ಚಿಕ್ಕ ಮುಂಗುಸಿಯ ಮುಂದೆಯೂ ಸೋಲೊಪ್ಪಿಕೊಳ್ಳಬೇಕಾಯಿತು ವಿಷಸರ್ಪಕ್ಕೆ, ನೋಡಿ ಕಾದಾಟದ ಸಖತ್ ವೈರಲ್ ವಿಡಿಯೋ!

ಯಾಕೆ ಅಂತ ಗೊತ್ತಿಲ್ಲ ಮೊದಲಿನಿಂದಲೂ ಹಾವು-ಮುಂಗುಸಿ ಎರಡಕ್ಕೂ ಒಂದನ್ನೊಂದು ಕಂಡರೆ ಆಗಿಯೇ ಬರುವುದಿಲ್ಲ. ಇವುಗಳ ಜಗಳವಂತು ಜನ್ಮಜನ್ಮಾಂತರದಿಂದ ನಡೆದುಬಂದಿದೆ ಎನ್ನಬಹುದು. ಹಾವು ಕಾಣಿಸಿದರೆ ಸಾಕು ಮುಂಗುಸಿ ಅದರ ಮೇಲೆ ಅಟ್ಯಾಕ್ ಮಾಡಿಯೇ ಮಾಡುತ್ತದೆ. ಹಾವು ಎಷ್ಟೇ ದೊಡ್ಡದಿದ್ದರು ಮುಂಗುಸಿ ಮಾತ್ರ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗುತ್ತದೆ. ಕೆಲವೊಂದು ಸಲ ಮುಂಗುಸಿ ತುಂಬಾನೇ ಚಿಕ್ಕದಿದ್ದರೆ ಮಾತ್ರ ಆಗ ಹಾವು ಗೆಲ್ಲುವುದು ಸಹಜ.

ಸದ್ಯ ಉತ್ತರಪ್ರದೇಶದಲ್ಲಿಯ ಹಾವು ಮತ್ತು ಮುಂಗುಸಿಯ ಕಾದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸ್ಥಳೀಯ ಅನೇಕರು ಈ ದೃಶ್ಯವನ್ನು ನೋಡುತ್ತಿರುವಾಗ ಅವರಲ್ಲಿದ್ದ ಯಾರೋ ಒಬ್ಬರು ವಿಡಿಯೋ ಮಾಡಿ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ರವಿವಾರದ ಮಧ್ಯಾಹ್ನ ಹಾವು ಮತ್ತು ಮುಂಗುಸಿಯ ಭರ್ಜರಿ ಫೈಟ್ ಆಗಿದೆ. ಉದ್ದವಾದ ವಿಷಸರ್ಪಕ್ಕೆ ಮುಂಗುಸಿಯ ಮರಿಯು ಹೋರಾಟ ಮಾಡಿ ಜೀರ್ಣಾವಸ್ಥೆಗೆ ತಂದಿದೆ. ಸುಮಾರು ಸಮಯದವರೆಗೆ ನಡೆದ ಈ ಕಾದಾಟದಲ್ಲಿ ಮುಂಗುಸಿಯು ಕೊನೆಗೂ ಗೆದ್ದಿದೆ. ಈ ಕಾಳಗವನ್ನು ನೋಡಲು ಸುಮಾರು ಜನ ಜಾತ್ರೆಯ ಹಾಗೆ ನೆರೆದಿದ್ದರು.

ವಿಡಿಯೋದಲ್ಲಿ ಕಾಣುವ ಹಾಗೆ ಮುಂಗುಸಿಗಿಂತ ಉದ್ದವಾದ ಹಾವು ಎದ್ದುನಿಂತು ಮುಂಗುಸಿಗೆ ಹೆದರಿಸಿ ಹೊಡೆಯಬೇಕೆಂದು ಪ್ರಯತ್ನ ಮಾಡಿದರೂ ಅವುಗಳನ್ನೆಲ್ಲ ತಪ್ಪಿಸಿಕೊಂಡು ಮುಂಗುಸಿ ಹಾವಿನ ಮೇಲೆ ಪ್ರತಿಹಲ್ಲೆ ಮಾಡಿದೆ. ಹಾವಿನಷ್ಟು ಎತ್ತರವಾಗಲು ಪ್ರಯತ್ನಿಸುತ್ತದೆ, ಅದರ ತಲೆಯನ್ನು ಹಿಡಿದು ನೆಲಕ್ಕೆ ಅಪ್ಪಳಿಸುವ ಪ್ರಯತ್ನ ಮಾಡುತ್ತದೆ, ಇದರಲ್ಲಿ ಮುಂಗುಸಿಯು ಯಶಸ್ವಿಯೂ ಆಗುತ್ತದೆ.

ವಿಡಿಯೋ ನೋಡಿ

ಹಾವು ಮುಂಗುಸಿಯ ಅನೇಕ ವಿಡಿಯೋಗಳನ್ನು ನೀವು ಇಲ್ಲಿಯವರೆಗೆ ನೋಡಿರಬಹುದು. ಆದರೆ ಈ ಕಾಳಗದಲ್ಲಿ ಚಿಕ್ಕ ಮುಂಗುಸಿ ದೊಡ್ಡ ಹಾವಿನ ಜೊತೆಗೆ ಹೋರಾಟ ಮಾಡಿ ಸೋಲಿಸಿದ ಈ ಕಾಳಗ ನಿಜಕ್ಕೂ ವಿಶೇಷವಾಗಿದೆ ಎಂದೇ ಹೇಳಬಹುದು.