ಚಾಲೆಂಜ್! Zoom ಮಾಡಿ ನೋಡಬಹುದು. ಬಿಯರ್ ತುಂಬಿದ ಗ್ಲಾಸ್ ಗಳಲ್ಲಿ ಅಡಗಿದೆ ಒಂದು ಟ್ರೋಫಿ; ಅದೆಲ್ಲಿದೆ ಹೇಳಿ ನೋಡೋಣ…
ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ಬಹಳೇ ತಿನ್ನುತ್ತವೆ. ನೇಟಿಜನ್ಸ್ ಗಳು ಸಹ ಅಂಥ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಹಾಗೆಯೇ ಬಿಡುವುದಿಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತವೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಏನೂ ಕಾಣಿಸುವುದಿಲ್ಲ. ಅಂಥ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಕಂಡುಬರುತ್ತದೆ. ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಇದೇ ರೀತಿಯ ಒಂದು ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೀಡು ಮಾಡಿದೆ. ಇಲ್ಲಿ ಬಿಯರ್ ನಿಂದ ತುಂಬಿದ ಗ್ಲಾಸ್ ಗಳ ಮಧ್ಯೆ ಅಡಗಿದೆ ಒಂದು ಟ್ರೋಫಿ. ಅದನ್ನು ನಿಮಗೆ ಎಲ್ಲಿದೆ ಎಂದು ಹುಡುಕಿ ಹೇಳಬೇಕಿದೆ.

ಪ್ರಸ್ತುತ ಚಿತ್ರದಲ್ಲಿ ಬಿಯರ್ ನಿಂದ ತುಂಬಿದ ಸಾಕಷ್ಟು ಗ್ಲಾಸ್ ಗಳು ಕಾಣುತ್ತಿವೆ. ನೀವು ಬೇರೆ ಯಾವ ವಿಚಾರವೂ ಮಾಡಬೇಡಿ. ಇಲ್ಲಿ ನಿಮಗೆ ಒಂದು ಟಾಸ್ಕ್ ಕಂಪ್ಲೀಟ್ ಮಾಡಬೇಕಿದೆ. ಅದೇನೆಂದರೆ ಈ ಗ್ಲಾಸ್ ಗಳ ಮಧ್ಯದಲ್ಲಿ ಒಂದು ಟ್ರೋಫಿ ಅಡಗಿ ಕುಳಿತಿದೆ. ಎಷ್ಟೇ ಪ್ರಯತ್ನ ಮಾಡಿದರೂ ಆ ಟ್ರೋಫಿ ಹುಡುಕಲು 99% ಜನರು ಫೇಲ್ ಆಗಿದ್ದಾರೆ. ನೀವಾದರೂ ಒಂದು ಕೈ ನೋಡಿಯೇ ಬಿಡಿ. ಮತ್ತು ಈ ಗ್ಲಾಸ್ ಗಳ ಮಧ್ಯೆ ಅಡಗಿ ಕುಳಿತ ಟ್ರೋಫಿಯನ್ನು ಹುಡುಕಿ ತೆಗೆದು ಎಲ್ಲಿದೆ ಅಂತ ಹೇಳಿ ನೋಡೋಣ.

ಮಿತ್ರರೇ ನಿಮಗೆ ಟ್ರೋಫಿ ಎಲ್ಲಿದೆ ಎಂಬುದು ಕಂಡು ಬಂದರೆ ನಿಮ್ಮ ಕಣ್ಣುಗಳು ತುಂಬಾ ಸೂಕ್ಷ್ಮವಾದದ್ದನ್ನು ಗ್ರಹಿಸುತ್ತವೆ ಹಾಗೂ ಶೋಧಿಸುತ್ತವೆ ಅಂತಲೇ ಅರ್ಥ. ಒಂದು ವೇಳೆ ಟ್ರೋಫಿ ಹುಡುಕಲು ಅಸಾಧ್ಯವಾದರೆ ನಾವೇ ನಿಮಗೆ ಸಹಾಯ ಮಾಡುತ್ತೇವೆ.
ಇಲ್ಲಿದೆ ನೋಡಿ ಟ್ರೋಫಿ…👇
