ಚಳಿಯಲ್ಲಿ ಒಂದು ಚಮಚ ಜೇನುತುಪ್ಪ ತಿನ್ನುವುದರಿಂದ ಸಿಗುವ ಲಾಭಗಳು!

ನಿಸರ್ಗವು ಮನುಷ್ಯನಿಗೆ ಎಲ್ಲವನ್ನು ಕೊಟ್ಟಿದೆ. ಆ ಕೊಟ್ಟದ್ದನ್ನು ಎಲ್ಲವೂ ಒಮ್ಮೆಲೆ ಬಾಚಿಕೊಳ್ಳುವ ಹಂಬಲದಲ್ಲಿ ನಿಸರ್ಗವನ್ನು ಬರಡಾಗಿ ಮಾಡುತ್ತಿದ್ದಾನೆ ಮನುಷ್ಯ. ನಮಗೆ ನಿಸರ್ಗವು ನೀಡಿದ ಅನೇಕ ವಸ್ತು, ಪದಾರ್ಥಗಳಲ್ಲಿ ಜೇನುತುಪ್ಪವು ಒಂದು ಮಹತ್ವದ ಸಾಧನವಾಗಿದೆ. ಇದಕ್ಕೆ ನೈಸರ್ಗಿಕ ಔಷಧಿ ಅಂತಲೇ ಕರೆಯುತ್ತಾರೆ.

ದಿನಂಪ್ರತಿ ಒಂದು ಅಥವಾ ಎರಡು ಚಮಚ ಜೇನುತುಪ್ಪವನ್ನು ಅದು ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸಿದರೆ ಅದರ ಅನೇಕ ಲಾಭಗಳು ನಮ್ಮ ದೇಹಕ್ಕೆ ಸಿಗುವವು. ಇದರಿಂದ ದೇಹವು ನೀರೋಗಿ, ಶಕ್ತಿಯುತ ಹಾಗೂ ಸ್ವಾಸ್ಥ್ಯದಿಂದ ಕೂಡಿರುತ್ತದೆ. ಚಳಿಯಲ್ಲಿ ವಾತಾವರಣದಿಂದಾಗುವ ಬದಲಾವಣೆಗೆ ಜೇನುತುಪ್ಪವು ದೇಹಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವುದು.

ಜೇನುತುಪ್ಪಿನಲ್ಲಿ ಏನಿರುತ್ತೆ..?

ಜೇನುತುಪ್ಪದಲ್ಲಿ ಫ್ರಕ್ಟೋಜ್, ಗ್ಲುಕೊಜ್, ಸುಕ್ರೋಜ್, ಮಾಲ್ಟೋಜ್ ಈ ರೀತಿಯ ಎಲ್ಲ ಪ್ರಕಾರದ ಹಾಗೂ ದೇಹಕ್ಕೆ ಬೇಕಾಗುವ ಮಹತ್ವದ ಶರ್ಕರಗಳು ಇರುತ್ತವೆ. ಇವೆಲ್ಲವುಗಳು ಕೂಡಿ ಒಟ್ಟು 75 ಪ್ರತಿಶತ ಸಕ್ಕರೆ ಇರುತ್ತದೆ. ಇದರ ಜೊತೆಗೆ ಈ ಜೇನುತುಪ್ಪದಲ್ಲಿ ಎಂಜಾಯಿಮ್, ಅಮಿನೋ ಎಸಿಡ್, ಕಾರ್ಬೋ ಹೈಡ್ರೇಟ್, ಆಯೋಡಿನ್, ಪ್ರೊಟೀನ್, ಎಲ್ಬುಮಿನ್, ಐರನ್, ಸೋಡಿಯಂ, ಫಾಸ್ಪರಸ್,ಕ್ಯಾಲ್ಸಿಯಂ, ಕ್ಲೋರಿನ್ ಹೀಗೆ ದೇಹಕ್ಕೆ ಉಪಯುಕ್ತವಾಗುವ ಹತ್ತು ಹಲವು ಘಟಕಗಳು ಇರುತ್ತವೆ. ಇದೇ ಕಾರಣದಿಂದ ಇದಕ್ಕೆ ನೈಸರ್ಗಿಕ ಔಷಧಿ ಎನ್ನುತ್ತಾರೆ.

ಜೇನುತುಪ್ಪಿನ ಸೇವನೆಯಿಂದ ಆಗುವ ಲಾಭಗಳು….

