ಚೋಟುದ್ದ ಹುಡುಗನ ಟ್ಯಾಲೆಂಟ್ ನೋಡಿ; ಆತ ಮಾಡಿದ ಜಾದೂ ಸ್ಕಿಲ್ ನಿಮಗೇನಾದರೂ ಗೊತ್ತಾದ್ರೆ ಸ್ವಲ್ಪ ನಮಗೂ ಹೇಳಿ..!

ಟ್ಯಾಲೆಂಟ್ ಯಾರ ಸ್ವತ್ತೂ ಅಲ್ಲ. ಸದ್ಯದ ಸಮಯದಲ್ಲಿ ಮನುಷ್ಯನ ಹತ್ತಿರ ಏನಾದರೂ ಟ್ಯಾಲೆಂಟ್ ಅಥವಾ ಸ್ಕಿಲ್ ಇದ್ದರೆ ಸೋಶಿಯಲ್ ಮೀಡಿಯಾ ಮುಖಾಂತರ ತಾನಾಗಿಯೇ ಜಗಜ್ಜಾಹೀರಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಾಗ ಒಂದೇ ರಾತ್ರಿಯಲ್ಲಿ ಎಲ್ಲರಿಗೂ ಪರಿಚಯವಾಗಿ ಬಿಡುತ್ತೀರಿ. ಈಗ ಶಾಲೆಯಲ್ಲಿಯ ಪುಟ್ಟ ಬಾಲಕ ಒಂದು ಜಾದೂ ಮಾಡಿ ತೋರಿಸಿದ್ದಾನೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇದೇ ಸಂಚಲನ ಮೂಡಿಸಿದೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಕೆಲವು ಮಕ್ಕಳು ಕ್ಲಾಸಿನಲ್ಲಿ ಒಟ್ಟುಗೂಡಿದ್ದಾರೆ. ಮಧ್ಯದಲ್ಲಿ ಒಬ್ಬ ಹುಡುಗ ತುಂಬಾ ಮುಗ್ಧನಾಗಿ ನಿಂತಿದ್ದಾನೆ. ಉಳಿದ ವಿದ್ಯಾರ್ಥಿಗಳು ಆತ ಏನು ಮಾಡುತ್ತಾನೆಂದು ನೋಡಲು ಅಚ್ಚರಿಯಿಂದ ಕಾಯುತ್ತಿದ್ದಾರೆ.

ಹುಡುಗ ತನ್ನ ಎರಡೂ ಕೈಗಳಲ್ಲಿ ಒಂದೊಂದು ಹುಣಸೆ ಬೀಜಗಳನ್ನು ತೆಗೆದುಕೊಂಡು ತೋರಿಸುತ್ತಾನೆ. ನಂತರ ಆ ಎರಡು ಬೀಜಗಳನ್ನು ಒಂದೊಂದು ಕೈಯಲ್ಲಿ ಹಿಡಿದು ತನ್ನೆರಡು ಕೈಗಳನ್ನು ಬೋರಲಾಗಿ ಇಟ್ಟು ತೆಗೆಯಲಾಗಿ ಆ ಎರಡು ಹುಣಸೆ ಬೀಜಗಳು ಬಲಗೈಯ ಒಂದೇ ಕೈಯಲ್ಲಿ ಬಂದಿರುತ್ತವೆ, ಮತ್ತು ಎಡಗೈಯಲ್ಲಿ ಹುಣಸೆಯ ಬೀಜವೇ ಇರುವದಿಲ್ಲ. ಇದನ್ನು ನೋಡಿದ ಗುರುಗಳಿಗೂ ನಂಬಲು ಕಷ್ಟವಾಗುತ್ತದೆ. ಅದಕ್ಕಾಗಿ ಗುರುಗಳು ವಿದ್ಯಾರ್ಥಿಗೆ ಈ ಜಾದೂ ಇನ್ನೊಮ್ಮೆ ಮಾಡಿ ತೋರಿಸಲು ಆದೇಶಿಸುತ್ತಾರೆ. ಹುಡುಗ ಮತ್ತೊಮ್ಮೆಯೂ ಹಾಗೆಯೇ ಮಾಡಿ ತೋರಿಸುತ್ತಾನೆ.

ವಿಡಿಯೋ ನೋಡಿ

 

View this post on Instagram

 

A post shared by Sahil Saifi (@sahil.aazam)

ಪುಟ್ಟ ಬಾಲಕ ತುಂಬಾ ಸುಂದರವಾಗಿ ಮಾಡಿದ ಜಾದೂವಿನ ಈ ವಿಡಿಯೋ ಇನ್ಸ್ಟಾಗ್ರಾಮ್ ನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 36 ಮಿಲಿಯನ್ ಜನರು ವೀಕ್ಷಿಸಿದ್ದು 2 ಮಿಲಿಯನ್ ಗಿಂತಲೂ ಹೆಚ್ಚು ಲೈಕ್ ಮಾಡಿದ್ದಾರೆ.