ಚಾಲೆಂಜ್! ಈ ಒಗಟುಗಳನ್ನು ಬಿಡಿಸುವ ಬುದ್ಧಿ, ಸಂಯಮ, ಚಾತುರ್ಯ ನಿಮ್ಮ ಹತ್ತಿರವಿದ್ದರೆ ಒಂದು ಕೈ ಆಗಿಯೇ ಬಿಡಲಿ…

ನಮ್ಮ ಸಮಾಜದಲ್ಲಿ ಮೊದಲಿನಿಂದಲೂ ವಿಭಿನ್ನ ಒಗಟುಗಳನ್ನು ಪರಿಹರಿಸುವ ಆಟಗಳನ್ನು ಆಡುತ್ತಾ ಬಂದಿದ್ದೇವೆ. ಕೆಲವು ಒಗಟುಗಳು ತುಂಬಾ ಸರಳವಾಗಿದ್ದು, ಸಣ್ಣ ಮಗು ಕೂಡ ಅದಕ್ಕೆ ಉತ್ತರಿಸಬಹುದು. ಆದರೆ ಕೆಲವು ಒಗಟು ಅಥವಾ ಪ್ರಶ್ನೆಗಳು ಹೇಗಿರುತ್ತವೆ ಎಂದರೆ ಎಷ್ಟೋ ಬುದ್ಧಿವಂತ ಜನರು ಸಹ ಅದನ್ನು ಬಿಡಿಸುವಲ್ಲಿ ವಿಫಲರಾಗುತ್ತಾರೆ. ಆದರೆ ಬುದ್ಧಿವಂತ ಜನರೇನು ಈ ಜಗತ್ತಿನಲ್ಲಿ ಕಡಿಮೆ ಇಲ್ಲ.

ಕೆಲವು ಜನರ ಮುಂದೆ ಯಾವುದೇ ಒಗಟುಗಳನ್ನು ಇಟ್ಟರೂ ಸಾಕು ಸಮಯವನ್ನು ವ್ಯರ್ಥ ಮಾಡದೆ ಅದರ ನಿಖರವಾದ ಉತ್ತರವನ್ನು ನೀಡುವಷ್ಟು ಚಾಣಾಕ್ಷರು ಇರುತ್ತಾರೆ. ಆದಾಗ್ಯೂ, ಕೆಲವರು ಸಾಮಾನ್ಯ ಒಗಟುಗಳಿಗೆ ಉತ್ತರಿಸಲು ಹಲವು ದಿನಗಳನ್ನೆ ತೆಗೆದುಕೊಳ್ಳುತ್ತಾರೆ. ಪದಬಂಧಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಒಗಟುಗಳಿಗೆ ಉತ್ತರಿಸುವುದರಿಂದ ಹಲವಾರು ಪ್ರಯೋಜನಗಳು ನಮಗೆ ಸಿಗುತ್ತವೆ.

ಮೊದಲನೆಯ ಪ್ರಯೋಜನೆ ಅವರು ಅದರಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ ಮತ್ತು ಎರಡನೆಯ ಅತಿದೊಡ್ಡ ಪ್ರಯೋಜನವೆಂದರೆ ಉತ್ತರಗಳನ್ನು ಹುಡುಕುವಾಗ ಮೆದುಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಸ್ಮಾರ್ಟ್ ಮತ್ತು ತೀಕ್ಷ್ಣವಾದ ಬುದ್ಧಿಶಕ್ತಿಗೆ ಇದು ಬಹಳ ಮುಖ್ಯ. ಇಂದು ನಾವು ನಿಮಗಾಗಿ ಇದೇ ರೀತಿಯ ಕೆಲವು ಒಗಟುಗಳನ್ನು ತಂದಿದ್ದೇವೆ. ಇವುಗಳ ಉತ್ತರಿಸುವದು ಅಷ್ಟು ಸುಲಭವಲ್ಲ ಆದರೆ ಒಮ್ಮೆ ಇವುಗಳನ್ನು ಉತ್ತರಿಸಲು ಪ್ರಯತ್ನಿಸಿ.

1) 100 ಜನರು ಜೊತೆಯಲ್ಲಿ ಹೋಗಿ ಮರಳಿ ಬರುವಾಗ ಅದರಲ್ಲಿಯ ಕೇವಲ 99 ಜನರು ಮಾತ್ರ ಹಿಂತಿರುಗುತ್ತಾರೆ, ಆ ಸ್ಥಳ ಯಾವುವು?

2) ಇಂಗ್ಲಿಷ್ನಲ್ಲಿ ಯಾವಾಗಲೂ Incorrectly ಉಚ್ಚರಿಸಲಾಗುವ ಇಂಗ್ಲಿಷ್ ಪದ ಯಾವುದು?

