ಚಿಕನ್ ಸ್ಯಾಂಡ್ ವಿಚ್ ಎಂದ್ರೆ ಇದೇನಾ? ವೈರಲ್ ವೀಡಿಯೋ ನೋಡಿ ನಕ್ಕು ಸುಸ್ತಾದ ನೆಟ್ಟಿಗರು ಕೇಳಿದ ಪ್ರಶ್ನೆ

ಪ್ರಾಣಿ ಪಕ್ಷಿಗಳ ಜಗತ್ತೇ ಒಂದು ವಿಸ್ಮಯ ಹಾಗೂ ರೋಚಕ ಎಂದು ನಾವು ಹೇಳಬಹುದು. ಜೀವ ಜಗತ್ತಿನ ಈ ವೈವಿದ್ಯದ ಬಗ್ಗೆ ತಿಳಿಯುತ್ತಾ ಹೋದಷ್ಟು ಅದು ಮತ್ತಷ್ಟು, ಮಗದಷ್ಟು ಆಸಕ್ತಿಯನ್ನು ಕೆರಳಿಸುತ್ತಾ ಸಾಗುತ್ತದೆ. ನಾವು ದಿನ ಪ್ರತಿದಿನ ನೋಡಿದ ಜೀವಿಗಳೇ ನಮಗೆ ವಿಶೇಷವಾಗಿ ಕಾಣುತ್ತದೆ. ಕೆಲವೊಮ್ಮೆ ಪ್ರಾಣಿಗಳ ಮುಗ್ಧತೆಯಲ್ಲೊಂದು ಮೂರ್ಖತನ ಕೂಡಾ ನಮಗೆ ಕಾಣುತ್ತದೆ. ಇಂತಹ ವಿಚಿತ್ರವಾದ ವೀಡಿಯೋಗಳು ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತವೆ ಹಾಗೂ ಜನರ ಮೆಚ್ಚುಗೆಯನ್ನು ಪಡೆಯುವುದಲ್ಲದೇ ಮಾತ್ರ, ಅವರು ಅದನ್ನು ತಮಗೆ ಪರಿಚಯ ಇರುವವರ ಜೊತೆಗೆ ಶೇರ್ ಮಾಡಿಕೊಳ್ಳುವುದು ಕೂಡಾ ಉಂಟು.

ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಇರುವ ಜೀವಿಗಳು ಎಂದರೆ ಅವು ನಾಯಿ, ಬೆಕ್ಕುಗಳು, ಹಸು, ಎಮ್ಮೆ, ಕುರಿ, ಮೇಕೆ, ಕೋಳಿಗಳು. ಇವುಗಳನ್ನು ನಾವು ದಿನವೂ ನೋಡುತ್ತಲೇ ಇರುತ್ತೇವೆ ಇವುಗಳಲ್ಲಿ ಅಂತಹ ವಿಶೇಷ ಏನು? ಎನ್ನುವಿರಾ. ಖಂಡಿತ ವಿಶೇಷ ಇದ್ದೇ ಇರುತ್ತದೆ ಆದರೆ ನಾವು ಅವುಗಳನ್ನು ಸರಿಯಾಗಿ ಗಮನಿಸಿರುವುದಿಲ್ಲ ಅಷ್ಟೇ. ಆದರೆ ಕೆಲವರು ಮಾತ್ರ ಅಂತಹ ವಿದೇಷತೆಗಳು ಕಂಡು ಬಂದಾಗ ಕೂಡಲೇ ಅವುಗಳನ್ನು ವೀಡಿಯೋ ಮಾಡಿಕೊಂಡು ಎಲ್ಲರೊಂದಿಗೆ ಹಂಚಿಕೊಳ್ಳುವುದು ಕೂಡಾ ಉಂಟು. ಆಗ ಆ ದೃಶ್ಯಗಳನ್ನು ನೋಡಿದಾಗ ಮನಸ್ಸಿನಲ್ಲಿ ಎಂತಹ ಬೇಸರವಿದ್ದರೂ ಕೂಡಾ ಕಳೆದು ಹೋಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಒಂದು ವೀಡಿಯೋ ವೈರಲ್ ಆಗಿದ್ದು, ಈಗಾಗಲೇ ಅಸಂಖ್ಯಾತ ಜನರು ಈ ವೀಡಿಯೋವನ್ನು ನೋಡಿ ಮೆಚ್ಚಿರುವುದು ಮಾತ್ರವೇ ಅಲ್ಲದೇ ಅದಕ್ಕೆ ವೈವಿದ್ಯಮಯ ಕಾಮೆಂಟ್ ಗಳ ಮೂಲಕ ಪ್ರತಿಕ್ರಿಯೆಯನ್ನು ಕೂಡಾ ನೀಡುತ್ತಾ ಸಾಗಿದ್ದಾರೆ. ಹಾಗಿದ್ದರೆ ಈ ವೈರಲ್ ವೀಡಿಯೋದಲ್ಲಿ ಅಂತಹ ವಿಶೇಷ ಏನಿದೆ ಅನ್ನೋದಾದ್ರೆ, ಇದರಲ್ಲಿ ಒಂದು ಹುಂಜ ಹಾಗೂ ಒಂದಷ್ಟು ಕೋಳಿಗಳು ಏನನ್ನೇ ಆರಿಸಿಕೊಂಡು ತಿನ್ನುತ್ತಿವೆ‌. ಆಗ ಒಂದು ಹುಂಜ ಅಲ್ಲಿ ನೆಲದ ಮೇಲೆ ಬಿದ್ದಿರುವ ಒಂದು ಬ್ರೆಡ್ ತುಂಡನ್ನು ತಿನ್ನಲು ಬಂದಿದೆ‌. ಮಧ್ಯೆ ಎಲ್ಲಾ ಖಾಲಿಯಾಗಿ ಸುತ್ತಾ ಒಂದು ಲೇಯರ್ ಇರುವ ಬ್ರೆಡ್ ಅನ್ನು ಅದು ತಿನ್ನುವ ಪ್ರಯತ್ನ ಮಾಡಿದೆ.

