‘ಚಿನ್ನ’ ಒರಿಜಿನಲ್ ಅಥವಾ ಡ್ಯೂಪ್ಲಿಕೇಟ್ ಅಂತ ಹೇಗೆ ತಿಳಿದುಕೊಳ್ಳುವದು ? ಕೆಲವು ಪದ್ಧತಿಗಳು ಇಲ್ಲಿವೆ ನೋಡಿ!

ಭಾರತದಲ್ಲಿ, ಚಿನ್ನವನ್ನು ವಿವಿಧ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಲ್ಲದೆ ಇದನ್ನು ಹೆಚ್ಚಾಗಿ ಆಭರಣವಾಗಿ ಬಳಸಲಾಗುತ್ತದೆ. ಇಲ್ಲಿನ ಬಹುತೇಕರು ಮದುವೆಯಂತಹ ಶುಭ ಸಮಾರಂಭಗಳಲ್ಲಿ ಚಿನ್ನಾಭರಣ ಖರೀದಿಸುತ್ತಾರೆ.

ಅಲ್ಲದೇ ಇತರ ಸಂದರ್ಭಗಳಲ್ಲಿ ಅನೇಕರು ಬಹಳಷ್ಟು ಚಿನ್ನವನ್ನು ಅಲಂಕಾರಕ್ಕಾಗಿ ಬಳಸಲಾಗುತ್ತದೆ. ನೀವು ಸಹ ಚಿನ್ನವನ್ನು ಖರೀದಿಸುತ್ತಿದ್ದರೆ, ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಇಂದಿನ ಮಾರುಕಟ್ಟೆಯಲ್ಲಿ ಅಸಲಿ ಚಿನ್ನ ಎಂಬ ಹೆಸರಿನಲ್ಲಿ ನಕಲಿ ಚಿನ್ನ ಮಾರಾಟವಾಗುತ್ತಿದೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಪರಿಣಾಮವಾಗಿ, ಅನೇಕರು ಬಹಳ ತೊಂ#ದರೆಗೆ ಸಿಲುಕಿ ಕೊಳ್ಳುತ್ತಿದ್ದಾರೆ. ಬನ್ನಿ, ಇಂದು ನಾವು ನಿಮಗೆ ಅಸಲಿ ಮತ್ತು ನಕಲಿ ಚಿನ್ನವನ್ನು ಗುರುತಿಸುವ ಕೆಲವು ವಿಧಾನಗಳ ಬಗ್ಗೆ ಹೇಳಲಿದ್ದೇವೆ. ಆ ವಿಧಾನಗಳು ಯಾವವು ಎಂಬುದು ತಿಳಿದುಕೊಳ್ಳಿ.

ನಿಜವಾದ ಚಿನ್ನವನ್ನು ಗುರುತಿಸಲು ನೀವು ಹಾಲ್‌ಮಾರ್ಕ್‌ಗಳನ್ನು ನೋಡಬೇಕು.
ಹಾಲ್‌ಮಾರ್ಕ್ ಎಂದರೆ ಚಿನ್ನದ ಶುದ್ಧತೆ. ನಾವು ಪಡೆದುಕೊಳ್ಳುವ ಚಿನ್ನದ ಮೇಲೆ ಹಾಲ್ ಮಾರ್ಕ್ ಇದೆಯೋ ಅಥವಾ ಇಲ್ಲವೋ ಎಂಬುದು ಮೊದಲು ನೋಡಿಯೇ ತಗೆದುಕೊಳ್ಳಿ 24 ಕ್ಯಾರೆಟ್ ಗೋಲ್ಡ್ ಚಿನ್ನವನ್ನು ಖರೀದಿ ಮಾಡುವಾಗ ಹಾಲ್ ಮಾರ್ಕ್ ಅವಶ್ಯಕವಾಗಿ ತಪಾಸಣೆ ಮಾಡಿ.

