ಚಿನ್ನ ಖರೀದಿ ಮಾಡುವವರಿಗೆ ಇದೇ ಸುವರ್ಣಾವಕಾಶ: ಎಂಟು ತಿಂಗಳಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ
ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಶುಕ್ರವಾರದಂದು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ 46,000 ರೂಪಾಯಿಗಳಿಗಿಂತ ಕಡಿಮೆಯಾಗಿದೆ. ಅಮೆರಿಕಾದಲ್ಲಿ ಬಾಂಡ್ ಈಲ್ಡಿಂಗ್ ಹೆಚ್ಚುವರಿಯಾದ ಕಾರಣದಿಂದಾಗಿ ವಿಶ್ವದಾದ್ಯಂತ ಚಿನ್ನದ ಮಾರಾಟವು ಹೆಚ್ಚಾಗಿದೆ ಎನ್ನಲಾಗಿದ್ದು ಇದೇ ಚಿನ್ನದ ಬೆಲೆಯ ಕುಸಿತಕ್ಕೆ ಕೂಡಾ ಕಾರಣವಾಗಿದೆ ಎನ್ನಲಾಗಿದೆ. ಅಂಕಿ ಅಂಶಗಳ ಪ್ರಕಾರ ಶುಕ್ರವಾರ ಚಿನ್ನದ ಸ್ಪಾಟ್ ಬೆಲೆ 45,900 ರೂಪಾಯಿಗಿಂತ ಕೆಳಗೆ ಬಂದಿತ್ತು. ಏಪ್ರಿಲ್ ಡಿಲೆವರಿ ಚಿನ್ನದ ಬೆಲೆ 46,126 ರೂಪಾಯಿಗಳಾಗಿತ್ತು. ಯುಎಸ್ ನಲ್ಲಿ ಚಿಕಾಗೋ ಮಾರ್ಕಂಟೈಲ್ ಎಕ್ಸ್ಚೇಂಜ್ ನಲ್ಲಿ ಚಿನ್ನದ ಪ್ರತಿ ಔನ್ಸ್ ನ ಬೆಲೆ 1784 ಡಾಲರ್ ಗಳಲ್ಲಿ ಟ್ರೆಂಡ್ ನಲ್ಲಿತ್ತು ಆದರೆ ಜೂನ್ 29 ರ ನಂತರ ಇದರ ರೂಪ ಬದಲಾವಣೆ ಆಯಿತು. ಭಾರತದಲ್ಲಿ ಕಳೆದ ವರ್ಷ ಆಗಸ್ಟ್ ಏಳರಿಂದ ಚಿನ್ನದ ಬೆಲೆ ಆಲ್ ಟೈಂ ದಾಖಲೆ ಮಟ್ಟದಲ್ಲಿ ಅಂದರೆ 56,018 ರೂಪಾಯಿಗಳಿಗೆ ಏರಿಕೆಯಾಗಿತ್ತು. ಆದರೆ ಅದರ ನಂತರ ಇದರಲ್ಲಿ 10 ಸಾವಿರ ರೂಪಾಯಿಗಳ ಕುಸಿತ ಕಂಡು ಬಂದಿತ್ತು. ಶುಕ್ರವಾರ ಇದು 45,976 ರೂಪಾಯಿಗಳಿಗೆ ಬಂದು ಟ್ರೆಂಡ್ ಮಾಡಿತ್ತು.
ಈ ವಾರದುದ್ದಕ್ಕೂ ಕೂಡಾ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಆರಂಭವಾದ ಈ ಕುಸಿತವು ವಾರದ ಕೊನೆಯ ವಹಿವಾಟು ದಿನವಾದ ಶುಕ್ರವಾರದವರೆಗೂ ಮುಂದುವರೆದಿದೆ. ಶುಕ್ರವಾರ ಚಿನ್ನದ ಬೆಲೆಯಲ್ಲಿ 239 ರೂ.ಗಳ ಇಳಿಕೆ ಕಂಡು ಬಂದ ಕಾರಣ 10 ಗ್ರಾಂ ಚಿನ್ನಕ್ಕೆ 45,568 ರೂ. ನಲ್ಲಿ ಅಂತ್ಯವಾಯಿತು. ಎಚ್ಡಿಎಫ್ಸಿ ಸೆಕ್ಯುರಿಟೀಸ್ ಪ್ರಕಾರ, ಚಿನ್ನವು 10 ಗ್ರಾಂಗೆ ಗುರುವಾರ 45,807 ರೂ ಗಳಿತ್ತು. ವಿಶ್ವದಾದ್ಯಂತ ಚಿನ್ನದ ವ್ಯಾಪಾರ ವಹಿವಾಟು ನಡೆಯುತ್ತದೆ. ಭಾರತದಲ್ಲಿ ಚಿನ್ನದ ಬೆಲೆಯ ಮೇಲೆ ಅದರ ಬೇಡಿಕೆ ಮಾತ್ರವೇ ಅಲ್ಲದೇ ಅಂತರರಾಷ್ಟ್ರೀಯ ಬೆಲೆಗಳು ಹಾಗೂ ರೂಪಾಯಿ-ಡಾಲರ್ ವಿನಿಮಯ ಬೆಲೆ ಕೂಡಾ ಪ್ರಭಾವ ಬೀರುತ್ತದೆ. ಕಳೆದ ಡಾಲರ್ ಗೆ ಹೋಲಿಸಿದಾಗ ಕಳೆದ ಕೆಲವು ತಿಂಗಳುಗಳಿಂದಲೂ ಅದು 73 ರೂಪಾಯಿಗಳಾಗಿತ್ತು. ಆದರೆ ಗುರುವಾರ ಅದು 72.65 ಕ್ಕೆ ಮುಗಿದಿತ್ತು.

ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸ್ ವಿ.ಪಿ. ನವನೀತ್ ದಮಾನಿ ಅವರು ಹೇಳುವಂತೆ ಯುಎಸ್ ನ ಖಜಾನೆ ಈಲ್ಡ್ ನಲ್ಲಿ ಇತ್ತೀಚಿಗೆ ಕಂಡು ಬಂದಿರುವ ಏರಿಕೆ ಚಿನ್ನದ ಬೆಲೆಯ ಕುಸಿತಕ್ಕೆ ಕಾರಣವಾಗಿದ್ದು, ಯುಎಸ್ ನ ಟ್ರೆಷರಿ ಈಲ್ಡ್ ದಾಖಲೆ ಮಟ್ಟಕ್ಕೆ ಎನ್ನುವ ಹಾಗೆ ಒಂದು ವರ್ಷದಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ ಎಂದಿದ್ದಾರೆ. ಕಾಮೆಕ್ಸ್ ನಲ್ಲಿ ಚಿನ್ನದ ಬೆಲೆ 1755 ನಿಂದ 1782 ಡಾಲರ್ ಪ್ರತಿ ಔನ್ಸ್ ಮತ್ತು ಭಾರತದಲ್ಲಿ 45700 ನಿಂದ 46300 ರ ನಡುವೆ ಇದೆ ಎನ್ನಬಹುದಾಗಿದೆ. ವಿಶ್ವದ ಟಾಪ್ ಟೆನ್ ಶ್ರೀಮಂತರಲ್ಲಿ ಒಬ್ಬರಾಗಿರುವ ವಾರೆನ್ ಬಫೆಟ್ ಅವರ ನೇತೃತ್ವದ ಕಂಪನಿ ಬರ್ಕ್ಷೈರ್ ಹಾಥ್ವೇ ಕೆನಡಾದ ಗಣಿಗಾರಿಕೆ ಕಂಪನಿ ಬ್ಯಾ ರಿಕ್ ಗೋಲ್ಡ್ ಕಾರ್ಪೋರೇಷನ್ ಗೆ 31.7 ಕೋಟಿ ರೂಪಾಯಿಗಳಿಗೆ
ತನ್ನ ಶೇರ್ ಗಳನ್ನು ಮಾರಾಟ ಮಾಡಿದೆ. ಈ ಷೇರುಗಳ ಮಾರಾಟ ಎಷ್ಟು ಆಶ್ಚರ್ಯಕರ ಎನಿಸಿತ್ತೋ ಅವುಗಳ ಖರೀದಿ ಕೂಡಾ ಅಷ್ಟೇ ಕುತೂಹಲಕಾರಿಯಾಗಿತ್ತು.
