ಗೆಳೆಯನಿಗೆ ಸತತ ತೊಂದರೆ ಕೊಡುತ್ತಿರುವ ಕೋತಿ, ಸಹನೆ ಮೀರಿ ಸಿಟ್ಟಾಗಿ ಮೇಲೆದ್ದ ಕೋತಿ ಮಾಡಿದ್ದೇನು…? ನೋಡಿ ಈ ವೈರಲ್ ವೀಡಿಯೋ

ಸೋಶಿಯಲ್ ಮೀಡಿಯಾದಲ್ಲಿ ನೀವು ಕೋತಿಗಳ ತಮಾಷೆಯ ಅನೇಕ ವಿಡಿಯೋಗಳನ್ನು ನೋಡಿದ್ದೀರಿ. ಆದರೆ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಆರಂಗುಟಾನ್(Orangutan) ದ ಮಸ್ತಿ ಮಾಡುವ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಒಂದು ಆರಂಗುಟಾನ್ ಇನ್ನೊಂದು ಆರಂಗುಟಾನ್ ಜೊತೆಗೆ ಫ್ರ್ಯಾಂಕ್ ಮಾಡುವ ಪ್ರಯತ್ನ ಮಾಡುತ್ತಿದೆ. ಒಂದು ಆರಂಗುಟಾನ್ ಸ್ವತಃ ಒಂದು ಗೋಣಿಯಲ್ಲಿ ಸೇರಿಕೊಂಡು ಇನ್ನೊಂದು ಆರಂಗುಟಾನ್ ಗೆ ಫ್ರ್ಯಾಂಕ್ ಮಾಡಲು ಪ್ರಯತ್ನಿಸುತ್ತದೆ. ಅದು ಚೀಲನಲ್ಲಿ ಅಡಗಿಕೊಂಡು ಇನ್ನೊಂದು ಆರಂಗುಟಾನ್ ಗೆ ಪದೇ ಪದೇ ಹೊಡೆಯಲು ಶುರು ಮಾಡುತ್ತದೆ. ಮೊದಲಿಗೆ ಹೊಡೆದಾಗ ಅದು ನಿರ್ಲಕ್ಷ್ಯ ಮಾಡಿತು, ಆಗ ಮತ್ತೆ ಹೊಡೆಯಲು ಪ್ರಾರಂಭ ಮಾಡಿದಾಗ ಅದರ ಸ್ನೇಹಿತ ತಿರುಗಿ ಹೊಡೆಯಲು ಪ್ರಾರಂಭ ಮಾಡುತ್ತದೆ. ಈ ವಿಡಿಯೋ ನೋಡಿ ನೀವು ಹೊಟ್ಟೆ ಹುಣ್ಣಾಗುವಂತೆ ನಗುವದು ಸಹಜ.

ಟ್ವಿಟ್ಟರ್ ನಲ್ಲಿ ಈ ವಿಡಿಯೋ ಇಂಡಿಯನ್ ಫಾರೆಸ್ಟ್ ಸರ್ವಿಸ್ ನ ಅಧಿಕಾರಿಯಾದ ಸುಶಾಂತ್ ನಂದಾ ಅವರು ಶೇರ್ ಮಾಡಿದ್ದಾರೆ. ಜೊತೆಗೆ ಶೇರ್ ಮಾಡುತ್ತ ಅದಕ್ಕೆ ಕ್ಯಾಪ್ಶನ್ ಸಹ ನೀಡಿದ್ದಾರೆ, ಎರಡು ಸಹೋದರರ ನಡುವಿನ ಫ್ರ್ಯಾಂಕ್’. ಈ ವಿಡಿಯೋ ವನ್ನು ಮೂರು ವರ್ಷಗಳ ಹಿಂದೆ ಯೂಟ್ಯೂಬ್ ನಲ್ಲಿ ಸೇವ್ ದ ಆರಂಗುಟಾನ್’ ಎಂಬ ಚಾನಲ್ ದವರು ಶೇರ್ ಮಾಡಿದ್ದರು. ಈ ಸಂಸ್ಥೆಯ ಪ್ರಕಾರ, ವಿಡಿಯೋ ಬೋರ್ನಿಯೋ ನಲ್ಲಿ ನ್ಯಾರೂ ಮೆಂಟನ್ಗ ಒರಂಗುಟನ್ ರೇಸ್ಕ್ಯೂ ಸೆಂಟರ್ ನಲ್ಲಿ ರೆಕಾರ್ಡ್ ಮಾಡಲಾಗಿತ್ತು. ಈ ಕೇಂದ್ರ ಅನಾಥ ಪ್ರಾಣಿಗಳ ಸಲುವಾಗಿ ಕೆಲಸ ಮಾಡುತ್ತದೆ. ಕಾಡಿನಿಂದ ಬೇರೆಯಾದ ಪ್ರಾಣಿಗಳನ್ನು ಈ ಸಂಸ್ಥೆಯವರು ರಕ್ಷಣೆ ಮಾಡಿ ಅವುಗಳಿಗೆ ವಿವಿಧ ಕೌಶಲ್ಯಗಳನ್ನು ಕಲಿಸಿ ಮರಳಿ ಕಾಡಿಗೆ ಬಿಡುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತದೆ.

ವಿಡಿಯೋ ನೋಡಿ….

ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಜುಲೈ 1 ರಂದು ಶೇರ್ ಮಾಡಿದ್ದಾರೆ, ಈ ವಿಡಿಯೋಗೆ ಇದುವರೆಗೆ 41 ಸಾವಿರ ಕ್ಕಿಂತ ಹೆಚ್ಚು ವೀಕ್ಷಣೆ ಸಹ ಬಂದಿವೆ. ಜೊತೆಗೆ 3 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಮತ್ತು 700 ಕ್ಕಿಂತ ಹೆಚ್ಚು ರೀಟ್ವಿಟ್ ಬಂದಿವೆ. ಟ್ವಿಟರ್ ನಲ್ಲಿ ಜನರು ಈ ಪ್ರಕಾರದ ರಿಯೆಕ್ಷನ್ ಶೆಯರ್ ಮಾಡಿದ್ದಾರೆ…….

ನ್ಯಾಷನಲ್ ಜಿಯೋಗ್ರಾಫಿಕ್ ಅನುಸಾರ, 2009 ರ ಒಂದು ಅಧ್ಯಯನವು ತಿಳಿಸಿದ್ದೇನೆಂದರೆ ಆರಂಗುಟಾನ್ ಪ್ರಾಣಿ.ಸಾಮ್ರಾಜ್ಯದಲ್ಲಿ ನಮ್ಮ ಎಲ್ಲಕ್ಕಿಂತ ನಿಕಟ ಜೇವಿತ ಸಂಬಂಧಿಗಳಾಗಿವೆ. ಅಲ್ಲದೆ ಚಿಂಪಾಂಜಿಗಳನ್ನು ಮೊದಲು ಪರಿಗಣಿಸಲಾಗುವುದಿಲ್ಲವಂತೆ.