ಚಿನ್ನದ ಬೆಲೆ 1 ಲಕ್ಷ ರೂಪಾಯಿ ದಾಟಲಿದೆ! ಯಾವಾಗ..? ತಿಳಿದುಕೊಳ್ಳಿ

ಸರ್ವ ಸಾಮಾನ್ಯ ವ್ಯಕ್ತಿಯು ಹಣ ಹೂಡಿಕೆ ಮಾಡುವುದೆಂದರೆ ಮೊದಲು ಆತ ಚಿನ್ನದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು ಎಂದು ಭಾವಿಸುವನು. 5 ಗ್ರಾಂ 10 ಗ್ರಾಂ ಹೀಗೆ ಸ್ವಲ್ಪ ಸ್ವಲ್ಪವೇ ಚಿನ್ನವನ್ನು ಖರೀದಿಸಿ ತನ್ನ ಹೂಡಿಕೆಯನ್ನು ಹೆಚ್ಚು ಮಾಡುತ್ತಾ ಹೋಗುತ್ತಿರುತ್ತಾನೆ. ಅದರಲ್ಲೂ ಭಾರತೀಯರಿಗೆ ಚಿನ್ನದ ಬೆಲೆ ಹೆಚ್ಚಾಗಿದೆ ಅಥವಾ ಕಡಿಮೆಯಾಗಿದೆ ಎಂಬುವುದನ್ನು ತಿಳಿದುಕೊಳ್ಳುವುದರಲ್ಲಿ ತುಂಬಾ ಅಭಿರುಚಿ ಇರುತ್ತದೆ. ಏಕೆಂದರೆ ಅವರು ಭಾವನಾತ್ಮಕವಾಗಿ ಚಿನ್ನದ ಜೊತೆಗೆ ಹೊಂದಿಕೊಂಡಿರುತ್ತಾರೆ. ಈಗ ಇದೆ ಚಿನ್ನದ ಬೆಲೆ ಭವಿಷ್ಯದಲ್ಲಿ ಸದ್ಯದ ಮಾರ್ಕೆಟ್ ಪ್ರೈಸ್ ಗಿಂತಲೂ ದುಪ್ಪಟ್ಟು ಅಂದರೆ 10 ಗ್ರಾಂ ಬೆಲೆ 1 ಲಕ್ಷ ರೂಪಾಯಿ ಆಗಲಿದೆ. ಇದು ನಾವು ಹೇಳುತ್ತಿಲ್ಲ, ಅಂತರರಾಷ್ಟ್ರೀಯ ಆರ್ಥಿಕ ಮತ್ತು ಹಣಕಾಸು ಧೋರಣೆಗಳ ಬಗ್ಗೆ ಮಾಹಿತಿ ನೀಡುವ ಡಿಯೆಗೋ ಪ್ಯಾರಿಲಾ ಅವರು ಹೇಳುತ್ತಿದ್ದಾರೆ.

ಚಿನ್ನದ ಬೆಲೆ ಭವಿಷ್ಯದಲ್ಲಿ ಗರಿಷ್ಠ ಮಟ್ಟ ತಲುಪಲಿದೆ. ಈ ಬೆಲೆ ಹೆಚ್ಚೆಂದರೆ ದುಪ್ಪಟ್ಟು ಆಗುವ ಸಂಭವವಿದೆ. ಇದಕ್ಕೆ ನಿರ್ದಿಷ್ಟ ಕಾರಣವೆಂದರೆ ಕೋರೋನಾದ ನಂತರ ಹೂಡಿಕೆದಾರರಿಗೆ ಅನೇಕ ದೇಶಗಳಲ್ಲಿ ನೀಡಲಿರುವ ಸಹಾಯ ಮತ್ತು ಪಾಕೇಜಸ್. ಈ ಪ್ಯಾಕೇಜ್ ಗಳಿಂದ ಕೇಂದ್ರೀಯ ಬ್ಯಾಂಕುಗಳಿಗೆ ಭವಿಷ್ಯದಲ್ಲಿ ಬರುವ ಸಮಸ್ಯೆಗಳ ಬಗ್ಗೆ ಅಷ್ಟೊಂದು ಅರಿವು ಇರುವುದಿಲ್ಲ. 250 ಮಿಲಿಯನ್ ಡಾಲರ್ಸ್ ನ ಕ್ವಾಡ್ರಿಗಾ ಇಗ್ನಿಒ ಫಂಡ್ ಹ್ಯಾಂಡಲ್ ಮಾಡುವ ಡಿಯೆಗೋ ಪ್ಯಾರೀಲಾ ಅವರು ಹೇಳುವ ಪ್ರಕಾರ ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಚಿನ್ನ 3 ಸಾವಿರ ದಿಂದ 5 ಸಾವಿರ ಡಾಲರ್ ಪ್ರತಿ ಔನ್ಸ್ ಆಗುವ ಸಾಧ್ಯತೆಗಳಿವೆ. ಇದಕ್ಕೂ ಮೊದಲು 2016 ರಲ್ಲಿಯೇ ಡಿಯೆಗೋ ಪ್ಯಾರಿಲಾ ಚಿನ್ನ ಮುಂದಿನ ಐದು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಹೋಗುತ್ತದೆ ಎಂದು ಭವಿಷ್ಯ ನುಡಿದದ್ದರು.