ಚುಂಬಕದ ಸಹಾಯದಿಂದ ಸಹ ನಿಜವಾದ ಮತ್ತು ನಕಲಿ ಚಿನ್ನದ ನಡುವಿನ ವ್ಯತ್ಯಾಸವನ್ನು ನೀವು ಕಂಡುಹಿಡಿಯಬಹುದು. ಚಿನ್ನವು ಚುಂಬಕೀಯ ಗುಣಧರ್ಮ ಹೊಂದಿರುವದಿಲ್ಲ ಹೀಗಾಗಿ ಅಸಲಿ ಚಿನ್ನದ ಸಮೀಪ ಚುಂಬಕ ತಂದರೆ ಅದು ಚುಂಬಕಕ್ಕೆ ಅಂಟಿಕೊಳ್ಳುವದಿಲ್ಲ ಇದರ ತದ್ವಿರುದ್ಧವಾಗಿ ನಿಮ್ಮ ಬಳಿಯಲ್ಲಿದ್ದ ಚಿನ್ನದ ಹತ್ತಿರ ಚುಂಬಕ ತಂದಾಗ ಅದು ಆಕರ್ಷಿತ ವಾದರೆ ಅದು ನಕಲಿ ಚಿನ್ನವಿದೆ ಎಂದು ತಿಳಿದುಕೊಳ್ಳಿ.

ನಾವು ನೀರಿನಿಂದಲೂ ಸಹ ಚಿನ್ನದ ಗುಣವತ್ತತೆ ಶೋಧಿಸಬಹುದು. ಇದರ ಸಲುವಾಗಿ ನಿಮ್ಮ ಬಳಿಯಲ್ಲಿದ್ದ ಬಂಗಾರವನ್ನು ನೀರಲ್ಲಿ ಎಸೆಯಿರಿ ಒಂದು ವೇಳೆ ಚಿನ್ನ ನೀರಿನ ಮೇಲೆ ತೇಲುತ್ತ ಬಂದರೆ ಅದು ನಕಲಿ, ನೀರಲ್ಲಿ ಮುಳುಗಿದರೆ ಅದು ಅಸಲಿ ಎಂದು ತಿಳಿದುಕೊಳ್ಳಿ.

ಆಸಿ#ಡ್ ಮಾಧ್ಯಮದಿಂದಲೂ ಸಹ ಅಸಲಿ ಚಿನ್ನವನ್ನು ಗುರುತಿಸಬಹುದು. ಇದರ ಸಲುವಾಗಿ ನಿಮಗೆ ನೈ#ಟ್ರಿಕ್ ಆ#ಸಿಡ್ ಉಪಯೋಗ ಮಾಡಬೇಕಾಗುತ್ತದೆ. ಈ ಆಸಿಡ್ ಚಿನ್ನದ ಕೆಲವು ಭಾಗಗಳ ಮೇಲೆ ಸುರಿಯಬೇಕಾಗುವದು. ಆ ಅಭರಣದ ಮೇಲೆ ಆಸಿ#ಡ್ ಹಾಕಿದಾಗ ಯಾವುದೇ ಪ್ರಕಾರದ ಪರಿಣಾಮ ಕಂಡು ಬಂದರೆ ಅದು ನಕಲಿ ಚಿನ್ನವಾಗಿರುತ್ತದೆ.

ವ್ಹಿನೆಗರ್ ಸಹಾಯದಿಂದ ಸಹ ಬಂಗಾರದ ಗುಣಮಟ್ಟ ಪರಿಶೀಲಿಸಬಹುದು. ಇದಕ್ಕಾಗಿ ವ್ಹಿನೆಗರ್ ನ ಕೆಲವು ಹನಿಗಳು ತಗೆದುಕೊಂಡು ಚಿನ್ನದ ಮೇಲೆ ಹಾಕಿರಿ. ವ್ಹಿನೆಗರ್ ಸಿಂಪಡಿಸಿದ ಜಾಗದಲ್ಲಿ ಬಣ್ಣ ಬದಲಾವಣೆಯಾದರೆ ಈ ಚಿನ್ನ ನಕಲಿ ಯಾಗಿದೆ ಎಂದರ್ಥ!