  • ರೋಗಪ್ರತಿರೋಧಕ ಶಕ್ತಿ ಹೆಚ್ಚಾಗುವುದು. ನೆಗಡಿ ಕೆಮ್ಮುಗಳಂತಹ ವೈರಲ್ ರೋಗಗಳು ಸಮೀಪ ಬರುವದಿಲ್ಲ. ಒಂದು ವೇಳೆ ತಗುಲಿದರೂ ಬೇಗನೆ ಗುಣಮುಖವಾಗುವಿರಿ.
  • ಇದರ ಸೇವನೆಯಿಂದ ವ್ಯಕ್ತಿಯು ಯಾವತ್ತು ಉಲ್ಲಾಸದಿಂದ ಇರುವನು. ಪಚನ ಶಕ್ತಿಯ ಸುಧಾರಣೆಯಾಗುತ್ತದೆ.
  • ದಿನಂಪ್ರತಿ ನೀರಿನಲ್ಲಿ ಜೇನುತುಪ್ಪವನ್ನು ಹಾಕಿ ಕುಡಿದರೆ ಹೊಟ್ಟೆ ಹಗುರವಾಗುತ್ತದೆ.
  • ಕಜ್ಜಿ, ಗಜಕರ್ಣಗಳಂತಹ ಚರ್ಮಕ್ಕೆ ಸಂಬಂಧಿಸಿದ ರೋಗಗಳಿಂದ ಬೇಸತ್ತಿದ್ದರೆ ಒಂದು ಗ್ಲಾಸ್ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಚರ್ಮದ ಈ ರೋಗಗಳ ಸಮಸ್ಯೆ ದೂರಾಗುವುದು.
  • ಕಫ್ ಮತ್ತು ದಮ್ಮು ಇವು ಎರಡಕ್ಕಾಗಿ ಜೇನುತುಪ್ಪವು ರಾಮಬಾಣ ಔಷಧಿಯಾಗಿದೆ. ಇದನ್ನೇ ಹಸಿಶುಂಠಿಯ ಜೊತೆಗೆ ಸೇವಿಸಿದರೆ ಕೆಮ್ಮು ಸಹ ಕಡಿಮೆಯಾಗುವುದು.
  • ಹೃದಯ ರೋಗಗಳಿಂದ ದೂರವಿರಲು ಹಾಗೂ ಹೃದಯವು ಯೋಗ್ಯ ರೀತಿಯಲ್ಲಿ ಕೆಲಸ ಮಾಡಲು ಜೇನುತುಪ್ಪವನ್ನು ಸೇವಿಸಬೇಕು.
  • ಜೇನುತುಪ್ಪಿನ ಸೇವನೆಯಿಂದ ರಕ್ತವು ಶುದ್ಧವಾಗುತ್ತದೆ.
  • ಜೇನುತುಪ್ಪಿನ ಸೇವನೆಯಿಂದ ಆರೋಗ್ಯವು ಚೆನ್ನಾಗಿರುವುದರೊಂದಿಗೆ ದೇಹವು ಸ್ಥೂಲವಾಗುವುದಿಲ್ಲ.
  • ಮಾವಿನ ಹಣ್ಣಿನ ರಸದಲ್ಲಿ ಜೇನುತುಪ್ಪ ಹಾಕಿ ಕುಡಿದರೆ ಕಾಮಾಲೆ ರೋಗವು ಕಡಿಮೆಯಾಗುವುದು.
  • ಇದರ ಸೇವನೆಯಿಂದ ಮೂತ್ರಪಿಂಡಗಳು ಒಳ್ಳೆಯ ಸ್ಥಿತಿಯಲ್ಲಿರುತ್ತವೆ.
  • ಜೇನುತುಪ್ಪದ ಸೇವನೆ ಮಾಡುವುದರಿಂದ ಮುಖದ ಮೇಲಿನ ಮೊಡವೆಗಳು ಕಡಿಮೆಯಾಗುತ್ತವೆ. ಹಾಗೆಯೇ ರೋಸ್ ವಾಟರ್, ನಿಂಬೆಹಣ್ಣು ಮತ್ತು ಜೇನುತುಪ್ಪ ಈ ಮೂರು ಪದಾರ್ಥಗಳ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ಅದರಿಂದಲೂ ಲಾಭವಾಗುತ್ತದೆ.
  • ಜೇನುತುಪ್ಪ ಇದು ಗಾಯವನ್ನು ಬೇಗ ಗುಣಮುಖವಾಗಲು ಸಹಾಯ ಮಾಡುತ್ತದೆ.
  • ಜೇನುತುಪ್ಪದಲ್ಲಿ ಅಂಟಿಬ್ಯಾಕ್ಟರಿಯಲ್ ಮತ್ತು ಆಂಟಿ ಮೈಕ್ರೋಬಿಯಲ್ ಗುಣಗಳಿರುವುದರಿಂದ ಯಾವುದೇ ರೀತಿಯ ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
  • ಟೊಮೇಟೊ ಅಥವಾ ಕಿತ್ತಳೆ ಹಣ್ಣಿನ ರಸದಲ್ಲಿ 1 ಚಮಚ ಜೇನುತುಪ್ಪನ್ನು ಹಾಕಿ ದಿನಂಪ್ರತಿ ಕುಡಿಯುವುದರಿಂದ ಅಪಚನ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಕಡಿಮೆಯಾಗುವವು.