ಚಿಕಿತ್ಸೆಗಾಗಿ ಆಸ್ಪತ್ರೆಯ ಏಣಿಯ ಮೇಲೆ ಬಂದು ಕುಳಿತ ಗಾಯಾಳು ಮಂಗ! ಅನಂತರ ಹಾಸ್ಪಿಟಲ್ ಸ್ಟಾಫ್ ಮಾಡಿದ್ದೇನು ನೋಡಿ ವೈರಲ್ ವಿಡಿಯೋ

ಕೋತಿಗಳನ್ನು ನಮ್ಮ ಪೂರ್ವಜರು ಎಂದು ಕರೆಯಲಾಗುತ್ತದೆ. ಕೋತಿಗಳು ಆಗಾಗ್ಗೆ ಅನೇಕ ಸಾಹಸಗಳನ್ನು ಮಾಡುವುದನ್ನು ನೀವು ನೋಡಿರಬಹುದು. ಅಲ್ಲದೆ ಕೋತಿಗಳು ಜನರಿಗೆ ಅನೇಕ ಪ್ರಕಾರದ ಮನೋರಂಜನೆ ಸಹ ಮಾಡುವದನ್ನು ನಾವು ನೋಡಿದ್ದೇವೆ. ಇದೇ ರೀತಿಯ ಒಂದು ಪ್ರಕರಣ ನಮ್ಮ ಕರ್ನಾಟಕದಲ್ಲಿ ಬೆಳಕಿಗೆ ಬಂದಿದೆ. ವಾಸ್ತವವಾಗಿ, ಗಾಯಗೊಂಡ ಬಬೂನ್ ಕೋತಿ ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ತಲುಪಿದೆ. ಸದ್ಯಕ್ಕೆ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಟ್ವಿಟ್ಟರ್ ನಲ್ಲಿ ಈ ವೀಡಿಯೊವನ್ನು ಆಯ್ ಎಫ್ ಎಸ್ ಅಧಿಕಾರಿ ಸಂದೀಪ್ ತ್ರಿಪಾಠಿಯವರು ಶೇರ್ ಮಾಡಿ ಅದಕ್ಕೆ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ‘ದಾಂಡೇಲಿಯ ಪಾಟೀಲ್ ಆಸ್ಪತ್ರೆಯಲ್ಲಿ ಗಾಯಗೊಂಡ ಮಂಗವನ್ನು ಚಿಕಿತ್ಸೆ ಮಾಡಿ ಗುಣಪಡಿಸಿದ್ದಾರೆ. ಆಸ್ಪತ್ರೆಯಲ್ಲಿಯ ಸಿಬ್ಬಂದಿಗಗಳಿಗೆ ಎಷ್ಟು ಹೊಗಳಿದರು ಅದು ಕಡಿಮೆಯೇ’.

ಗಾಯಗೊಂಡ ಕೋತಿ ಆಸ್ಪತ್ರೆಯ ಏಣಿಯ ಮೇಲೆ ಬಂದು ಚಿಕಿತ್ಸೆಗಾಗಿ ಕಾಯುತ್ತಿತ್ತು:- ಈ ವಿಡಿಯೋದಲ್ಲಿ ಗಾಯಗೊಂಡ ಮಂಕಿ ಮನುಷ್ಯರಂತೆ ಅದು ಸಹ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಮೆಟ್ಟಿಲಲ್ಲಿ ಕುಳಿತುಕೊಂಡು ವೈದ್ಯರಿಗಾಗಿ ಕಾಯುತ್ತಿತ್ತು. ಅಲ್ಲದೆ ಅಲ್ಲಿದ್ದ ಜನರಿಗೆ ಯಾವುದೇ ಪ್ರಕಾರದ ತೊಂದರೆ ಸಹ ನೀಡಲಿಲ್ಲ. ಆಸ್ಪತ್ರೆಗೆ ಹೋಗಿ ಬರುವ ಜನರು ಆರಾಮವಾಗಿ ಕುಳಿತ ಕೋತಿಯನ್ನು ನೋಡುತ್ತಿದ್ದರು. ಅದರನಂತರ ಆಸ್ಪತ್ರೆಯಲ್ಲಿಯ ಸಿಬ್ಬಂದಿ ಬಂದರು.

ತದನಂತರ ಕೋತಿಯ ತಪಾಸಣೆ ಮಾಡಿದರು. ಕೋತಿಗೆ ಆದ ಗಾಯವನ್ನು ಕಂಡಾಗ ಅದಕ್ಕೆ ಚಿಕಿತ್ಸೆ ಮಾಡುವ ಸಲುವಾಗಿ ಆಸ್ಪತ್ರೆಯ ಒಳಗಡೆ ಕರೆದುಕೊಂಡು ಹೋದರು. ಒಳಗಡೆ ಕರೆದೊಯ್ದು ಅದರ ಉಪಚಾರ ಮಾಡಿದರು. ಈ ವಿಡಿಯೋಗೆ ಇದುವರೆಗೆ ಸುಮಾರು 32 ಸಾವಿರಕ್ಕಿಂತ ಹೆಚ್ಚು ಜನರು ನೋಡಿದ್ದಾರೆ.

ಈ ಪ್ರಕಾರದ ಆಸ್ಪತ್ರೆಯ ಸಿಬ್ಬಂದಿಗಳ ಕೆಲಸ ನೋಡಿ ಜನರು ಅವರ ಕಾರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಅಲ್ಲದೆ ಈ ವಿಡಿಯೋ ಗೆ ತುಂಬಾ ಕಾಮೆಂಟ್ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಕಾಮೆಂಟ್ ನಲ್ಲಿ ಕಾರ್ಯದ ಕುರಿತು ಹೊಗಳಿದ್ದಾರೆ.