ವಾರನ್ ಬಫೆ ಅವರಿಗೆ ಚಿನ್ನದ ಜೊತೆಗಿದ್ದ ಕಿರಿಕಿರಿ ಎಲ್ಲರಿಗೂ ತಿಳಿದಿತ್ತು. ಅಲ್ಲದೇ ಅವರು ಚಿನ್ನದ ಮೇಲೆ ಬಂಡವಾಳ ಹೂಡುವವರನ್ನು ಗೇ ಲಿ ಮಾಡುತ್ತಿದ್ದರು. ಅವರ ಪ್ರಕಾರ ಚಿನ್ನ ಒಂದು ಅನುತ್ಪಾದಕ ಸಂಪತ್ತಾಗಿತ್ತು. ಆದ್ದರಿಂದಲೇ ಕಳೆದ ವರ್ಷ ಆಗಸ್ಟ್ ಮಲ್ಲಿ ವಾರನ್ ಬಫೆಟ್ ಚಿನ್ನದ ಗಣಿಗಾರಿಕೆ ಮಾಡುವ ಕಂಪನಿಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಘೋಷಿಸಿದಾಗ ಅದು ಮುಖ್ಯಾಂಶಗಳಲ್ಲಿ ಸುದ್ದಿಯಾಗಿತ್ತು. Ladder7 Financial Advisories ನ ಸಂಸ್ಥಾಪಕರಾದ ಪ್ರಿನ್ಸಿಪಲ್ ಸುರೇಶ್ ಸದ್ಗೋಪನ್ ಅವರು ವಾರೆನ್ ಬಫೆಟ್ ಒಬ್ಬ
ದೊಡ್ಡ ಮನುಷ್ಯನಾಗಿದ್ದು ಅವರ ಬಂಡವಾಳ ಎಲ್ಲಿ ಹೂಡಿಕೆ ಮಾಡುವುರೆಂಬುದು ನಮಗೆ ಬೇಕಿಲ್ಲ. ಅವರು ಚಿನ್ನದ ಬಗ್ಗೆ ಏನಾದರೂ ಹೇಳಲಿ, ಆದರೆ ಈಗ ಆರ್ಥಿಕ ಚೇತರಿಕೆ ನಡೆಯುತ್ತಿರುವ ಕಾಲವಾಗಿದ್ದು, ಚಿನ್ನದ ಪಾತ್ರ ಕಡಿಮೆಯಾಗಿರಬಹುದು. ಆದರೆ ಚಿನ್ನ ಅ ಪಾ ಯವನ್ನು ಕಡಿಮೆ ಮಾಡಲು ನಮ್ಮೊಂದಿಗಿರಬೇಕು ಎಂದು ನಾನು ನಂಬುವುದಾಗಿ ಹೇಳಿದ್ದಾರೆ.

ಅವರು ಚಿನ್ನವನ್ನು ಇಟ್ಟುಕೊಳ್ಳಲು ಉತ್ತಮ ಮಾರ್ಗ ಚಿನ್ನದ ಬಾಂಡ್ ಗಳು ಎಂದಿದ್ದು, ಇದು ಕಾಗದ ರೂಪದ ಸಂಪತ್ತಾಗಿದ್ದು ತನ್ನದೇ ಆದ ತೆರಿಗೆ ಪ್ರಯೋಜನಗಳನ್ನು ಹೊಂದಿದ್ದು ಪ್ರತಿ ವರ್ಷ 2.5% ಲಾಭವನ್ನು ನೀಡುತ್ತದೆ ಎಂದಿದ್ದಾರೆ. ಇನ್ನು ಕಳೆದ ವರ್ಷ ಆಗಸ್ಟ್ನಿಂದ ಚಿನ್ನದ ಬೆಲೆ ಶೇ 18 ರಷ್ಟು ಕುಸಿದಿದೆ. ಮುಂಬರುವ ದಿನಗಳಲ್ಲಿಯೂ ಚಿನ್ನದ ಬೆಲೆ ಹೆಚ್ಚಾಗುವ ನಿರೀಕ್ಷೆಯಿಲ್ಲ ಎನ್ನಲಾಗಿದ್ದು, ಚಿನ್ನವು ಅದರ ಪ್ರಸ್ತುತ ಬೆಲೆಯಲ್ಲಿ ಉಳಿಯುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಅಂದರೆ ಅವರ ಪ್ರಕಾರ ಚಿನ್ನ 10 ಗ್ರಾಂ ಗೆ ಸುಮಾರು 46000 ರೂ. ಇರಲಿದೆ ಎನ್ನಲಾಗಿದೆ. ಆದರೆ ಜನರಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಜನರು ತಮ್ಮ ಹೂಡಿಕೆಯ ಆಯ್ಕೆಯಾಗಿ ಚಿನ್ನದ ಕಡೆ ಆಸಕ್ತಿ ತೋರಿಸಿದ್ದಾರೆ.
ಚಿನ್ನದ ಇಟಿಎಫ್ಗಳು ಕಳೆದ ಡಿಸೆಂಬರ್ನಲ್ಲಿ 431 ಕೋಟಿ ರೂ. ಹೂಡಿಕೆ ಮಾಡಿದ್ದು, ಇದು ಈ ವರ್ಷ ಜನವರಿಯಲ್ಲಿ 624.87 ಕೋಟಿ ರೂ.ಗೆ ಹೆಚ್ಚಾಗಿದೆ. 2019 ರ ಜನವರಿಯಿಂದ 2021 ರ ಜನವರಿ ವರೆಗೆ ಇದು 48159.2 ಕೋಟಿ ರೂಗಳಾಗಿದೆ.