ಚಾಣಕ್ಯ ನೀತಿ; ಪತ್ನಿ ಮತ್ತು ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಈ ಕೃತಿಗಳನ್ನು ಮಾಡಲೇಬಾರದು! ಇದರ ಪರಿಣಾಮಗಳು ಏನಾಗುತ್ತದೆ ನೋಡಿ.

ದೇಶವಷ್ಟೆ ಅಲ್ಲ ಜಗತ್ತೇ ಮನ್ನಿಸುವ ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ಯುದ್ಧನೀತಿ ಪರಿಣಿತ ಆಚಾರ್ಯ ಚಾಣಕ್ಯ ಅವರು ತಮ್ಮ ಸಿದ್ಧಾಂತಗಳಿಗಾಗಿ ಮೊದಲಿನಿಂದಲೂ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ ಸಿದ್ಧಾಂತಗಳ ಬಲದಿಂದಲೇ ಸಾಮಾನ್ಯ ಮನುಷ್ಯನಾದ ಚಂದ್ರಗುಪ್ತ ಮೌರ್ಯನಿಗೆ ಮಗಧದ ಸಾಮ್ರಾಟನಾಗಿ ಮಾಡಿದರು. ಇವರು ತಮ್ಮ ತತ್ವ ಮತ್ತು ಸಿದ್ಧಾಂತಗಳ ಮುಖಾಂತರ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಿದರು. ಇವರು ಒಂದು ನೀತಿ ಶಾಸ್ತ್ರವನ್ನು ಸಹಿತ ಬರೆದಿದ್ದಾರೆ. ಅದರಲ್ಲಿ ಕುಟುಂಬ, ಬಂಧು-ಬಳಗ, ವೈವಾಹಿಕ ಜೀವನ, ಮಕ್ಕಳು, ಸ್ನೇಹಿತರು ಹಾಗೂ ಶತ್ರು ಹೀಗೆ ಎಲ್ಲ ವಿಷಯಗಳ ಮೇಲೆ ವಿವಿಧ ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ.

ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮಕ್ಕಳ ಮುಂದೆ ಮತ್ತು ಪತ್ನಿಯ ಮುಂದೆ ಕೆಲವೊಂದು ಕೃತಿಗಳನ್ನು ಎಂದಿಗೂ ಅಪ್ಪಿತಪ್ಪಿಯೂ ಮಾಡಬಾರದೆಂದು ಹೇಳುತ್ತಾರೆ. ಇವರ ಪ್ರಕಾರ ಶಬ್ದಗಳ ಹೊಡೆತ ತೀಕ್ಷ್ಣವಾಗಿರುತ್ತದೆ. ಹೀಗಾಗಿ ವ್ಯಕ್ತಿಗೆ ಅದು ತುಂಬಾ ನೋವು ನೀಡುತ್ತದೆ. ಆದ್ದರಿಂದ ಪತ್ನಿ ಮತ್ತು ಮಕ್ಕಳ ಮುಂದೆ ಶಬ್ದಗಳ ಉಪಯೋಗ ತುಂಬಾ ಎಚ್ಚರಿಕೆಯಿಂದ ಮಾಡಬೇಕೆಂದು ಹೇಳುತ್ತಾರೆ. ಪತ್ನಿ ಮತ್ತು ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಈ ಕೆಳಗೆ ಹೇಳಿದ ಕೃತಿಗಳನ್ನು ಮಾಡುವುದರಿಂದ ದೂರವಿರಬೇಕು ಎಂದು ಹೇಳುತ್ತಾರೆ. ಅವು ಯಾವವು ಇಲ್ಲಿ ನೋಡಿ…

ದುರ್ವರ್ತನೆ – ಆಚಾರ್ಯ ಚಾಣಕ್ಯ ಅವರು ಹೇಳುವ ಪ್ರಕಾರ ದೊಡ್ಡವರು ಮಾತನಾಡುವ ಭಾಷೆ ಮತ್ತು ಶಬ್ದಗಳ ಪ್ರಭಾವ ಮಕ್ಕಳ ಮೇಲೆ ಬಹುಬೇಗನೆ ಪ್ರಭಾವ ಬೀರುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಮುಂದೆ ಸಂಭಾಷಣೆ ಮಾಡುವಾಗ ಅಧಿಕ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಪೋಷಕರು ಎಂದಿಗೂ ತಪ್ಪಾದ ಅಥವಾ ಅಯೋಗ್ಯವಾದ ಭಾಷೆಯನ್ನು ಉಪಯೋಗಿಸಬಾರದು. ಕಾರಣ ಈ ರೀತಿಯ ಪರಿಣಾಮಗಳು ಮಕ್ಕಳ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತವೆ.

ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರುವ ಕೃತಿ – ಪತ್ನಿಯ ಮನಸ್ಸು ಘಾಸಿಗೊಳಿಸು ವಂತಹ ಯಾವುದೇ ಕೃತಿಯನ್ನು ಆಕೆಯ ಮುಂದೆ ಮಾಡಬೇಡಿ ಎಂದು ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೇಳುತ್ತಾರೆ. ಈ ರೀತಿಯಾಗಿ ವರ್ತಿಸುವುದರಿಂದ ಹೆಂಡತಿಯ ಆತ್ಮವಿಶ್ವಾಸವು ಕಡಿಮೆಯಾಗಿ ಮನೆಯಲ್ಲಿ ಕಲಹ ನಿರ್ಮಾಣವಾಗುವುದು. ಆದ್ದರಿಂದ ಮನೆಯಲ್ಲಿ ಅಥವಾ ಜೀವನದಲ್ಲಿ ಒತ್ತಡದಿಂದ ಮುಕ್ತವಾಗಿರಲು ಪತ್ನಿಯ ಜೊತೆಗೆ ಪ್ರೀತಿಯಿಂದ ಇರಬೇಕು.

ಅಶಿಸ್ತು – ಮನೆಯಲ್ಲಿ ನೀವು ಯಾವತ್ತು ಆನಂದವಾಗಿ ಹಾಗೂ ಪ್ರಫುಲ್ಲಿತವಾಗಿ ಇರಬೇಕೆಂದು ಬಯಸುವುದಾದರೆ ಜೀವನದಲ್ಲಿ ಕೆಲವೊಂದು ಶಿಸ್ತುಗಳನ್ನು ಪಾಲಿಸಲೇಬೇಕು. ಇದಕ್ಕಾಗಿ ಕುಟುಂಬದ ಜೊತೆಗೆ ನಮ್ರತೆಯಿಂದ ನಡೆದುಕೊಳ್ಳಬೇಕು. ಜೊತೆಗೆ ಸಿಟ್ಟಿನಿಂದ ಸಂಪೂರ್ಣವಾಗಿ ದೂರವಿರಬೇಕು. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ತುಂಬಿ ತುಳುಕುತ್ತದೆ.