3) ಕೆಲವು ತಿಂಗಳುಗಳು 31 ದಿನಗಳು ಹೊಂದಿರುತ್ತವೆ ಆದರೆ 28 ದಿನಗಳು ಹೊಂದಿರುವ ತಿಂಗಳುಗಳು ಎಷ್ಟು?

4) ತಿಳಿದುಕೊಳ್ಳಿ ನೀವು ಒಂದು ಬಸ್ಸಿನಲ್ಲಿ ಪ್ರವಾಸ ಮಾಡುತ್ತಿದ್ದಿರಿ, ಅದೇ ಬಸ್ಸಿನಲ್ಲಿ ಇನ್ನು 10 ಜನ ಪ್ರವಾಸ ಮಾಡುತ್ತಿದ್ದಾರೆ. ಮೊದಲನೇ ಸ್ಟಾಪ್ ನಲ್ಲಿ 2 ಪ್ರವಾಸಿಗರು ಇಳಿದುಕೊಂಡು 4 ಪ್ರವಾಸಿಗರು ಬಸ್ಸಿನಲ್ಲಿ ಹತ್ತುವರು. ಎರಡನೆಯ ಸ್ಟಾಪ್ ನಲ್ಲಿ 5 ಪ್ರವಾಸಿಗರು ಇಳಿಯುತ್ತಾರೆ 2 ಪ್ರವಾಸಿಗಳು ಬಸ್ಸಿನಲ್ಲಿ ಏರುತ್ತಾರೆ. ಮೂರನೆಯ ಸ್ಟಾಪ್ ನಲ್ಲಿ 2 ಪ್ರವಾಸಿ ಇಳಿದುಕೊಂಡು 3 ಪ್ರವಾಸಿಗರು ಬಸ್ಸಿನಲ್ಲಿ ಏರುತ್ತಾರೆ. ಹಗಾದರೆ ಈಗ ಹೇಳಿ ಬಸ್ಸಿನಲ್ಲಿ ಒಟ್ಟು ಎಷ್ಟು ಜನರು ಪ್ರವಾಸ ಮಾಡುತ್ತಿದ್ದಾರೆ?

5) ಬೆಂಕಿಯಲ್ಲಿ ಕರಗುವದಿಲ್ಲ, ಎಂಥ ಶ’ಸ್ತ್ರದಿಂದಲೂ ಅದಕ್ಕೆ ಕತ್ತರಿಸಲು ಸಾಧ್ಯವಿಲ್ಲ, ನೀರಿನಿಂದ ಸಹ ಅದು ಒದ್ದೆಯಾಗುವದಿಲ್ಲ ಅಲ್ಲದೆ ಅದರ ಮೃತ್ಯು ಸಹ ಆಗುವದಿಲ್ಲ ಅಂತಹದ್ದೇನಿದೆ?

6) ಒಂದು ವೇಳೆ 8 ರ ಅರ್ಧ ಭಾಗ ಮಾಡಿದರೆ, 0 ಮತ್ತು 4 ರ ಹೊರೆತು ಪಡಿಸಿ ಯಾವ ಉತ್ತರ ಸರಿಯಾಗಿರುವದು?

7) ಅಂಥ ಯಾವ ಬ್ಯಾಗು ಇದೆ ಅದನ್ನು ಒದ್ದೆ ಮಾಡಿದಾಗಲೇ ತನ್ನ ಕೆಲಸ ಶುರು ಮಾಡುವದು?

8) ಅಂತ ಯಾವ ತರಕಾರಿ ಇದೆ ಅದರಲ್ಲಿ ಲಾಕ್ ಮತ್ತು ಕೀ ಎರಡು ಬರುತ್ತವೆ.

9) ಹುಡುಗಿಯರು ಮಾತ್ರ ಈ ವಸ್ತುವನ್ನು ತಿನ್ನಬಹುದು ಮತ್ತು ಧರಿಸಬಹುದು ಅಂತಹ ವಸ್ತು ಯಾವುದು?

ಉತ್ತರಗಳು….
1. ಸ್ಮಶಾನಭೂಮಿ
2. Incorrectly
3. ಪ್ರತಿ ತಿಂಗಳಲ್ಲಿ 28 ದಿನಗಳು ಇರುತ್ತವೆ.
4. 11(10 ಪ್ರಾವಾಸಿಗರು+ ನೀವು)
5. ನೆರಳು
6. 3
7. ಟೀ ಬ್ಯಾಗ್
8. ಲೌಕಿ(ಲಾಕ್-ಕೀ)
9. ಲವಂಗ (ಲೆಂಗಾ).