ಗೇಟ್ ಆಚೆ ಚಿರತೆ ಬಂದದ್ದು ಗೊತ್ತಾಯಿತು ನಾಯಿಗೆ! ಮುಂದೆ ಚಿರತೆ ಮಾಡಿದ್ದೇನು ನೋಡಿ ಈ ವೈರಲ್ ವಿಡಿಯೋದಲ್ಲಿ…

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ರೀತಿಯ ವಿಡಿಯೋಗಳು ಸದ್ದು ಮಾಡುತ್ತಲೇ ಇರುತ್ತವೆ. ಅವುಗಳಲ್ಲಿ ವಿಶೇಷವಾಗಿ ಪ್ರಾಣಿಗಳ ವಿಡಿಯೋ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಾಯಿ ಮತ್ತು ಚಿರತೆಯ ಮನ ಕಲಕುವ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಗೇಟಿನ ಒಳಗಡೆಯಿಂದ ನಾಯಿಯೊಂದು ಹೊರಗೆ ಯಾವುದೋ ಪ್ರಾಣಿ ಇರುವ ಸಂಶಯದಿಂದ ಬೊಗಳುತ್ತಿದೆ. ಬೊಗಳುತ್ತಾ ಬೊಗಳುತ್ತಾ ನಾಯಿ ಗೇಟಿನ ಕೆಳಗಡೆಯಿಂದ ದೃಷ್ಟಿ ಹಾಯಿಸಿ ನೋಡಿದಾಗ ಅದಕ್ಕೆ ಅಲ್ಲಿ ಚಿರತೆ ಇರುವುದು ಗೊತ್ತಾಗಿ ಅದು ಹೆದರಿ ಒಮ್ಮೆಲೆ ಒಳಗೆ ಮನೆಯ ಕಡೆಗೆ ಓಡುತ್ತದೆ. ಅಷ್ಟರಲ್ಲಿ ಗೇಟಿನ ಆಚೆ ಬದಿಯಿಂದ ಚಿರತೆಯು ಚಂಗನೆ ಹಾರಿ ಗೇಟಿನ ಮೇಲಿಂದ ಒಳಗಡೆ ಬರುತ್ತದೆ. ಸಿಸಿಟಿವಿ ಫುಟೇಜ್ ನಲ್ಲಿ ಕಾಣುವ ಪ್ರಕಾರ ಚಿರತೆ ಕೆಲವೇ ಕ್ಷಣಗಳಲ್ಲಿ ಓಡಿಹೋದ ನಾಯಿಯನ್ನು ಬಾಯಿಯಲ್ಲಿ ಹಿಡಿದು ಹೆಗಲ ಮೇಲೆ ಹೊತ್ತುಕೊಂಡು ಮತ್ತೆ ಗೇಟಿನ ಕಡೆಗೆ ವಾಪಸ್ ಬರುತ್ತದೆ. ತದನಂತರ ನಾಯಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡೇ ಗೇಟ್ ಜಿಗಿದು ಚಿರತೆಯು ಆಚೆ ಬದಿಗೆ ಓಡಿ ಹೋಗುತ್ತದೆ. ಈ ಮಧ್ಯೆ ನಾಯಿ ಒಂದೇ ಸಮನೆ ಬೊಗಳುತ್ತಲೇ ಇರುತ್ತದೆ.

ವಿಪರ್ಯಾಸವೆಂದರೆ ನಾಯಿಯು ಇಷ್ಟೊಂದು ಬೊಗಳುವಾಗ ನಾಯಿಯ ಒಡೆಯ ಅಥವಾ ಮನೆಯವರು ಆ ಸಮಯದಲ್ಲಿ ಹೊರಗೆ ಬಂದಿಲ್ಲ. ಯಾವ ಮನೆಯಲ್ಲಿ ಚಿರತೆಯು ಸಹಜವಾಗಿ ತಲುಪುತ್ತದೆ ಅಂತಹ ಮನೆ ಯಜಮಾನರು ನಾಯಿಯನ್ನು ಮನೆಯ ಹೊರಗೆ ಇಡುವುದು ಎಷ್ಟೊಂದು ಸರಿ ಎಂದು ನೇಟಿಜನ್ಸ್ ಗಳು ಸಂತಪ್ತರಾಗಿ ಪ್ರಶ್ನೆ ಕೇಳುತ್ತಿದ್ದಾರೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಪರ್ವೀನ್ ಕಾಸವಾನ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 60 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಜೊತೆಗೆ ಅನೇಕ ನೇಟಿಜನ್ಸ್ ಗಳು ಈ ವಿಡಿಯೋ ನೋಡಿ ತಮ್ಮ ಕಳವಳದ ಪ್ರತಿಕ್ರಿಯೆಗಳನ್ನು ಕಮೆಂಟ್ ಮೂಲಕ ಹೊರಹಾಕಿದ್ದಾರೆ.