ಜಂಗಲ್ ಸಫಾರಿಯಲ್ಲಿ ಕಾರಿನಲ್ಲಿಂದ ವಿಡಿಯೋ ಮಾಡುವಾಗ ಸಿಂಹ ಮಾಡಿದ್ದೇನು ನೋಡಿ; ಒಳಗಿನ ವ್ಯಕ್ತಿಯ ಮೈ ಬೆವರಿರಬೇಕು.
ಜಂಗಲ್ ಸಫಾರಿಯಲ್ಲಿ ಸಂಚಾರ ಮಾಡುತ್ತಿರುವಾಗ ಅನೇಕ ಮೈ ನವಿರೇಳಿಸುವ ಘಟನೆಗಳು ಪ್ರವಾಸಿಗರ ಜೊತೆಗೆ ನಡೆಯುವುದನ್ನು ಎಷ್ಟೋ ವಿಡಿಯೋಗಳಲ್ಲಿ ಇಲ್ಲಿಯವರೆಗೆ ನೋಡಿದ್ದೇವೆ. ಆದರೆ ಈಗ ಇಲ್ಲಿ ನೋಡುವಂಥ ದೃಶ್ಯ ನೀವು ಇಲ್ಲಿಯವರೆಗೆ ಎಂದೂ ನೊಡಲಿಕ್ಕಿಲ್ಲ ಎಂದು ನನ್ನ ಅನಿಸಿಕೆ.
ಪ್ರಸ್ತುತ ವಿಡಿಯೋ ನೋಡಿದಾಗ ಅಲ್ಲಿ ಮುಂದೆ ಯಾವ ದೃಶ್ಯ ನಡೆದಿರಬೇಕು ಎಂಬ ಯೋಚನೆ ತಲೆಯಲ್ಲಿ ಸುಳಿಯುವದು ನಿಜ. ವಿಡಿಯೋದಲ್ಲಿ ಕಂಡು ಬರುವ ಹಾಗೆ ಜಂಗಲ್ ಸಫಾರಿ ಸಮಯದಲ್ಲಿ ಹೆಣ್ಣು ಸಿಂಹವೊಂದು ಕಾರಿನ ತೀರ ಹತ್ತಿರ ಬಂದು ನಿಂತಿದೆ. ಸಹಜವಾಗಿಯೇ ಶೂಟ್ ಮಾಡುವ ವ್ಯಕ್ತಿ ಕಾರಿನಲ್ಲಿರುವದರಿಂದ ಯಾವುದೇ ರೀತಿಯ ಭೀತಿ ಆವರಿಸುವದಿಲ್ಲ. ಕಾರಣ ಕಾರಿನಲ್ಲಿ ಇರುವದರಿಂದ ತುಂಬಾ ಸೇಫ್ ಎನಿಸುತ್ತದೆ. ಆದರೆ ದುರದೃಷ್ಟ ನೋಡಿ ಹೇಗಿದೆ, ಸಿಂಹವು ತನ್ನ ಬಾಯಿಯಿಂದ ಕಾರಿನ ಡೋರ್ ಸಹಜವಾಗಿ ಓಪನ್ ಮಾಡಿದೆ. ಈ ದೃಶ್ಯ ಬರೀ ನೋಡಿದರೇನೆ ಕೈ ಕಾಲುಗಳು ನಡುಗುತ್ತವೆ. ಇನ್ನು ನಾವೇ ಆ ಸ್ಥಿತಿಯಲ್ಲಿದ್ದರೆ ಏನಾಗುತ್ತಿತ್ತು ಸ್ವಲ್ಪ ಯೋಚಿಸಿ. ಬಹುಶಃ ತೊಟ್ಟ ಬಟ್ಟೆ ಒದ್ದೆಯಾಗುತ್ತಿತ್ತೋ ಏನೋ.
ನೋಡಿ ಈ ವಿಡಿಯೋ…
https://twitter.com/fasc1nate/status/1591405230721273857?t=OhvW4otM2amwQxGF0yp7Kg&s=19
ಕೇವಲ ಹತ್ತೇ ಸೆಕೆಂಡುಗಳ ಈ ವಿಡಿಯೋವನ್ನು ನೋಡಿದ ಮನುಷ್ಯನಿಗೆ ಎಷ್ಟೊಂದು ಅಧೀರನನ್ನಾಗಿ ಮಾಡುತ್ತದೆ ನೋಡಿ. ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಫ್ಯಾಸಿನೇಟಿಂಗ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಶೇರ್ ಮಾಡಿದ ಒಂದೇ ದಿವಸದಲ್ಲಿ 11.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.