ಚಿರು’ ಅವರ ತಾಯಿ ಮರಣೋತ್ತರ ಪರೀಕ್ಷೆ ಮಾಡುವ ಡಾಕ್ಟರ್ ಹತ್ತಿರ ‘ಈ’ ಮನವಿ ಮಾಡಿಕೊಂಡಿದ್ದರು, ಆದ್ದರಿಂದಲೇ ಅವರ ಮರೋಣೋತ್ತರ ಪರೀಕ್ಷೆ ಮಾಡಲಿಲ್ಲ!
ಚಂದನವನದ ಸೂಪರ್ ಹೀರೊ ಚಿರಂಜೀವಿ ಸರ್ಜಾ ಅವರು ತಮ್ಮ ಕೊನೆಯ ಉಸಿರು ಎಳೆದರು. ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ತಮ್ಮ ಜೀವನದ ಪಯಣ ಮುಗಿಸಿದರು. ಇದರಿಂದ ಚಂದನವನದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಚಿರು ಅವರ ಕುಟುಂಬದ ಮೇಲೆ ದುಃಖದ ಆಕಾಶವೇ ಕಡಿದು ಬಿದ್ದಂತಾಗಿದೆ. ಕೆಲವು ದಿವಸಗಳ ಹಿಂದೆ ಅವರು ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಸ್ಯೆ ಹೆಚ್ಚಾದಾಗ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರ ನಿಧನವಾಯಿತು.

ಚಿರು ಅವರ ಮರಣೋತ್ತರ ಪರೀಕ್ಷೆ ಮಾಡುವ ಸಲುವಾಗಿ ಡಾಕ್ಟರ್ ರು ಚಿರು ಅವರ ಕುಟುಂಬಕ್ಕೆ ತಿಳಿಸಿದರು. ಆಗ ಚಿರು ಅವರ ತಾಯಿ ಡಾಕ್ಟರ್ ಅವರನ್ನು ಎರಡು ಮನವಿ ಮಾಡಿಕೊಂಡರು ಒಂದನೆಯದು ‘ಚಿರು ಎದೆಯ ಮೇಲಿನ ತ್ರಿಶೂಲ ಹಾಗೂ ಎರಡನೆಯದು ಅವನ ಬಲಗೈ ಮೇಲಿರುವ ಭಾರತದ ಧ್ವಜ ಟ್ಯಾಟೂ ಗೆ ಯಾವುದೇ ಧಕ್ಕೆ ಮಾಡಬೇಡಿ’ ಎಂದು ವಿನಂತಿಸಿಕೊಂಡಿದ್ದರು. ಚಿರು ಅವರಿಗೆ ಭಾರತದ ಧ್ವಜ ವೆಂದರೆ ತುಂಬಾ ಪ್ರೀತಿ. ಆದ್ದರಿಂದಲೇ ಅವರು ತಮ್ಮ ಬಲಗೈ ಮೇಲೆ ಭಾರತದ ಧ್ವಜದ ಟ್ಯಾಟೂ ಹಾಕಿ ಕೊಂಡಿದ್ದರು. ಅದು ಯಾವುದೇ ಕಾರಣಕ್ಕೂ ಹೋಗಬಾರದು ಎಂಬ ಉದ್ದೇಶದಿಂದ ಚಿರು ಅವರ ತಾಯಿ ವೈದ್ಯರಲ್ಲಿ ವಿನಂತಿಸಿಕೊಂಡಿದ್ದರು. ಇದನ್ನು ಕೇಳಿ ಅಲ್ಲಿದ್ದ ವೈದ್ಯರು ಸಹ ಕಣ್ಣೀರಿಟ್ಟರು. ಆದರೆ ಅವರ ಶವಪರೀಕ್ಷೆ ಮಾಡುವದು ಕುಟುಂಬದಲ್ಲಿರುವ ಯಾರಿಗೂ ಇಷ್ಟವೇ ಇರಲಿಲ್ಲ. ಆಗ ಕನ್ನಡ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅವರು ಬಂದರು. ಅವರು ಅಲ್ಲಿದ್ದ ವೈದ್ಯರನ್ನು ಚಿರು ಅವರ ಶವಪರೀಕ್ಷೆ ಮಾಡಬಾರದು ಎಂದು ಹೇಳಿದರು. ಚಿರು ಅವರ ತಾಯಿಯ ಮನವಿ ಹಾಗೂ ಸುಮಲತಾ ಅವರ ಹೇಳಿಕೆಯ ಮೇರೆಗೆ ಚಿರು ಅವರ ಮರಣೋತ್ತರ ಪರೀಕ್ಷೆ ಮಾಡಲಿಲ್ಲ.