ಚಿಕ್ಕಮಕ್ಕಳು ಮೊಬೈಲ್ ಚಲಾಯಿಸುವದನ್ನು ನೀವು ಎಷ್ಟೋ ಬಾರಿ ನೋಡಿದಿರಿ, ಆದರೆ ಈ ಗಿಳಿ ಸಹ ಮನುಷ್ಯರಂತೆ ಮೊಬೈಲ್(ಟ್ಯಾಬ್) ಆಪರೇಟ್ ಮಾಡುತ್ತೆ ನೋಡಿ!!
ಇಂದಿನ ಚಿಕ್ಕ ಮಗುವಿನ ಹಿಡಿದ ಪ್ರಾಯದ ಯುವಕರ ವರೆಗೆ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಅನೇಕ ಪ್ಲಾಟ್ಫಾರ್ಮ್ ಗಳಿವೆ ಅವುಗಳಲ್ಲಿ ಹೆಚ್ಚಾಗಿ ನಮಗೆ ವಿಡಿಯೋಗಳನ್ನು ನೋಡಲು ಸಿಗುತ್ತವೆ. ದಿನದಿಂದ ದಿನಕ್ಕೆ ಹೊಸ ಹೊಸ ವೀಡಿಯೋಗಳನ್ನು ನೋಡಲು ಸಿಗುತ್ತವೆ. ಹೀಗಾಗಿ ವಿಡಿಯೋ ನೋಡಲು ನಮಗೆ ಅತ್ಯವಶ್ಯಕವಾಗಿ ಬೇಕಾದದ್ದು ಮೊಬೈಲ್. ಚಿಕ್ಕ ಮಕ್ಕಳಿಂದ ವೃದ್ಧರ ವರೆಗೂ ಇಂದು ಎಲ್ಲರ ಹತ್ತಿರ ಆಂಡ್ರಾಯ್ಡ್ ಅಂದರೆ ಸ್ಮಾರ್ಟ್ಫೋನ್ ನೋಡಲು ಸಿಗುತ್ತವೆ. ಒಂದು ಹೊತ್ತಿನ ಊಟ ಇಲ್ಲದಿದ್ದರೂ ಪರವಾಗಿಲ್ಲ ಆದ್ರೆ ಮೊಬೈಲ್ ಮಾತ್ರ ಸದಾ ತಮ್ಮ ಹತ್ತಿರವೇ ಇರಬೇಕು.
ಮೊಬೈಲ್ ಇರದಿದ್ದರೆ ಹುಚ್ಚು ಹಿಡಿದ ಮಂಗನ್ ವರ್ತನೆ ಮಾಡುತ್ತಾರೆ. ಮುಖ್ಯವಾಗಿ ಇಂದು ಮಕ್ಕಳು ಸಹ ಮೊಬೈಲ್ ಕೊಟ್ಟರೆ ಸಾಕು ಅವರಿಗೆ ಇತರ ಯಾವುದೇ ವಸ್ತು ಕೊಡುವ ಅವಶ್ಯಕತೆ ನೆ ಇಲ್ಲ. ಅಲ್ಲದೆ ಹುಟ್ಟಿದ ಮಗು ಸಹ ಮೊಬೈಲ್ ಅಡಿಕ್ಟ್ ಆಗುತ್ತಿವೆ. ವಿಚಿತ್ರ ವೆಂದರೆ ಒಂದು ವರ್ಷದ ಮಗು ತನ್ನ ಕೈಯಲ್ಲಿ ಮೊಬೈಲ್ ತಗೆದುಕೊಂಡು ತನಗೆ ಬೇಕಾದ ಗೇಮ್ ಆಡುತ್ತದೆ ಅಲ್ಲದೆ ವಿಡಿಯೋ ನೋಡಲು ಬಯಸಿದರೆ ಅದು ಯೂಟ್ಯೂಬ್ ಓಪನ್ ಮಾಡಿ ಅದರಲ್ಲಿ ತನಗಿಷ್ಟವಾದ ವಿಡಿಯೋ ಪ್ಲೇ ಮಾಡುತ್ತದೆ. ಈ ರೀತಿಯ ಅದೆಷ್ಟೋ ಮಕ್ಕಳನ್ನು ನೀವು ನೋಡಿರಬಹುದು. ಆದರೆ ಈ ವಿಡಿಯೋದಲ್ಲಿ ಒಂದು ಪಕ್ಷಿ ಮೊಬೈಲ್(ಟ್ಯಾಬ್) ಆಪರೇಟ್ ಮಾಡುತ್ತೆ ಇದನ್ನು ಕೇಳಿ ನಿಮಗೆ ಆಶ್ಚರ್ಯ ವೆನಿಸಿರಬಹುದು ಆದ್ರೆ ಇದು ನಿಜ. ಈ ವಿಡಿಯೋ ನೋಡಿದ ಮೇಲೆ ನಿಮಗೆ ನಂಬಿಕೆ ಬರುತ್ತೆ.
ಈ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಪಕ್ಷಿ ಅಂದರೆ ಗಿಳಿ ತನ್ನ ಕೊಕ್ಕರೆಯ ಮುಖಾಂತರ ಮೊಬೈಲ್(ಟ್ಯಾಬ್) ಆಪರೇಟ್ ಮಾಡುತ್ತೆ ಅಷ್ಟೇ ಅಲ್ಲದೆ ಮನುಷ್ಯರಂತೆ ಅದು ಸಹ ಯೂಟ್ಯೂಬ್ ಓಪನ್ ಮಾಡಿ ಅದರಲ್ಲಿ ತನ್ನ ನೆಚ್ಚಿನ ವಿಡಿಯೋ ಪ್ಲೇ ಮಾಡುತ್ತೇ. ಈ ಗಿಳಿ ಮೊಬೈಲ್ ಆಪರೇಟ್ ಮಾಡುವ ಪದ್ಧತಿ ನೋಡಿದರೆ ಈ ಪಕ್ಷಿ ಎಷ್ಟೊಂದು ಹುಷಾರ್ ಇದೆ ಎಂದು ಅನಿಸುತ್ತೆ. ಇದಕ್ಕೆ ಅದರ ಮಾಲೀಕ ಟ್ರೇನಿಂಗ್ ಕೊಟ್ಟಿರಬಹುದು ಎಂದು ನೆಟ್ಟಿಗರು ಹೇಳುತ್ತಾರೆ. ಅಷ್ಟೇ ಅಲ್ಲದೆ ಈ ಗಿಳಿ ಮೊಬೈಲ್ ನಲ್ಲಿ ಕ್ಯಾಮೆರಾ ಓಪನ್ ಮಾಡಿ ತನ್ನಷ್ಟಕ್ಕೆ ತಾನು ಫೋಟೋ ತಗೆದುಕೊಳ್ಳುವದು. ನೋಡಿ ಈ ಅದ್ಭುತವಾದ ಗಿಳಿಯ ಟ್ಯಾಲೆಂಟ್ ವಿಡಿಯೋ.
ವೀಡಿಯೋ ನೋಡಿ.
View this post on Instagram
ಪ್ರಸ್ತುತ ವೈರಲ್ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ insta. Beakk ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದ್ದು. ಇದುವರೆಗೆ ಇದನ್ನು ಸುಮಾರು ಐದು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.