ಚಿತ್ರ ಜೂಮ್ ಮಾಡಿ ನೋಡಬಹುದು; ಈ ಮುಖದಂತೆ ಕಾಣುವ ಡಿಸೈನ್ ನಲ್ಲಿ ಅಡಗಿದೆ ಒಂದು ಇಂಗ್ಲಿಷ್ ರಹಸ್ಯ ಶಬ್ದ? ಅದೇನೆಂದು ನಿಮ್ಮ ಕಣ್ಣುಗಳು ಶೋಧಿಸಿ ಹೇಳಲು ಸಾಧ್ಯವೇ?
ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ಬಹಳೇ ತಿನ್ನುತ್ತವೆ. ಮತ್ತು ಈ ನೇಟಿಜನ್ಸ್ ಗಳು ಸಹ ಅಂಥ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಹಾಗೆಯೇ ಬಿಡುವುದಿಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತವೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಒಂದು ಚಿತ್ರದ ಹೊರತಾಗಿ ಬೇರೆ ಏನೂ ಕಾಣಿಸುವುದಿಲ್ಲ. ಅಂಥ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಅಥವಾ ನಂಬರ್ ಅಥವಾ ಶಬ್ದ ಕಂಡುಬರುತ್ತದೆ. ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ.
ಈ ರೀತಿಯ ಅನೇಕ ಚಿತ್ರಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿವೆ. ನೇಟಿಜನ್ಸ್ ಗಳಿಗೆ ಇವು ತುಂಬಾ ಇಷ್ಟವಾಗುವದರ ಜೊತೆಗೆ ಚರ್ಚೆಗೂ ಸಹ ಈಡು ಮಾಡುತ್ತಿವೆ.
ಈಗ ಇಲ್ಲಿ ನೀವೂ ನೋಡುವ ಆಪ್ಟಿಕಲ್ ಇಲ್ಯೂಸನ್ ನ ಬೇರೊಂದು ಚಿತ್ರದಲ್ಲಿ ಮನುಷ್ಯನ ಮುಖ ಕಂಡು ಬರುತ್ತಿದೆ. ಚಿತ್ರದಲ್ಲಿ ಮೇಲ್ನೋಟಕ್ಕೆ ವ್ಯಕ್ತಿಯ ಹುಬ್ಬುಗಳು, ಕಣ್ಣುಗಳು, ಮೂಗು ಮತ್ತು ಬಾಯಿ ಹೀಗೆ ಸಹಜ ಆಕಾರ ಕಂಡು ಬರುತ್ತಿದೆ. ಆದರೆ ಮಿತ್ರರೇ ಈ ಚಿತ್ರದಲ್ಲಿ ಒಂದು ರಹಸ್ಯವಾದ ಇಂಗ್ಲಿಷ್ ಶಬ್ದ ಅಡಗಿದೆ. ಆ ಶಬ್ದವು ಯಾವುದು ಎಂಬುದು ನಿಮಗೆ ಚಾಲೆಂಜ್ ಆಗಿದೆ. ನಿಮ್ಮ ಕಣ್ಣುಗಳು ಆ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಶಬ್ದವನ್ನು ಹುಡುಕಿ ತೆಗೆಯಲು ಯಶಸ್ವಿಯಾಗುವುದೇ? ನೋಡೋಣ.
ಈ ಫೋಟೋ ನೋಡಿದಾಗ ಅದರಲ್ಲಿ ಕಪ್ಪು ಬಣ್ಣದಲ್ಲಿ ರೇಖಾಟನೆ ಮಾಡಿದ ಬರೀ ಮುಖದ ಡಿಸೈನ್ ಮಾತ್ರ ಕಂಡುಬರುತ್ತಿದೆ. ಈ ಫೋಟೋದಲ್ಲಿ ವಿಶೇಷವೇನು ಕಂಡುಬರುತ್ತದೆ ಎಂದು ಕೇಳಿದಾಗ ಅದರಲ್ಲೇನು ವಿಶೇಷ ಬರೀ ಮುಖದ ಡಿಸೈನ್ ಮಾತ್ರ ಕಂಡುಬರುತ್ತಿದೆ ಎಂದು ಹೇಳಬಹುದು. ಆದರೆ ಸೂಕ್ಷ್ಮದೃಷ್ಟಿಯನ್ನಿಟ್ಟು ನೋಡಿದಾಗ ಗೊತ್ತಾಗುತ್ತದೆ ಈ ಚಿತ್ರದಲ್ಲಿ ಒಂದು ಇಂಗ್ಲಿಷ್ ಶಬ್ದ ಅಡಗಿದೆ ಎಂದು.
ಹಾಗಾದರೆ ಮಿತ್ರರೇ ಆ ಶಬ್ದವನ್ನು ಶೋಧಿಸಿ ಮತ್ತು ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಯಾವ ಇಂಗ್ಲಿಷ್ ಶಬ್ದ ಕಂಡುಬಂತು ಎಂಬುದನ್ನು ಕಮೆಂಟ್ ಮಾಡಿ ಬರೆಯಿರಿ. ಈ ಮುಖದ ಚಿತ್ರದಲ್ಲಿ ಶಬ್ದವನ್ನು ಶೋಧಿಸುವ ಸಲುವಾಗಿ ನಿಮಗೆ ಈ ಡಿಸೈನ್ ಕಡೆಗೆ ತುಂಬಾ ಗಮನ ಹರಿಸಿ ಏಕಾಗ್ರತೆಯಿಂದ ನೋಡಬೇಕಾಗಿದೆ. ಇದನ್ನು ಶೋಧಿಸುವ ಸಲುವಾಗಿ ನಾವು ಒಂದು ಕ್ಲೂ ಕೊಡುತ್ತೇವೆ. ಚಿತ್ರದ ಕಡೆಗೆ ಗಮನ ಹರಿಸಿ ಏಕಾಗ್ರತೆಯಿಂದ ನೋಡಿ, ಆದರೂ ನಿಮಗೆ ಈ ಚಿತ್ರದಲ್ಲಿ ಏನೂ ಗೋಚರಿಸದೆ ಇದ್ದರೆ ಚಿತ್ರದ ಎಡಭಾಗದಿಂದ ದೃಷ್ಟಿ ಹರಿಸಿ ಬಲಭಾಗಕ್ಕೆ ಮುಂದೆ ಹೋಗಿ ಆಗ ನಿಮಗೆ ಇಂಗ್ಲಿಷ್ ಕರ್ಸಿವ್ ರೈಟಿಂಗ್ ನಲ್ಲಿ ಬರೆದ Liar ಈ ಶಬ್ದ ಸ್ಪಷ್ಟವಾಗಿ ಕಂಡು ಬರುತ್ತದೆ.
ಈ ರೀತಿಯ ಚಿತ್ರಗಳು ಬರೀ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರ ಮನಸ್ಸನ್ನು ಸಹ ತುಂಬಾ ಫ್ರೆಶ್ ಮಾಡುತ್ತವೆ. ಶೋಧಿಸುವ ವೃತ್ತಿಯನ್ನು ಹೊಂದಿದ ವ್ಯಕ್ತಿಗಳಿಗೆ ಈ ರೀತಿಯ ಚಾಲೆಂಜ್ ಒಂದು ಆಟ ಅಥವಾ ಟೈಮ್ ಪಾಸ್ ನೆಪದಲ್ಲಿ ಜೀವನಕ್ಕೆ ಎನರ್ಜಿಯನ್ನು ನೀಡುತ್ತವೆ.