ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ; ಇನ್ನೂ ಇಳಿಯುವ ಸಾಧ್ಯತೆ! ಯಾಕೆ ಗೊತ್ತಾ? ತಿಳಿದುಕೊಳ್ಳಿ ಇದರ ಹಿಂದಿನ ಕಾರಣ..

ಮುಂಬಯಿ:- ಕೆಲವು ದಿನಗಳ ಹಿಂದೆ ಬಂಗಾರದ ಬೆಲೆ ಆಕಸ್ಮಿಕವಾಗಿ ಗಗನಕ್ಕೆ ಏರಿತ್ತು. ಆದರೆ ಕಳೆದ ಮೂರು ದಿನಗಳಿಂದ ಬಂಗಾರದ ಬೆಲೆಯಲ್ಲಿ ಸತತವಾಗಿ ಕುಸಿಯುತ್ತಿರುವದು ಕಂಡು ಬರುತ್ತಿದೆ. ಅಮೆರಿಕೆಯ ಡಾಲರ್ ನಲ್ಲಿ ಆಗುತ್ತಿರುವ ಮಿಂಚಿನ ಏರಿಕೆಯಿಂದಾಗಿ ಬಂಗಾರದ ಬೆಲೆಯಲ್ಲಿ 2 ಪ್ರತಿಶತ ಕುಸಿತ ಕಂಡುಬಂದಿದೆ.

ಆಗಸ್ಟ್ 7 ರಂದು MCX ನಲ್ಲಿ ಬಂಗಾರದ ಬೆಲೆ ಪ್ರತಿ 10 ಗ್ರಾಂ ಗೆ 56000 ರೂಪಾಯಿಗಳಿಗಿಂತಲೂ ಹೆಚ್ಚಿಗಿತ್ತು. ಹಾಗೂ ಮಾರ್ಕೆಟ್ಟಿನಲ್ಲಿ ಚಿನ್ನದ ಬೆಲೆಯು 56,200 ಪ್ರತಿ 10 ಗ್ರಾಂ ಗೆ ಇತ್ತು. ಈ ರೀತಿಯಾಗಿ ಒಂದು ತಿಂಗಳಿನ ಚಿನ್ನದ ಬೆಲೆಯ ತುಲನೆ ಮಾಡಿದರೆ ದೇಶದ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂಗೆ ಆರು ಸಾವಿರ ರೂಪಾಯಿಗಳವರೆಗೆ ಇಳಿಕೆ ಕಂಡಿದೆ. 1862 ಡಾಲರ್ ಪ್ರತಿ ಔನ್ಸ ಮೇಲೆ ಚಿನ್ನ ತಲುಪಿದೆ.

ಸದ್ಯಕ್ಕೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 51000 ರೂಪಾಯಿಗಳ ಸುತ್ತಮುತ್ತ ಇದೆ. HDFC ಸೆಕ್ಯೂರಿಟೀಸ್ ಪ್ರಕಾರ ಬೆಳ್ಳಿಯ ದರ 1898 ರೂಪಾಯಿಗಳವರೆಗೆ ಪ್ರತಿ ಕಿಲೋ ಗ್ರಾಂ ಗೆ ಕಡಿಮೆಯಾಗಿ ಈಗ ಒಂದು ಕಿಲೋ ಬೆಳ್ಳಿಯ ಬೆಲೆ 59,720 ರೂಪಾಯಿಗಳಷ್ಟಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿರುವುದರಿಂದ ಅದರ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ.

ಜಗತ್ತಿನಲ್ಲಿ ಇನ್ನೂವರೆಗೂ ಹೆಚ್ಚಾಗುತ್ತಿರುವ ಕೋರೋನಾ ಸಂಕ್ರಮಣಕ್ಕೆ ಹೆದರಿ ಹೂಡಿಕೆದಾರರು ಡಾಲರ್ಸ್ ನಲ್ಲಿ ಸುರಕ್ಷಿತವಾದ ಹೂಡಿಕೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಡಾಲರ್ಸ್ ಬೆಲೆಯಲ್ಲಿ ಕಂಡುಬಂದ ಸಾಮರ್ಥ್ಯದಿಂದಾಗಿ ಚಿನ್ನದ ಬೆಲೆಯಲ್ಲಿ ಸತತ ಕುಸಿತ ಕಂಡು ಬರುತ್ತಿದೆ.