ಚಿಕ್ಕವನಿರುವಾಗಲೇ ತಂದೆ ತೀರಿಕೊಂಡರು, ತಾಯಿ ಅನಾಥಾಶ್ರಮಕ್ಕೆ ಕಳುಹಿಸಿದರು ಮತ್ತು ಈಗ ಅದೇ ಹುಡುಗ ಐಎಎಸ್ ಅಧಿಕಾರಿಯಾಗಿದ್ದಾನೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಒಂದೋ ಎರಡೋ ಬಾರಿ ಫೇಲ್ ಆದರೆ ಸಾಕು ಇದು ನನ್ನ ಕೈಯಲ್ಲಿ ಆಗುವದಿಲ್ಲ ಅಂತ ಭಯಗೊಂಡು ಈ ಸ್ಪರ್ಧಾತ್ಮಕ ಪರೀಕ್ಷೆಯಿಂದ ದೂರ ಹೋಗುತ್ತಾರೆ. ಏಕೆಂದರೆ ಒಂದು ವೇಳೆ ಯಶಸ್ವಿಯಾಗದಿದ್ದರೆ ತನ್ನ ಜೀವನದಲ್ಲಿ ಮುಂದೆ ಏನು ಮಾಡಬೇಕು ಎಂಬುದು ತಿಳಿಯದೆ ಚಿಂತೆಗೀಡಾಗುತ್ತಾರೆ. ಇದರಿಂದ ಅವರಿಗೆ ಮುಂದೆ ಯಾವುದೇ ದಾರಿ ಕಾಣುವುದಿಲ್ಲ.

ಆದರೆ ನಮ್ಮ ಸತತ ಅಭ್ಯಾಸ ಮತ್ತು ಧೈರ್ಯ, ಗುರಿಯೊಂದಿದ್ದರೆ ಸಾಕು ನಮ್ಮ ಎದುರು ಎಂತಹದೇ ಸಮಸ್ಯೆ ಬಂದರು ಅದನ್ನು ನಾವು ಬಗೆಹರಿಸಲು ಸಾಧ್ಯ. ಇಂತಹ ಒಬ್ಬ ಪರಾಕ್ರಮಿ ವ್ಯಕ್ತಿಯ ಕುರಿತು ಇಂದು ನಾವು ನಿಮಗೇ ತಿಳಿಸಲಿದ್ದೇವೆ. ಅದಕ್ಕಾಗಿ ಇಂದು 2011ರ ಖಂಡಪೀಠದ ಐಎಎಸ್ ಮೊಹಮ್ಮದ್ ಅಲಿ ಶಿಹಾಬ್ ಅವರ ಯಶೋಗಾಥೆಯನ್ನು ನಿಮಗೆ ತಿಳಿಸಲಿದ್ದೇವೆ.

ಮೊಹಮ್ಮದ್ ಅಲಿ ಶಿಹಾಬ್ ಅವರು ಕೇರಳದ ಮಲಪ್ಪುರಂ ಜಿಲ್ಲೆಯ ಅಡ್ವಾನಪ್ಪರ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲಿ ಶಿಹಾಬ್ ತನ್ನ ತಂದೆಯೊಂದಿಗೆ ಬುಟ್ಟಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಶಿಹಾಬ್ ತಂದೆ 1991 ರಲ್ಲಿ ದೀರ್ಘಕಾಲದ ಅ#ನಾರೋಗ್ಯದಿಂದ ನಿಧ#ನರಾದರು.

