ಚೇರ್ ಮೇಲೆ ಕುಳಿತು ಮಾತಾಡುತ್ತಲೇ ಜಿಮ್ ಟ್ರೈನರ್ ಗೆ ಹಾರ್ಟ್ ಅಟ್ಯಾಕ್! ಕ್ಷಣದಲ್ಲಿ ಹಾರಿ ಹೋಯಿತು ಪ್ರಾಣ ಪಕ್ಷಿ.
ಚೇರ್ ಮೇಲೆ ಕುಳಿತಿರುವಾಗಲೇ ಜಿಮ್ ಟ್ರೈನರ್ ಒಬ್ಬನಿಗೆ ಹಾರ್ಟ್ ಅಟ್ಯಾಕ್ ಬಂದಿದೆ. ಕೇವಲ ಕೆಲವೇ ಕ್ಷಣಗಳಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ಪ್ರಸ್ತುತ ಜಿಮ್ ಟ್ರೈನರ್ ವ್ಯಕ್ತಿಯ ಹೆಸರು ಆದಿಲ್ ಎಂದು ತಿಳಿದುಬಂದಿದ್ದು ಆತ 35 ವರ್ಷದವನಾಗಿದ್ದನು. ಆದಿಲ್ ನ ಆಕಸ್ಮಿಕ ನಿಧನದಿಂದಾಗಿ ಆತನ ಕುಟುಂಬದವರಿಗೆ ದೊಡ್ಡ ಶಾಕ್ ತಗುಲಿದೆ.
ಈ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಕಳೆದ ರವಿವಾರ ಸಾಯಂಕಾಲ 7 ಗಂಟೆಯ ಸುಮಾರಿಗೆ ಘಟಿಸಿದೆ. ಆದಿಲ್ ತನ್ನ ಫಿಟ್ನೆಸ್ ಬಗ್ಗೆ ತುಂಬಾ ಜಾಗೃತೆಯನ್ನು ವಹಿಸುತ್ತಿದ್ದ ಎಂದು ಆತನ ಮಿತ್ರರು ಹೇಳಿಕೊಂಡು ರೋದಿಸುತ್ತಿದ್ದಾರೆ. ಆದಿಲ್ ನ ಮೃತ್ಯು ಹಾರ್ಟ್ ಅಟ್ಯಾಕ್ ನಿಂದ ಆಗಬಹುದೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ಹೀಗಾಗಿ ಇದನ್ನು ಎಲ್ಲರಿಗೂ ನಂಬುವುದು ತುಂಬಾ ಕಷ್ಟವಾಗಿದೆ.
ಇತ್ತೀಚೆಗೆ ಆದಿಲ್ ಪ್ರಾಪರ್ಟಿ ಬಿಸಿನೆಸ್ ಶುರು ಮಾಡಿದ್ದ. ಗಾಜಿಯಾಬಾದ್ ನ ಶಾಲಿಮಾರ್ ಗಾರ್ಡನ್ ನಲ್ಲಿ ಆತನ ಸ್ವಂತದ ಜಿಮ್ ಇತ್ತು. ಆತನಿಗೆ ಕಳೆದ ಎರಡು ಮೂರು ದಿವಸಗಳಿಂದ ಸೌಮ್ಯ ಜ್ವರದ ಲಕ್ಷಣವಿತ್ತು. ಇಷ್ಟಾದರೂ ತನ್ನ ಕೆಲಸಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದನು. ಆದಿಲ್ ಗೆ ನಾಲ್ಕು ಮಕ್ಕಳಿದ್ದು ತಂದೆಯ ಆಸರೆ ಇಲ್ಲದಂತಾಗಿದೆ.
ನೋಡಿ ಈ ವಿಡಿಯೋ…
ಯುವಕರಲ್ಲಿ ಹೃದಯ ಸ್ತಂಭನದ ಪ್ರಮಾಣ ತುಂಬಾನೇ ಹೆಚ್ಚುತ್ತಿದೆ ಎಂದು ಯಶೋದ ಹಾಸ್ಪಿಟಲ್ ನ ಹೃದಯ ರೋಗ ತಜ್ಞರಾದ ಡಾಕ್ಟರ್ ಧೀರೇಂದ್ರ ಸಿಂಘಾನಿಯಾ ಅವರು ಹೇಳುತ್ತಾರೆ. ನಮ್ಮ ಜೀವನ ಶೈಲಿಯಲ್ಲಿ ಆದ ಬದಲಾವಣೆ, ಊಟಕ್ಕೆ ಸಂಬಂಧಿಸಿದ ತಪ್ಪು ಪದ್ಧತಿಗಳು, ಚಟಗಳು, ಅನಿದ್ರೆ ಹಾಗೂ ಒತ್ತಡದ ಜೀವನ ಈ ಎಲ್ಲ ಕಾರಣಗಳಿಂದ ಹೃದಯದ ಮೇಲೆ ಹೆಚ್ಚು ದುಷ್ಪರಿಣಾಮವಾಗುತ್ತಿದೆ. ಇದರಿಂದಾಗಿ ಮೃತ್ಯುವಿನ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ.