಸತ್ಯ ತಿಳಿದುಹೋಯಿತು. ಆಗ ಶಿಲ್ಪಾ ಶೆಟ್ಟಿ ತಾನು ತನ್ನ ಆತ್ಮೀಯ ಗೆಳತಿಯ ಸವತಿಯಾಗುವುದು ಬೇಡ ಎಂದು ನಿರ್ಧರಿಸಿ ಅಕ್ಷಯ್ ಕುಮಾರ್ ಜೊತೆಗೆ ಬ್ರೇಕಪ್ ಮಾಡಿಕೊಂಡರು. ಬ್ರೇಕಪ್ ನಂತರವೂ ಸಹಾ ಚಿತ್ರೀಕರಣದಲ್ಲಿ ಭಾಗವಹಿಸಿ ಸಿನಿಮಾ ಪೂರ್ತಿ ಮಾಡಿಕೊಟ್ಟರು. ಶಿಲ್ಪಾ ಶೆಟ್ಟಿ ತಮ್ಮ ಗೆಳತಿಗಾಗಿ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದರು. ಆದರೆ ಅಕ್ಷಯ್ ಕುಮಾರ್ ಮಾಡಿದ ಮೋಸವನ್ನು ಅವರು ಮರೆತಿರಲಿಲ್ಲ.

ಸಂದರ್ಶನವೊಂದರ ವೇಳೆಯಲ್ಲಿ ಶಿಲ್ಪಾ, ಅಕ್ಷಯ್ ಕುಮಾರ್ ಮೇಲಿನ ತನ್ನ ಕೋಪ ಮತ್ತು ಅಸಮಾಧಾನವನ್ನು ಹೊರಹಾಕಿದ್ದರು. ಅಕ್ಷಯ್ ಕುಮಾರ್ ನನ್ನನ್ನು ಬಳಸಿಕೊಂಡರು, ಇನ್ನೊಬ್ಬರು ಸಿಕ್ಕಿದ ಕೂಡಲೇ ನನ್ನನ್ನು ದೂರ ಮಾಡಿದರು. ಅವರು ಮತ್ತೊಬ್ಬರ ಜೊತೆ ಡೇಟ್ ಮಾಡುತ್ತಿದ್ದಾರೆನ್ನುವುದನ್ನು ನಾನು ಊಹೆ ಕೂಡಾ ಮಾಡಿರಲಿಲ್ಲ ಎಂದು ಹೇಳುತ್ತಾ, ಆ ಘಟನೆಯಿಂದ ನನಗೆ ಬಹಳ ಬೇಸರವಾಗಿ ಮಾನಸಿಕವಾಗಿ ಕುಗ್ಗಿ ಹೋದಾಗ ನನ್ನ ತಂದೆ ತಾಯಿ ನನ್ನನ್ನು ಸಂಭಾಳಿಸಿದರು ಎಂದು ಹೇಳಿದ್ದಾರೆ.

ಕೆಲವು ವರದಿಗಳ ಪ್ರಕಾರ ಅಕ್ಷಯ್ ಗಾಗಿ ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನಲ್ಲಿ ವರ್ಜಿನಿಟಿ ಯನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ. ನಂತರ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಿಲ್ಪಾ ಶೆಟ್ಟಿಗೆ ಹೆಗಲನ್ನು ನೀಡಿ, ಸಮಾಧಾನ ಮಾಡಿದವರು ಉದ್ಯಮಿ ರಾಜ್ ಕುಂದ್ರಾ. ರಾಜ್ ಕುಂದ್ರಾ ತಮ್ಮ ಮೊದಲನೇ ಪತ್ನಿ ಕವಿತಾ ಮಾಡಿದ ಮೋಸದಿಂದ ಕುಗ್ಗಿ ಹೋಗಿದ್ದರು. ಆದ್ದರಿಂದಲೇ ಶಿಲ್ಪಾ ಶೆಟ್ಟಿಯ ವೇದನೆ ಅವರಿಗೆ ಬಹಳ ಚೆನ್ನಾಗಿ ಅರ್ಥವಾಗಿತ್ತು ಶಿಲ್ಪಾ ರನ್ನು ಖುಷಿಯಾಗಿರಲು ದುಬಾರಿ ಬೆಲೆಯ ಹುಡುಗರೆ ಗಳನ್ನು ನೀಡುತ್ತಿದ್ದರು. ಹೀಗೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ನಡುವೆ ಸ್ನೇಹವು ಬಹಳ ಬೇಗ ಪ್ರೀತಿಯಾಗಿ ಪರಿವರ್ತನೆಯಾಗಿ ಮದುವೆಯಾಗುವ ತೀರ್ಮಾನವನ್ನು ಮಾಡಿದರು.