ಆದರೆ ಅದು ತಿನ್ನುವ ವಿಧಾನ ಹೇಗಿದೆ ಎಂದರೆ ಅದು ಕೊಕ್ಕಿನಿಂದ ಕು ಕ್ಕುವ ವೇಗಕ್ಕೆ ಆ ಬ್ರೆಡ್ ತುಂಡು ಅದರ ಕೊಕ್ಕಿನ ಮೇಲೆ ಏರಿದೆ, ಅನಂತರ ಅದು ಕುತ್ತಿಗೆಗೆ ಹೋಗಿ ಅಲ್ಲೇ ಸರದಂತೇ ಸೇರಿದೆ. ಸರಿ ಅಷ್ಟಕ್ಕೇ ಸುಮ್ಮನಾಗದ ಹುಂಜ ಮತ್ತೆ ಮುಂದೆ ಹೋಗಿದೆ. ಅಲ್ಲೊಂದು ಕೋಳಿ ತಿನ್ನುತ್ತಿದ್ದ ಬ್ರೆಡ್ ಅನ್ನು ಕೂಡಾ ತಿನ್ನಲು ಹೋಗಿ ಅದು ಕೂಡಾ ಈ ಮೊದಲಿನ ಬ್ರೆಡ್ ತುಂಡಿನಂತೆ ಎಗರಿಕೊಂಡು ಅದರ ಕೊಕ್ಕಿಗೆ ಹಾಗೆ ಅದು ಮೈ ಒದರಿದಾಗ ಅಲ್ಲಿಂದ ಹಾರಿ ಅದರ ಕುತ್ತಿಗೆಗೆ ಹೋಗಿದೆ. ಹುಂಜದ ಈ ಬ್ರೆಡ್ ತಿನ್ನುವ ಆಟದಲ್ಲಿ ಎರಡು ಬ್ರೆಡ್ ಗಳು ಆಹಾರವಾಗುವ ಬದಲು ಅದರ ಕೊರಳಿನ ಲ್ಲಿ ಹಾರವಾಗಿ ಹೋಗಿದೆ.

ವಿಡಿಯೋ ನೋಡಿ

ಕೊರಳಲ್ಲಿ ಸಿಲುಕಿದ ಆ ಬ್ರೆಡ್ ತುಂಡುಗಳನ್ನು ತಿನ್ನುವ ಪ್ರಯತ್ನವನ್ನು ಮಾಡಿದೆಯಾದರೂ ಪಾಪಾ ಅದು ಸಾಧ್ಯವಾಗಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು ಇದು ಕೋಳಿಗಳ ಜಗತ್ತಿನಲ್ಲಿ ಸಂಪತ್ತಿನ ಚಿಹ್ನೆ ಎನ್ನಲಾಗುವುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮತ್ತೊಬ್ಬರು ಬಹುಶಃ ಚಿಕನ್ ಸ್ಯಾಂಡ್ ವಿಚ್ ಎಂದರೆ ಇದೇನಾ? ಎಂದು ವ್ಯಂಗ್ಯವಾಡಿದ್ದಾರೆ. ಕೆಲವರು ವೀಡಿಯೋ ಮಾಡುವಾಗ ನಗುತ್ತಿದ್ದ ವ್ಯಕ್ತಿಯ ನಗುವನ್ನು ಗಮನಿಸಿ ಬಹುಶಃ ಆ ವ್ಯಕ್ತಿ ನಕ್ಕು ನಕ್ಕು ಸಾ ಯು ವನೇನೋ ಎಂದು ಕೂಡಾ ಕಾಮೆಂಟ್ ಮಾಡಿದ್ದಾರೆ.