ಚಿತ್ರ Zoom ಮಾಡಿ ನೋಡಬಹುದು; ಈ ಚಿತ್ರದಲ್ಲಡಗಿದೆ ಮನುಷ್ಯನ ಮುಖ! ಹುಡುಕಿ ಎಲ್ಲಿದೆ ಅಂತ ಹೇಳಲು ಸಾಧ್ಯವೇ?
ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯುಷನ್ ನ ಚಿತ್ರಗಳು ತುಂಬಾ ವೈರಲ್ ಆಗುತ್ತವೆ. ಈ ಚಿತ್ರದಲ್ಲಿ ಏನಾದರೂ ವಿಶೇಷತೆ ಅಡಗಿರುತ್ತದೆ, ಹೀಗಾಗಿ ನೆಟ್ಟಿಗರಿಗೆ ತನ್ನ ಕಡೆಗೆ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತವೆ. ಈ ಚಿತ್ರದಲ್ಲಿ ಅಡಗಿರುವ ಗೂಢತೆಯನ್ನು ಹುಡುಕಲು ತುಂಬಾ ಇಂಟರೆಸ್ಟ್ ಬರುತ್ತದೆ. ಇದರಿಂದ ಮೈಂಡ್ ಫ್ರೆಶ್ ಆಗುವುದರ ಜೊತೆಗೆ ಟೈಮ್ ಪಾಸ್ ಸಹ ಆಗುತ್ತದೆ. ಜೊತೆಗೆ ಒಂದು ಚಾಲೆಂಜ್ ಸ್ವೀಕರಿಸಿ ಅದನ್ನು ಕಂಪ್ಲೀಟ್ ಮಾಡಿದ ಖುಷಿ ಪ್ರಯತ್ನಿಸುವ ಯೂಸರ್ ಗಳಿಗೆ ಸಿಗುತ್ತದೆ. ಸದ್ಯ ಇದೇ ರೀತಿಯ ಒಂದು ತುಂಬಾ ತಲೆ ತಿನ್ನುವ ಆಪ್ಟಿಕಲ್ ಇಲ್ಯುಷನ್ ನ ಫೋಟೋ ಇಂಟರ್ನೆಟ್ ನಲ್ಲಿ ಓಡಾಡುತ್ತಿದೆ. ಇದರಲ್ಲಿರುವ ಮನುಷ್ಯ ಮುಖವನ್ನು ಶೋಧಿಸಿ ತೆಗೆಯಬೇಕಾಗಿದೆ.
ಪ್ರಸ್ತುತ ಚಿತ್ರದಲ್ಲಿ ಮೇಲ್ಮೈಗೆ ಒಂದು ನಾಯಿಯ ಮುಖ ಕಂಡು ಬರುತ್ತಿದೆ. ಈ ನಾಯಿಯ ಮುಖದಲ್ಲಿಯೇ ಒಂದು ಮನುಷ್ಯನ ಮುಖವೂ ಅವಿತುಕೊಂಡು ಕುಳಿತಿದೆ. ಅದನ್ನೇ ನಿಮಗೆ ಶೋಧಿಸಬೇಕಾಗಿದೆ.
ಇದನ್ನು ಶೋಧಿಸಲು ಬೇಕು ಒಂದಷ್ಟು ಸಮಯದ ಜೊತೆಗೆ ಮಹತ್ವದ್ದು ಪೇಶನ್ಸ್. ಆಮೇಲೆ ಬೇಕು ಚಿತ್ರದಲ್ಲಿ ಅಡಗಿದ ಸೂಕ್ಷ್ಮತೆಯನ್ನು ಕಂಡು ಹಿಡಿಯುವ ತೀಕ್ಷ್ಣ ದೃಷ್ಟಿ. ಆಗ ಮಾತ್ರ ಸಾಧ್ಯ ಈ ಟಾಸ್ಕ್ ಪೂರ್ಣ ಮಾಡಲು.
ಪ್ರಸ್ತುತ ಚಿತ್ರ 1880 ರಲ್ಲಿಯದ್ದಾಗಿದೆ. ಈ ನಾಯಿಯ ಚಿತ್ರದಲ್ಲಿ ಮನುಷ್ಯನ ಮುಖ ಹುಡುಕಲು ಹೆಚ್ಚು ಕಡಿಮೆ ಎಲ್ಲರಿಗೂ ಅಂದರೆ ಬರೀ 1 ಪ್ರತಿಶತ ಮಾತ್ರ ಯೂಸರ್ ಗಳಿಗೆ ಸಾಧ್ಯವಾಗುತ್ತಿದೆ. ಇನ್ನು ನೀವೆಷ್ಟು ಯಶಸ್ಸು ಕಾಣುತ್ತೀರಿ ನೋಡಿಯೇ ಬಿಡಿ.

ಈ ಚಿತ್ರದಲ್ಲಿ ಮನುಷ್ಯನ ಮುಖ ಹುಡುಕುವುದು ಹಾಗೆ ನೋಡಲಾಗಿ ಸ್ವಲ್ಪ ಕಠಿಣ ಸ್ವಲ್ಪ ಸರಳ ಎನಿಸುತ್ತದೆ. ನೀವು ಇದರಲ್ಲಿ ಮನುಷ್ಯನ ಮುಖ ಹುಡುಕಲು ಯಶಸ್ವಿಯಾದರೆ ನಿಮ್ಮ ಕಣ್ಣುಗಳು ಸಾಕಷ್ಟು ತೀಕ್ಷ್ಣವಾಗಿವೆ ಅಂತಲೇ ಅರ್ಥ. ಒಂದು ವೇಳೆ ನಿಮಗೆ ಯಶಸ್ಸು ಸಿಗದಿದ್ದರೆ ಬೇಸರ ಬೇಡ. ನಾವೇ ನಿಮಗೆ ಹೆಲ್ಪ್ ಮಾಡುತ್ತೇವೆ.
ಚಿತ್ರದಲ್ಲಿರುವ ನಾಯಿಯ ಕಿವಿಯ ಹತ್ತಿರ ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಒಂದು ಮನುಷ್ಯನ ಮುಖ ಕಂಡು ಬರುತ್ತದೆ. ನಾಯಿಯ ಕಿವಿ ಆತನ ತಲೆಯ ಮೇಲಿನ ಹ್ಯಾಟ್ ಆಗಿದೆ. ಮತ್ತು ಆತ ಕೆಳಗಿನ ಬದಿಗೆ ನೋಡುತ್ತಿದ್ದಾನೆ. ಈಗ ನೋಡಿ ಗೊತ್ತಾಗುತ್ತದೆ.