ಅಂದರೆ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 23 ಸಾವಿರ ಆಗಲಿದೆ.

ಈ ಬಗ್ಗೆ ಡಿಯೆಗೋ ಅವರು ಹೀಗೆ ಹೇಳುತ್ತಾರೆ, ಕಳಪೆ ಆರ್ಥಿಕ ವರ್ಷ ಮತ್ತು ಹಣಕಾಸು ಧೋರಣೆಗಳಿಂದಾಗಿ ದೀರ್ಘಕಾಲದ ನಷ್ಟದ ಬಗ್ಗೆ ಹೆಚ್ಚು ಜಾಗರೂಕತೆ ಇಲ್ಲ. ಕೆಲವೊಂದು ಸಂದರ್ಭಗಳಲ್ಲಿ ಎಲ್ಲವೂ ತಿಳಿದಿದ್ದರೂ ಬಡ್ಡಿದರ ತುಂಬಾ ಕಡಿಮೆ ಇಡಲಾಗುತ್ತದೆ. ಇದರಿಂದ ಆರ್ಥಿಕ ವರ್ಷದಲ್ಲಿ ಬಬಲ್ಸ್ ಗಳು ನಿರ್ಮಾಣವಾಗುತ್ತದೆ. ಇದರಿಂದಾಗಿ ಬ್ಯಾಂಕುಗಳು ಮತ್ತೆ ಪೂರ್ವಸ್ಥಿತಿಗೆ ಬರಲು ತುಂಬಾ ಕಠಿಣವಾಗುತ್ತದೆ. ಆದರೆ ಭವಿಷ್ಯದಲ್ಲಿ ಮಾತ್ರ ಚಿನ್ನದ ಬೆಲೆ ಹೆಚ್ಚಾಗಲು ಅನೇಕ ಕಾರಣಗಳಿವೆ. ಜೊತೆಗೆ ಅವು ತುಂಬಾ ಪೂರಕವಾಗಿವೆ.

2020 ಈ ವರ್ಷದಲ್ಲಿ ಕೋರೋನಾ ಕಾರಣದಿಂದಾಗಿ ಜಗತ್ತು ದೊಡ್ಡ ನಷ್ಟವನ್ನೇ ಅನುಭವಿಸಿತು. ಆಗ ಚಿನ್ನದ ಬೆಲೆ 2,075.47 ಡಾಲರ್ ಪ್ರತಿ ಔನ್ಸ್ ಇಷ್ಟೊಂದು ಗರಿಷ್ಠಮಟ್ಟದಲ್ಲಿ ನೋಡಲು ಸಿಕ್ಕಿತು. ಆದರೆ ಕಳೆದ ಕೆಲವೊಂದು ವಾರಗಳಲ್ಲಿ ಚಿನ್ನ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 1,800 ಡಾಲರ್ ಪ್ರತಿ ಔನ್ಸ್ ಸುತ್ತಮುತ್ತ ನೋಡಲು ಸಿಗುತ್ತಿದೆ. ಅಮೆರಿಕೆಯಲ್ಲಿಯ ಫೆಡರಲ್ ರಿಸರ್ವ್ ಪಾಲೀಸಿಯನ್ನು ಇನ್ನಷ್ಟು ಕಠಿಣ ಮಾಡಲಿರುವ ಸಂಕೇತದ ನಂತರ ಚಿನ್ನದ ಬೆಲೆಯಲ್ಲಿ ಇಳಿಮುಖ ಕಂಡುಬಂತು. ಡಿಯೋಗೋ ಅವರು ಹೇಳುವ ಪ್ರಕಾರ ಈಗ ಕೇಂದ್ರೀಯ ಬ್ಯಾಂಕುಗಳು ಸದ್ಯದ ಪರಿಸ್ಥಿತಿಯ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿವೆ ಎನ್ನುತ್ತಾರೆ.