ತಂದೆಯ ಮರಣದ ನಂತರ ಶಿಹಾಬ್ ಕುಟುಂಬಕ್ಕೆ ಸಂಕಟಗಳು ಬೆನ್ನು ಹತ್ತಿದವು. ಕುಟುಂಬವು ತುಂಬಾ ಬಡವಾಗಿತ್ತು, ಶಿಹಾಬ್ ತಂದೆಯ ಮರಣದ ನಂತರ ಶಿಹಾಬ್ ಅವರ ತಾಯಿ ತನ್ನ ಐದು ಮಕ್ಕಳನ್ನು ಪೋಷಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವಳು ತನ್ನ ಎಲ್ಲಾ ಮಕ್ಕಳನ್ನು ಅನಾಥಾಶ್ರಮಕ್ಕೆ ಕಳುಹಿಸಿದಳು. ಹಾಗಾಗಿ ಶಿಹಾಬ್ ಮತ್ತು ಅವರ ಒಡಹುಟ್ಟಿದವರು ತಮ್ಮ ಬಾಲ್ಯವನ್ನು ಅನಾಥಾಶ್ರಮದಲ್ಲಿಯೆ ಕಳೆದರು.

ಶಿಹಾಬ್ ಮೊದಲಿನಿಂದಲೂ ಜಾಣ ವಿದ್ಯಾರ್ಥಿಯಾಗಿದ್ದನು. ಆದ್ದರಿಂದ ಆತನಿಗೆ ಮುಂದಿನ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ದೊರೆಯಲು ಶುರುವಾಯಿತು. ಶಿಹಾಬ್‌ಗೆ ಇಂಗ್ಲಿಷ್ ವಿಷಯ ವೆಂದರೆ ತುಂಬಾ ಕಠಿ#ಣವಾದ ವಿಷಯವಾಗಿತ್ತು. ಆದರೆ ಅವರು ಇಂಗ್ಲಿಷ್ ಕಲಿಯಲು ತುಂಬಾ ಪ್ರಯತ್ನ ಮಾಡಿದರು. ಶಿಹಾಬ್ ಅವರು ಬಾಲ್ಯದಿಂದಲೂ ಒಬ್ಬ ದೊಡ್ಡ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದರು.

ಶಿಹಾಬ್ ತಮ್ಮ 25 ನೇ ವಯಸ್ಸಿನಲ್ಲಿ ನಾಗರಿಕ ಸೇವೆಯ ತಯಾರಿ ಆರಂಭಿಸಿದರು ಮತ್ತು ತಮ್ಮ ಮೊದಲ ಪ್ರಯತ್ನದಲ್ಲಿ ಪೂರ್ವ ಪರೀಕ್ಷೆಯಲ್ಲಿ ಯಶಸ್ವಿಯಾದರು. ಆದರೆ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ನಂತರದ ವರ್ಷದಲ್ಲಿ ಎರಡನೇ ಪ್ರಯತ್ನದಲ್ಲಿ ಸಹ ವಿಫಲರಾದರು ಆದರೆ ಮೂರನೇ ಪ್ರಯತ್ನದಲ್ಲಿ ಪೂರ್ವ ಮತ್ತು ಮುಖ್ಯ ಎರಡು ಪರೀಕ್ಷೆಗಳನ್ನು ಕ್ಲಿಯರ್ ಮಾಡಿದರು.

ಎರಡು ಬಾರಿ ಸಿವಿಲ್ ಸರ್ವೀಸ್ ಪರೀಕ್ಷೆಗಳಲ್ಲಿ ಅವರಿಗೆ ಬಹಳಷ್ಟು ಕಲಿಯಲು ದೊರಕಿತು. ಆದರೆ ತನಗೆ ಬರುವ ಇಂಗ್ಲಿಷ್ ಪ್ರಮಾಣ ಸಂದರ್ಶನಕ್ಕೆ ಸಾಕಾಗುವದಿಲ್ಲ ಎಂದು ತಿಳಿದುಕೊಂಡು ಆ ಎರಡು ವರ್ಷಗಳಲ್ಲಿ ಉತ್ತಮವಾಗಿ ಇಂಗ್ಲಿಷ್ ಮಾತನಾಡಲು ಕಲಿತುಕೊಂಡರು. ಅವರು ಪರೀಕ್ಷೆ ತೇರ್ಗಡೆಯಾದ ವರ್ಷ ದೇಶದಲ್ಲಿ 226 ನೇ ಸ್ಥಾನದಲ್ಲಿದ್ದರು.