ಚಳಿಗಾಲದಲ್ಲಿ ಹಾಲಿನಲ್ಲಿ ಖರ್ಜೂರವನ್ನು ಬೆರೆಸಿ ತಿನ್ನುವುದರಿಂದ ದೇಹಕ್ಕೆ ಆಗುವ ಆರೋಗ್ಯವರ್ಧಕ ಲಾಭಗಳು…
ಖರ್ಜೂರವು ಆರೋಗ್ಯದ ದೃಷ್ಟಿಯಿಂದ ತುಂಬಾ ಮಹತ್ವದ ಪದಾರ್ಥವಾಗಿದೆ. ವಿಶೇಷವಾಗಿ ಸ್ತ್ರೀಯರು ಇದನ್ನು ಸೇವಿಸಿದರೆ ಇನ್ನು ಆರೋಗ್ಯಕ್ಕೆ ಸಾಕಷ್ಟು ಲಾಭ ಪಡೆಯಬಹುದು. ಕಾರಣ ಇದರಲ್ಲಿ ಹೇರಳವಾಗಿ ಜಿವನಸತ್ವಗಳು, ಖನಿಜ, ಫಾಯಬರ್, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಗಳಂತಹ ಪೋಷಕ ಘಟಕಗಳು ಇರುತ್ತವೆ. ಚಳಿಗಾಲದ ಸಮಯದಲ್ಲಿ ಹಾಲಿನಲ್ಲಿ ಖರ್ಜೂರವನ್ನು ಬೆರೆಸಿ ತಿನ್ನುವುದರಿಂದ ದೇಹಕ್ಕೆ ಅನೇಕ ಲಾಭಗಳು ಆಗುವವು. ಅವು ಯಾವುವು ನೋಡಿ….
5-6 ಖರ್ಜೂರಗಳನ್ನು ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿ. ಬಿಸಿ ಮಾಡಿದ ಹಾಲು ತಣ್ಣಗಾಗಲು ಬಿಡಿ. ಆನಂತರ ಅದರಲ್ಲಿ ಖರ್ಜೂರದ ಪುಡಿಯನ್ನು ಹಾಕಿ. ಮುಂಜಾನೆ ಉಪಹಾರದ ಜೊತೆಗೆ ಇದನ್ನು ಸೇವಿಸಿ.
ನಿಯಮಿತವಾಗಿ ಹಾಲಿನಲ್ಲಿ ಖರ್ಜೂರವನ್ನು ಬೆರೆಸಿ ಕುಡಿಯುವುದರಿಂದ ಎಲುಬುಗಳ ಸವಕಳಿಯನ್ನು ತುಂಬಿ ತೆಗೆಯುತ್ತದೆ. ವ್ಯಕ್ತಿಗೆ ಕೀಲುನೋವು ಇದ್ದರೆ ಕಡಿಮೆಯಾಗಲು ಸಹಾಯವಾಗುತ್ತದೆ.
ಖರ್ಜೂರ ಮತ್ತು ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಈ ಪೇಯ ಚಿಕ್ಕ ಮಕ್ಕಳಿಗೂ ಕುಡಿಸುವುದರಿಂದ ಎಲುಬುಗಳ ವಿಕಾಸ ಚೆನ್ನಾಗಿ ಆಗುತ್ತದೆ.
ಒಂದು ವೇಳೆ ತೂಕವನ್ನು ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಿಯಮಿತವಾಗಿ ದಿನಕ್ಕೆ ಎರಡು ಬಾರಿ ಈ ಪೇಯವನ್ನು ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ಧನಾತ್ಮಕ ಬದಲಾವಣೆ ಕಂಡು ಬರುತ್ತದೆ.
ಈ ಪೇಯದಿಂದ ಪಚನಶಕ್ತಿಯಲ್ಲಿ ವೃದ್ಧಿಯಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಮುಖದ ಮೇಲೆ ಮೂಡುವ ಅಕಾಲಿಕ ಸುಕ್ಕುಗಳು ಸಹ ದೂರವಾಗುತ್ತವೆ.

ಹಾಲಿನಲ್ಲಿ ಖರ್ಜೂರವನ್ನು ಕೂಡಿಸಿ ನಿಯಮಿತವಾಗಿ ಕುಡಿಯುವುದರಿಂದ ಇರುಳುಗಣ್ಣಿನ ಸಮಸ್ಯೆ ಇಲ್ಲವಾಗುತ್ತದೆ. ಹೀಗಾಗಿ ಕಣ್ಣಿನ ಆರೋಗ್ಯ ಸುಧಾರಣೆಯಾಗುತ್ತದೆ.
ಗರ್ಭವತಿ ಸ್ತ್ರೀಯರು ದಿನಂಪ್ರತಿ ಈ ಪೇಯವನ್ನು ಕುಡಿಯುವುದರಿಂದ ಅವರಿಗೆ ವಿಶೇಷ ಲಾಭಗಳಾಗುತ್ತವೆ. ಖರ್ಜೂರದಲ್ಲಿ ಜಿವನಸತ್ವಗಳು, ಖನಿಜ, ಫಾಯಬರ್, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಗಳಂತಹ ಪೋಷಕ ಘಟಕಗಳು ಇರುವುದರಿಂದ ಇವುಗಳ ವಿಶೇಷ ಲಾಭ ಗರ್ಭಿಣಿಯರಿಗೆ ಆಗುತ್ತದೆ. ಅವರ ಸ್ನಾಯುಗಳು ಬಲಗೊಳ್ಳಲು ಸಹಾಯವಾಗುತ್ತದೆ.
ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದ್ದರೆ ನಿಯಮಿತವಾಗಿ ಹಾಲಿನಲ್ಲಿ ಖರ್ಜೂರವನ್ನು ಬೆರೆಸಿದ ಈ ಪೇಯವನ್ನು ಕುಡಿಯಬೇಕು. ಇದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವು ಹೆಚ್ಚಾಗಲು ಸಹಾಯವಾಗುತ್ತದೆ.